ನವದೆಹಲಿ,ಏ.14- ಸ್ವಾತಂತ್ರ ಬಂದಾಗಿನಿಂದ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಹರಿಯಾಣದ ಹಿನಾರ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಸಂವಿಧಾನವನ್ನು ತಮ್ಮ ಸ್ವಂತ ಲಾಭಕ್ಕಾಗಿ ಅಸ್ತ್ರವಾಗಿ ಬಳಸುವ ಮೂಲಕ ಮತ್ತು ಅದನ್ನು ತುಷ್ಟಿಕರಣದ ಸಾಧನವಾಗಿ ಪರಿವರ್ತಿಸುವ ಮೂಲಕ ಕಾಂಗ್ರೆಸ್ ಪಕ್ಷವು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ದೃಷ್ಟಿಕೋನವನ್ನು ದ್ರೋಹ ಬಗೆದಿದೆ ಎಂದಿದ್ದಾರೆ.
ಕಾಂಗ್ರೆಸ್ ನಮ್ಮ ಪವಿತ್ರ ನಂವಿಧಾನವನ್ನು ಅಧಿಕಾರ ಪಡೆಯಲು ಅಸ್ತ್ರವನ್ನಾಗಿ ಪರಿವರ್ತಿಸಿತು. ಅಧಿಕಾರದ ಮೇಲಿನ ತನ್ನ ಹಿಡಿತಕ್ಕೆ ಅಪಾಯವಿದೆ ಎಂದು ಕಾಂಗ್ರೆಸ್ ಭಾವಿಸಿದಾಗಲೆಲ್ಲಾ ಅದು ಸಂವಿಧಾನವನ್ನು ತುಳಿದುಹಾಕಿತು ಎಂದು ಮೋದಿ ವಾಗ್ದಾಳಿ ನಡೆಸಿದರು.