Saturday, July 5, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಕಣ್ಮರೆಯಾಗಿದ್ದ ಅರಣ್ಯ ಇಲಾಖೆ ಗಾರ್ಡ್ ಶವವಾಗಿ ಪತ್ತೆ

ಕಣ್ಮರೆಯಾಗಿದ್ದ ಅರಣ್ಯ ಇಲಾಖೆ ಗಾರ್ಡ್ ಶವವಾಗಿ ಪತ್ತೆ

Missing Forest Department guard found dead

ಚಿಕ್ಕಮಗಳೂರು, ಜು.5– ಇತ್ತೀಚಿಗೆ ಕಣ್ಮರೆಯಾಗಿದ್ದ ಅರಣ್ಯ ಇಲಾಖೆಯ ಗಾರ್ಡ್ ಶರತ್‌ನ ಮೃತದೇಹ ಪತ್ತೆಯಾಗಿದೆ.ಶರತ್ ಸಖರಾಯಪಟ್ಟಣದ ಸಮೀಪ ಹೊಸದಾಗಿ ನಿರ್ಮಾಣವಾಗುತ್ತಿರುವ ಟೋಲ್‌ ಗೇಟ್ ಬಳಿಯ ನೀಲಗಿರಿ ಫಾರೆಸ್ಟ್ ತೋಪಿನಲ್ಲಿ ಮೃತದೇಹ ಪತ್ತೆಯಾಗಿದೆ. ಶರತ್‌ನ ಮೃತದೇಹ ಸಂಪೂರ್ಣ ಕೊಳೆತು ಹೋಗಿದೆ.

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದು ಪತ್ತೆಗಾಗಿ ಪೊಲೀಸ್ ಮತ್ತು ಅರಣ್ಯ ಇಲಾಖೆಯವರು ತೀವ್ರ ಪ್ರಯತ್ನ ನಡೆಸಿದ್ದು ದ್ರೋಣ ಕ್ಯಾಮರಾ ಕೂಡ ಬಳಸಿದರೂ ಸುಳಿವು ಸಿಕ್ಕಿರಲಿಲ್ಲ. ಇಂದು ಹೆಚ್ಚು ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸಿದ್ದು ದುರ್ವಾಸನೆ ಬಂದ ಕಡೆ ಹೋಗಿ ನೋಡಿದಾಗ ಶರತ್‌ನ ಮೃತದೇಹ ಪತ್ತೆಯಾಗಿದೆ.

ಕೊಡಗು ಮೂಲದ ಶರತ್ ಕಳೆದ ಆರು ತಿಂಗಳ ಹಿಂದೆ ಚಿಕ್ಕಮಗಳೂರು ಅರಣ್ಯ ವಿಭಾಗಕ್ಕೆ ವರ್ಗಾವಣೆಯಾಗಿ ಬಂದಿದ್ದು ಸದಾ ಕುಡಿತದ ಅಮಲಿನಲ್ಲಿ ಇರುತ್ತಿದ್ದ ಎಂದು ಸಾರ್ವಜನಿಕರು ತಿಳಿಸಿದ್ದಾರೆ.

RELATED ARTICLES

Latest News