Wednesday, April 2, 2025
Homeರಾಷ್ಟ್ರೀಯ | Nationalಮೊಬೈಲ್ ಗೀಳು : ಬಾಲಕಿ ಆತ್ಮಹತ್ಯೆ

ಮೊಬೈಲ್ ಗೀಳು : ಬಾಲಕಿ ಆತ್ಮಹತ್ಯೆ

Mobile obsession: Girl Commits Suicide

ಥಾಣೆ, ಅ.14- ಮೊಬೈಲ್ ಫೋನ್ ನಲ್ಲಿ ಹೆಚ್ಚು ಸಮಯ ಕಳೆದಿದ್ದಕ್ಕಾಗಿ ತಾಯಿ ನಿಂದಿಸಿದ ಹಿನ್ನಲೆಯಲ್ಲಿ ಮಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿ ನಡೆದಿದೆ.

ಅಂಬರ್ನಾಥ್ ಪ್ರದೇಶದ ನಿವಾಸಿಯಾಗಿರುವ 15 ವರ್ಷದ ಬಾಲಕಿ ಇಲಿ ಪಾಷಾಣ ಸೇವಿಸಿದಳು. ನಂತರ ಆಕೆಯನ್ನು ಕುಟುಂಬದವರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು ಆಕೆಯ ಸ್ಥಿತಿ ಗಂಭೀರವಾಗುತ್ತಿದ್ದದ್ದಂತೇ, ಆಕೆಯನ್ನು ನೆರೆಯ ಮುಂಬೈನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು ಆದರೆ ಚಿಕಿತ್ಸೆ -ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಅಮ್ಮನ ಬುದ್ದಿ ಮಾತೇ ಬಾಲಕಿಗೆ ಬೇಸರ ತರಿಸಿ ಆತ್ಮಹತ್ಯೆ ದುಡುಕಿನ ನಿರ್ಧಾರ ಮಾಡಿದ್ದಾಳೆ ಎಂದು ಅಂಬರನಾಥ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೈದ್ಯಕೀಯ ವರದಿ ಆಧರಿಸಿ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿ ಮುಂದಿನ ತನಿಖೆಕೈಗೊಂಡಿದ್ದಾರೆ.

RELATED ARTICLES

Latest News