Thursday, December 5, 2024
Homeಬೆಂಗಳೂರುಮದ್ಯಪಾನ ಮಾಡಿ ವಾಹನ ಚಾಲನೆ : 61 ಪ್ರಕರಣ ದಾಖಲು, ಲೈಸೆನ್ಸ್ ಜಪ್ತಿ

ಮದ್ಯಪಾನ ಮಾಡಿ ವಾಹನ ಚಾಲನೆ : 61 ಪ್ರಕರಣ ದಾಖಲು, ಲೈಸೆನ್ಸ್ ಜಪ್ತಿ

61 cases of drink driving have been registered - license cancel

ಬೆಂಗಳೂರು,ಅ.14– ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಚಾಲಕ ಹಾಗೂ ಸವಾರರ ವಿರುದ್ಧ ಪೂರ್ವ ವಿಭಾಗದ ಸಂಚಾರಿ ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ 61 ಪ್ರಕರಣಗಳನ್ನು ದಾಖಲು ಮಾಡಿದ್ದಾರೆ.

ಅ.10ರಿಂದ 13ರವರೆಗೆ ಈ ವಿಭಾಗದ ಠಾಣಾ ಸರಹದ್ದುಗಳಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು 4,789 ವಾಹನಗಳನ್ನು ತಪಾಸಣೆ ಮಾಡಿ 61 ಪ್ರಕರಣಗಳನ್ನು ದಾಖಲಿಸಿಕೊಂಡು, ಚಾಲನಾ ಪರವಾನಗಿ ಪತ್ರಗಳನ್ನು ಜಪ್ತಿ ಪಡಿಸಿಕೊಂಡು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಗೆ ಅಮಾನತುಪಡಿಸಲು ಕಳುಹಿಸಿಕೊಡಲಾಗಿದೆ.

ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಹಾಗ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.ಮುಂದಿನ ದಿನಗಳಲ್ಲಿಯೂ ಸಹ ವಿಶೇಷ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಸಂಚಾರಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News