Friday, November 22, 2024
Homeರಾಷ್ಟ್ರೀಯ | Nationalಪೊಲೀಸ್ ತಂಡದ ಮೇಲೆ ಗುಂಪು ದಾಳಿ, ಎಸ್‍ಐ ಸ್ಥಿತಿ ಗಂಭೀರ

ಪೊಲೀಸ್ ತಂಡದ ಮೇಲೆ ಗುಂಪು ದಾಳಿ, ಎಸ್‍ಐ ಸ್ಥಿತಿ ಗಂಭೀರ

ಸುರೇಂದ್ರನಗರ, ಜ.6- ಬಂಗಾಳದಲ್ಲಿ ಇಡಿ ಅಧಿಕಾರಿಗಳ ಮೇಲೆ ನಡೆದ ದಾಳಿ ಮಾದರಿಯಲ್ಲೇ ಗುಜರಾತಿನ ಸುರೇಂದ್ರನಗರ ಜಿಲ್ಲೆಯ ಜಿಂಜುವಾಡ ಗ್ರಾಮದಲ್ಲಿ ಪೊಲೀಸ್ ತಂಡದ ಮೇಲೆ ಗುಂಪೊಂದು ಹರಿತವಾದ ಆಯುಧಗಳು ಮತ್ತು ದೊಣ್ಣೆಗಳಿಂದ ಹಲ್ಲೇ ನಡೆಸಿರುವ ಘಟನೆ ವರದಿಯಾಗಿದೆ.

ಸಬ್ ಇನ್ಸ್‍ಪೆಕ್ಟರ್ ಕೆಸಿ ದಂಗರ್ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳು ಖಾಸಗಿ ಕಾರಿನಲ್ಲಿ ಜಲಸಿಂಹ್ ಝಾಲಾ ಎಂಬಾತನೊಂದಿಗೆ ಖಾಸಗಿ ಕಾರಿನಲ್ಲಿ ಜಿಂಜುವಾಡಾ ಪೊಲೀಸ್ ಠಾಣೆಗೆ ಹಿಂತಿರುಗುತ್ತಿದ್ದಾಗ ಈ ದಾಳಿ ನಡೆಸಲಾಗಿದೆ. ದಾಳಿ ವೇಳೆ ಪರಾರಿಯಾಗಿದ್ದ ಆರೋಪಿಯನ್ನು ಮತ್ತೆ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜೆಡಿ ಪುರೋಹಿತ್ ತಿಳಿಸಿದ್ದಾರೆ.

ನೈಸ್ ಯೋಜನೆಗೆ ಸ್ವಾದೀನಪಡಿಸಿಕೊಂಡ ಹೆಚ್ಚುವರಿ ಜಮೀನನ್ನು ರೈತರಿಗೆ ಹಿಂದಿರುಗಿಸಿ : ದೇವೇಗೌಡರು

ಗುಂಪು ದಾಳಿಯಲ್ಲಿ ದಂಗರ್ ಗಂಭೀರ ಗಾಯಗೊಂಡು ಅಹಮದಾಬಾದ್‍ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಮತ್ತು ಇಬ್ಬರು ಕಾನ್‍ಸ್ಟೆಬಲ್‍ಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅವರು ಹೇಳಿದರು.
ಜಿಂಜುವಡಾ ನಿವಾಸಿ ಝಲಾ ಒಬ್ಬ ಭೀಕರ ಅಪರಾ ಮತ್ತು ಗಲಭೆ, ಲೂಟಿ ಮತ್ತು ಹಲ್ಲೇಯಂತಹ ವಿವಿಧ ಅಪರಾಧಗಳಿಗಾಗಿ ಈ ಹಿಂದೆ ಬಂಧಿಸಲ್ಪಟ್ಟಿದ್ದ . ಪಟಾನ್ ಜಿಲ್ಲೇಯಲ್ಲಿ ದಾಖಲಾದ ಕಳ್ಳತನದ ಪ್ರಕರಣದಲ್ಲಿ ಬೇಕಾಗಿದ್ದ ಈತನನ್ನು ಪಟಾನ್ ಪೊಲೀಸರು ಅವನನ್ನು ಹಿಡಿಯಲು ಸಾಧ್ಯವಾಗದ ಕಾರಣ, ಅವರು ಸಹಾಯಕ್ಕಾಗಿ ಜಿಂಜುವಾಡ ಪೊಲೀಸರನ್ನು ವಿನಂತಿಸಿದರು ಎಂದು ಉಪ ಎಸ್ಪಿ ಹೇಳಿದರು.

ಕ್ರಿಕೆಟ್ ಆಡುತ್ತಿದ್ದಾಗ ಝಾಲಾ ಅವರನ್ನು ಸುಳಿವಿನ ಮೇರೆಗೆ ಬಂಧಿಸಲಾಯಿತು ಆದರೆ ಅವರ ಸಹಚರರೊಬ್ಬರು ಅವರನ್ನು ಬಿಡುಗಡೆ ಮಾಡಲು ಗುಂಪನ್ನು ಒಟ್ಟುಗೂಡಿಸಿದರು ಎಂದು ಪುರೋಹಿತ್ ಹೇಳಿದರು. ಪಿಎಸ್‍ಐ ಮತ್ತು ಅವರ ತಂಡ ಝಾಲಾ ಸಮೇತ ಕಾರಿನಲ್ಲಿ ಜಿಂಜುವಾಡ ಗ್ರಾಮದ ಪ್ರವೇಶ ದ್ವಾರವನ್ನು ತಲುಪಿದಾಗ ಗುಂಪು ಹರಿತವಾದ ಆಯುಧಗಳು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದೆ.

RELATED ARTICLES

Latest News