Wednesday, April 2, 2025
Homeಅಂತಾರಾಷ್ಟ್ರೀಯ | Internationalಅಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ಹಾಕ್ತಿನಿ : ಇರಾನ್‌ಗೆ ಟ್ರಂಪ್ ಎಚ್ಚರಿಕೆ

ಅಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ಹಾಕ್ತಿನಿ : ಇರಾನ್‌ಗೆ ಟ್ರಂಪ್ ಎಚ್ಚರಿಕೆ

Missiles: Iran's Response to Donald Trump's Bombing Threat

ವಾಷಿಂಗ್ಟನ್, ಮಾ.31– ಇರಾನ್ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಬಾಂಬ್ ದಾಳಿ ಮಾಡುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.ಎನ್‌ಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, ಇರಾನ್ ಪರಮಾಣು ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಮಾಡಲೇಬೇಕು.

ಇಲ್ಲದಿದ್ದರೆ ಆ ರಾಷ್ಟ್ರದ ಮೇಲೆ ಬಾಂಬ್ ದಾಳಿ ಮಾಡಲು ನಮ್ಮ ಆಡಳಿತ ಹಿಂಜರಿಯುವುದಿಲ್ಲ. ಅಲ್ಲದೇ ಇರಾನ್ ಮೇಲೆ ಹೆಚ್ಚುವರಿ ಸುಂಕ ವಿಧಿಸುವ ಬಗ್ಗೆಯೂ ನಾವು ಚಿಂತನೆ ನಡೆಸುತ್ತೇವೆ. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ ಬಾಂಬ್ ದಾಳಿ ನಡೆಯುತ್ತದೆ. ಅವರು ಒಪ್ಪಂದ ಮಾಡಿಕೊಳ್ಳದಿದ್ದರೆ, ನಾಲ್ಕು ವರ್ಷಗಳ ಹಿಂದೆ ಮಾಡಿದಂತೆ ಅವರ ಮೇಲೆ ಎರಡು ಪಟ್ಟು ಸುಂಕ ವಿಧಿಸುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

2017-21ರ ಮೊದಲ ಅವಧಿಯಲ್ಲಿ ಟ್ರಂಪ್ ಅವರು ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವಿನ 2015 ರ ಒಪ್ಪಂದದಿಂದ ಅಮೆರಿಕವನ್ನು ಹಿಂತೆಗೆದುಕೊಂಡಿದ್ದರು. ಅದು ನಿರ್ಬಂಧಗಳ ಪರಿಹಾರಕ್ಕೆ ಬದಲಾಗಿ ಟೆಹ್ರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಾದ ಮಿತಿಗಳನ್ನು ವಿಧಿಸಿತ್ತು. ಟ್ರಂಪ್ ಅಮೆರಿಕದ ನಿರ್ಬಂಧಗಳನ್ನು ಪುನಃ ಹೇರಿದರು. ಅಂದಿನಿಂದ ಇಸ್ಲಾಮಿಕ್ ಗಣರಾಜ್ಯವು ತನ್ನ ಯುರೇನಿಯಂ ಪುಷ್ಟಿಕರಣ ಕಾರ್ಯಕ್ರಮವನ್ನು ಹೆಚ್ಚಿಸುವಲ್ಲಿ ಒಪ್ಪಿದ ಮಿತಿಗಳನ್ನು ಮೀರಿದೆ. ಒಪ್ಪಂದ ಮಾಡಿಕೊಳ್ಳಿ, ಇಲ್ಲವೇ ಮಿಲಿಟರಿ ಪರಿಣಾಮಗಳನ್ನು ಎದುರಿಸಿ ಎಂಬ ಟ್ರಂಪ್ ಎಚ್ಚರಿಕೆಯನ್ನು ಟೆಹ್ರಾನ್ ಇಲ್ಲಿಯವರೆಗೆ ನಿರ್ಲಕ್ಷಿಸಿದೆ.

ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ (2017-21), ಇರಾನ್ ಮತ್ತು ವಿಶ್ವದ ಪ್ರಮುಖ ರಾಷ್ಟ್ರಗಳ ನಡುವಿನ 2015ರ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದಿತ್ತು. ಈ ಒಪ್ಪಂದವು ಇರಾನ್‌ ಪರಮಾಣು ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತ್ತಾದರೂ, ಇರಾನ್‌ ಗೆ ಕೆಲವು ನಿರ್ಬಂಧಗಳಿಂದ ವಿನಾಯಿತಿ ಕೂಡ ನೀಡಿತ್ತು. ಇದಕ್ಕೆ ಬದಲಾಗಿ ಟ್ರಂಪ್ ಅವರು ಇರಾನ್ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದ್ದರು.

ಪರಮಾಣು ಕಾರ್ಯಕ್ರಮ ಒಪ್ಪಂದದಲ್ಲಿ ಸೂಚಿಸಿದ್ದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ, ಇರಾನ್ ಯುರೇನಿಯಂ ಉತ್ಪಾದನೆ ಮಾಡುತ್ತಿದೆ ಎಂಬುದು ಡೊನಾಲ್ಡ್ ಟ್ರಂಪ್ ಅವರ ಆರೋಪವಾಗಿದೆ. ಆದರೆ ಇರಾನ್ ಈ ಆರೋಪಗಳನ್ನು ನಿರಾಕರಿಸುತ್ತಲೇ ಬಂದಿದ್ದು, ಅಮೆರಿಕದ ದಾಳಿ ಬೆದರಿಕೆಗಳಿಗೆ ಸೊಪ್ಪು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಯಾವುದೇ ಸಂಭಾವ್ಯ ದಾಳಿಯನ್ನು ಎದುರಿಸಲು ಸಿದ್ಧವಿರುವುದಾಗಿಯೂ ಇರಾನ್ ಸ್ಪಷ್ಟಪಡಿಸಿದೆ.

ಇದೀಗ ತಮ್ಮ ಎರಡನೇ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ಅವರು, ಹೊಸ ಪರಮಾಣು ಕಾರ್ಯಕ್ರಮ ಒಪ್ಪಂದಕ್ಕೆ ಸಹಿ ಹಾಕುವಂತೆ ಇರಾನ್ನನ್ನು ಒತ್ತಾಯಿಸುತ್ತಿದ್ದಾರೆ. ಆದರೆ ಇರಾನ್ ಮಾತ್ರ ಅಮೆರಿಕದೊಂದಿಗೆ ಯಾವುದೇ ರೀತಿಯ ಒಪ್ಪಂದವಿಲ್ಲ ಎಂದು ಘೋಷಿಸಿದೆ. ಅಲ್ಲದೇ ಡೊನಾಲ್ಡ್ ಟ್ರಂಪ್ ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಚಿಯನ್ ಸವಾಲು ಕೂಡ ಹಾಕಿದ್ದಾರೆ.

ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಇರಾನ್ ಮೇಲೆ ಗುಪ್ತ ಕಾರ್ಯಸೂಚಿ ಹೊಂದಿರುವ ಆರೋಪ ಮಾಡುತ್ತಿವೆ. ಇರಾನ್ ಹೆಚ್ಚಿನ ಪ್ರಮಾಣದಲ್ಲಿ ಯುರೇನಿಯಂ ಉತ್ಪಾದಿಸುವ ಮೂಲಕ, ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಪ್ರಯತ್ನಿಸುತ್ತಿದೆ ಎಂದು ಈ ದೇಶಗಳು ಆರೋಪಿಸಿವೆ. ಆದರೆ ಇರಾನ್ ಮಾತ್ರ ತನ್ನ ಪರಮಾಣು ಕಾರ್ಯಕ್ರಮ ಕೇವಲ ವಿದ್ಯುತ್ ಉತ್ಪಾದನೆಗೆ ಸೀಮಿತವಾಗಿದೆ ಎಂದುವಾದಿಸುತ್ತಿದೆ.

RELATED ARTICLES

Latest News