Friday, October 4, 2024
Homeಮನರಂಜನೆಮಿಥುನ್‌ ಚಕ್ರವರ್ತಿಗೆ ಒಲಿದ ಫಾಲ್ಕೆ ಪ್ರಶಸ್ತಿ

ಮಿಥುನ್‌ ಚಕ್ರವರ್ತಿಗೆ ಒಲಿದ ಫಾಲ್ಕೆ ಪ್ರಶಸ್ತಿ

Mithun Chakraborty to receive Dadasaheb Phalke Award

ನವದೆಹಲಿ, ಸೆ 30 (ಪಿಟಿಐ) ಡಿಸ್ಕೋ ಡ್ಯಾನ್ಸರ್‌, ಡಾನ್ಸ್ ಡಾನ್ಸ್ ಚಿತ್ರಗಳ ಮೂಲಕ ಮನೆ ಮಾತಾಗಿದ್ದ ಹಿರಿಯ ನಟ ಮಿಥುನ್‌ ಚಕ್ರವರ್ತಿ ಅವರು ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಶ್ವಿನಿ ವೈಷ್ಣವ್‌ ಅವರು ಎಕ್ಸ್ ನಲ್ಲಿ ಈ ಘೋಷಣೆ ಮಾಡಿದ್ದಾರೆ.

ಮಿಥುನ್‌ ದಾ ಅವರ ಗಮನಾರ್ಹ ಸಿನಿಮೀಯ ಪ್ರಯಾಣವು ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತದೆ! ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಾಗಿ ದಾದಾಸಾಹೇಬ್‌ ಫಾಲ್ಕೆ ಆಯ್ಕೆ ತೀರ್ಪುಗಾರರು ಮಿಥುನ್‌ ಚಕ್ರವರ್ತಿ ಜಿ ಅವರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದ್ದಾರೆ ಎಂದು ಘೋಷಿಸಲು ಗೌರವವಿದೆ ಎಂದು ಸಚಿವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್‌ 8, 2024 ರಂದು ನಡೆಯುವ 70 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಚಕ್ರವರ್ತಿ ಅವರಿಗೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ವೈಷ್ಣವ್‌ ಹೇಳಿದರು.

ಮಣಾಲ್‌ ಸೇನ್‌ ಅವರ 1976 ರ ಚಲನಚಿತ್ರ ಮಗಯಾ ದ ಮೂಲಕ ನಟನೆಯನ್ನು ಪ್ರಾರಂಭಿಸಿದ ಮಿಥುನ್‌ ಅವರು , ಬಾಲಿವುಡ್‌ನಲ್ಲಿ ತಮದೆ ಛಾಪು ಮೂಡಿಸಿ ಹಲವಾರು ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಅಂತಹ ನಟನಿಗೆ ಇದೀಗ ಫಾಲ್ಕೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.ಅವರು ಕಸಂ ಪೈಡಾ ಕರ್ನೆ ವಾಲೆ ಕಿ ಮತ್ತು ಕಮಾಂಡೋ ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

RELATED ARTICLES

Latest News