Friday, May 3, 2024
Homeಬೆಂಗಳೂರುಬೆಳಿಗ್ಗೆ ಸರಗಳ್ಳತನ-ಸಂಜೆ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಳಿಗ್ಗೆ ಸರಗಳ್ಳತನ-ಸಂಜೆ ಮೊಬೈಲ್ ದರೋಡೆ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು, ಡಿ.26- ಕಳವು ಮಾಡಿದ ವಾಹನವನ್ನೇ ಬಳಸಿಕೊಂಡು ಬೆಳಗಿನ ಜಾವ ಸರ ಹಾಗೂ ಸಂಜೆ ವೇಳೆಯಲ್ಲಿ ಮೊಬೈಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೆಆರ್‍ಪುರ ಠಾಣೆ ಪೊಲೀಸರು ಬಂಧಿಸಿ 6.5 ಲಕ್ಷ ರೂ. ಮೌಲ್ಯದ 2 ಚಿನ್ನದ ಸರಗಳು ಮತ್ತು 30 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ನಗರದ ನಿವಾಸಿಗಳಾದ ರೋಹಿತ್, ಭರತ್ ಮತ್ತು ಅರುಸ್ವಾಮಿ ಬಂಧಿತ ಆರೋಪಿಗಳು.

ಈ ಪ್ರಕರಣದಲ್ಲಿ ಕೆಲವರು ತಲೆಮರೆಸಿಕೊಂಡಿದ್ದು, ಬಂಧನ ಕಾರ್ಯ ಮುಂದುವರೆದಿದೆ. ಆರೋಪಿಗಳು ಬೆಳಗಿನ ಜಾವ ವಾಯುವಿಹಾರಿಗಳು ಹಾಗೂ ಮನೆ ಮುಂದೆ ರಂಗೋಲಿ ಹಾಕುವವರನ್ನು ಗುರಿಯಾಗಿಸಿಕೊಂಡು ಬೆಳಗಿನ ಜಾವ 5.30ರಿಂದ 7.30ರವರೆಗೆ ಸರಗಳ್ಳತನ ಮಾಡುವ ಚಾಳಿ ಹೊಂದಿದ್ದರು. ಒಬ್ಬ ಬೈಕ್ ಚಾಲನೆ ಮಾಡಿದರೆ ಮತ್ತೊಬ್ಬ ಹಿಂದೆ ಕುಳಿತುಕೊಂಡು ಸರಗಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದರು.

ಸಂಜೆ ವೇಳೆ 5.30ರಿಂದ 7.30ರ ಅವಯಲ್ಲಿ ಜನಸಂದಣಿ ಇರುವ ಕಡೆ ಸುತ್ತಾಡುತ್ತಾ ಸಾರ್ವಜನಿಕರಿಂದ ಮೊಬೈಲ್ ಕಸಿದುಕೊಂಡು ಈ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು ಮೂವರನ್ನು ಬಂಧಿಸಿ 6.50 ಲಕ್ಷ ರೂ. ಮೌಲ್ಯದ 2 ಚಿನ್ನದ ಸರಗಳು, ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪೆನಿಯ 30 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಯತ್ನಾಳ್ ಈಗ ಏಕಾಂಗಿ..!

ಇಂತಹ ಯಾವುದಾದರೂ ಕೃತ್ಯಗಳಲ್ಲಿ ಸರ ಹಾಗೂ ಮೊಬೈಲ್ ಕಳೆದುಕೊಂಡಿದ್ದರೆ ನೊಂದವರು ಹೆದರದೆ ಧೈರ್ಯವಾಗಿ ಡಿಸಿಪಿ ವೈಟ್‍ಫೀಲ್ಡ್ ವಿಭಾಗ ಮೊ. ನಂ. 9480801084 ಅಥವಾ ಎಸಿಪಿ 9480801076 ಅಥವಾ ಇನ್ಸ್‍ಪೆಕ್ಟರ್ 9480801221 ಅವರನ್ನು ಸಂಪರ್ಕಿಸಿ ನಿರ್ಭೀತಿಯಿಂದ ದೂರು ನೀಡಬಹುದಾಗಿದೆ.

ವೈಟ್‍ಫೀಲ್ಡ್ ವಿಭಾಗದ ಉಪಪೊಲೀಸ್ ಆಯುಕ್ತರಾದ ಶಿವಕುಮಾರ್ ಅವರ ಮಾರ್ಗದರ್ಶನ ದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾದ ಪ್ರಿಯದರ್ಶಿನಿಈಶ್ವರ್ ಸಾಣೇಕೊಪ್ಪ, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES

Latest News