ಬೆಂಗಳೂರು,ಅ.17- ವಾಲ್ಮೀಕಿ ಜನಾಂಗದ ಸಂವಿಧಾನಬದ್ಧ ಹಣವನ್ನು ನುಂಗಿ ನೀರು ಕುಡಿದ ಆರೋಪಿ ನಾಗೇಂದ್ರನನ್ನು ವಾಲ್ಮೀಕಿ ಜಯಂತಿಯ ಹಿಂದಿನ ದಿನ ಆಲಂಘಿಸಿ ಅಕ್ಕರೆ ಸುರಿಸಿದ್ದು ಎಷ್ಟು ಸರಿ ಸಿದ್ದರಾಮಯ್ಯನವರೇ ? ಎಂದು ಶಾಸಕ ಸುನೀಲ್ ಕುಮಾರ್ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, – ಮಹಾರಾಷ್ಟ್ರ ಚುನಾವಣಾ ಹೊತ್ತಿನಲ್ಲಿ ಇನ್ನು ಯಾವ ನಿಗಮಕ್ಕೆ ಕೊಳ್ಳೆ ಹೊಡೆಯೋಣ ಎಂದು ಚರ್ಚಿಸಲು ಆರೋಪಿ ನಾಗೇಂದ್ರನಿಂದ ಅಭಿನಂದನೆ ಹಾಗೂ ಸಲಹೆ ಪಡೆದಿರೇ ? ಪ್ರಶ್ನಿಸಿದ್ದಾರೆ.
ಎಲ್ಲವೂ ರಾಜ್ಯದ ಜನತೆಯ ಎದುರು ಮುಕ್ತವಾಗಿ ನಡೆದ ಘಟನಾವಳಿಗಳು. ಅಕ್ರಮದ ಸಂಬಂಧ ಜೈಲಿಗೆ ಹೋಗಿ ಬಂದ ಆರೋಪಿಯೊಬ್ಬ ಈಗ ನೇರಾನೇರ ನಿಮ ನಿವಾಸಕ್ಕೆ ಬಂದು ವಿಜಯೋತ್ಸವ ನಡೆಸಿ ಬಂದವರಂತೆ ಸನಾನ ಮಾಡುತ್ತಾರೆಂದರೆ ಏನರ್ಥ? ಈ ಅಕ್ರಮಕ್ಕೆ ನಿಮ ಚಿತಾವಣೆ ಇತ್ತೇ ಹಾಗಾದರೆ ಆಂಧ್ರದ ಚುನಾವಣೆಗೆ ನಿಮ ಬಾಬ್ತಿನಿಂದ ನಾಗೇಂದ್ರ ಎಷ್ಟು ಹಣ ವರ್ಗಾವಣೆ ಮಾಡಿದರು? ಎಂದು ಪ್ರಶ್ನೆ ಮಾಡಿದ್ದಾರೆ.
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ….! ಸಿಎಂ ಸಿದ್ದರಾಮಯ್ಯನವರೇ, ಶಾಸನಸಭೆಯಲ್ಲಿ ಇಡಿ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಹಗರಣ ನಡೆದಿದೆ ಎಂದು ನೀವು ಒಪ್ಪಿಕೊಂಡಿದ್ದು ಸುಳ್ಳೇ ? ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಸಚಿವ ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದು ಸುಳ್ಳೇ ?ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ಜಾರಿ ನಿರ್ದೇಶನಾಲಯ ನಾಗೇಂದ್ರನನ್ನು ಬಂಧಿಸಿದ್ದು ಸುಳ್ಳೇ ? ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.