Wednesday, March 26, 2025
Homeರಾಜ್ಯಬಿಎಂಟಿಸಿ ದುರಸ್ತಿ ಸಂಚಾರಿ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಬಿಎಂಟಿಸಿ ದುರಸ್ತಿ ಸಂಚಾರಿ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

Minister Ramalinga Reddy launches BMTC repair vehicles

ಬೆಂಗಳೂರು, ಮಾ.24- ಪರಿಸರ ಸ್ನೇಹಿ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ನಿಕ್ ಬಸ್‌ಗಳು ಹೆಚ್ಚು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದ್ದಾರೆ.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ರಸ್ತೆ ಅವಘಡದಲ್ಲಿ ತ್ವರಿತ ನಿವಾರಣೆಗಾಗಿ ಹೊಸದಾಗಿ ಖರೀದಿಸಿರುವ 5 ಸಂಚಾರಿ ದುರಸ್ತಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು.

ಬಿಎಂಟಿಸಿ ಪ್ರಸ್ತುತ 6,835 ಬಸ್ಸುಗಳೊಂದಿಗೆ ಸರಾಸರಿ 5,875 ಅನುಸೂಚಿಗಳನ್ನು ಕಾರ್ಯಾಚರಣೆ ನಡೆಸುತ್ತಿವೆ. ಬಿಎಂಟಿಸಿ ಬಸ್‌ಗಳು ನಗರದ ಎಲ್ಲಾ ಪ್ರದೇಶ ಹಾಗೂ ಉಪನಗರಗಳಿಗೂ ಸಂಚರಿಸುತ್ತಿದ್ದು ಹೆಚ್ಚುವರಿ ಕಾರ್ಯಾಚರಣೆಗೆ ಒಳಪಡುತ್ತಿವೆ.

ಪ್ರಯಾಣಿಕರಿಗೆ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸಲು ಹಾಗೂ ನಗರದಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಎಲೆಕ್ನಿಕ್ ಬಸ್‌ಗಳನ್ನು ಕಾರ್ಯಾಚರಣೆ ಪ್ರಾರಂಭಿಸಿದ್ದು, ಪ್ರಸ್ತುತ 1336 ಎಲೆಕ್ನಿಕ್ ಬಸ್‌ಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಎಲೆಕ್ಟಿಕ್ ಬಸ್‌ಗಳನ್ನು ಸೇರ್ಪಡೆಗೊಳಿಸಲು ಯೋಚಿಸಲಾಗಿದೆ ಎಂದರು.

ನಗರದಲ್ಲಿ ಸಂಚಾರದಟ್ಟಣೆ ಹೆಚ್ಚುತ್ತಿದ್ದು ರಸ್ತೆ ಮಧ್ಯದಲ್ಲಿ ಕೆಲ ಅವಘಡಗಳಿಂದ ಬಸ್ಸಿನ ಚಲನೆಯಲ್ಲಿ ಉಂಟಾಗುವ ಸಣ್ಣ ವಿಳಂಬ ವಾಹನಗಳು ಸಾಲುಗಟ್ಟಿ ನಿಲ್ಲಲು ಕಾರಣವಾಗುತ್ತವೆ.ಇದರಿಂದ ಸಂಚಾರದಟ್ಟಣೆ ಹೆಚ್ಚಾಗಿ ಅಡಚಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ವಲಯ, ಪ್ರಮುಖ ಟಿಟಿಎಂಸಿ, ಬಸ್ ನಿಲ್ದಾಣಗಳಿಗೆ ಕನಿಷ್ಠ 1 ಸಂಚಾರಿ ದುರಸ್ತಿ ವಾಹನ ಅಗತ್ಯವಿರುವುದಾಗಿ ನಿರ್ಧರಿಸಿ ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಎದುರಾಗುವ ಅನನುಕೂಲವನ್ನು ತಡೆಗಟ್ಟಲು ಈ ದುರಸ್ಥಿ ವಾಹನಗಳನ್ನು ಬಳಸಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ಚಾಲ್ತಿಯಲ್ಲಿರುವ 2 ಸಂಚಾರಿ ದುರಸ್ಥಿ ವಾಹನಗಳು ಮಾರತಹಳ್ಳಿ ಹೊರವರ್ತುಲ ರಸ್ತೆ, ಕೆಂಪೇಗೌಡ ಬಸ್ ನಿಲ್ದಾಣ ಸುತ್ತಮುತ್ತಲ ಪ್ರದೇಶಗಳ ವ್ಯಾಪ್ತಿಗೆ ನಿಯೋಜಿಸಲಾಗಿದೆ.ಇವುಗಳ ಜೊತೆಗೆ ಶಿವಾಜಿನಗರ, ಯಶವಂತಪುರ, ಜಯನಗರ, ಬನಶಂಕರಿ, ಸಿಲ್ಕ್ಬೋರ್ಡ್, ನಾಯಂಡಹಳ್ಳಿ ಜಂಕ್ಷನ್ ಹಾಗೂ ಸಮೀಪದ ಇತರ ಪ್ರದೇಶಗಳಿಗೆ ನಿಯೋಜಿಸಲು ಹೆಚ್ಚುವರಿಯಾಗಿ ಮೊದಲ ಹಂತದಲ್ಲಿ 5 ಸಂಚಾರಿ ದುರಸ್ತಿ ವಾಹನಗಳನ್ನು ಖರೀದಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್, ಭದ್ರತೆ ಮತ್ತು ಜಾಗೃತಿ ನಿರ್ದೇಶಕ ಅಬ್ದುಲ್ ಅಹದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES

Latest News