ಬೆಂಗಳೂರು,ಅ.16- ಬಸ್‌ನಲ್ಲಿ ಪ್ರಯಾಣಿಸುವಾಗ ಮೊಬೈಲ್ ಎಗರಿಸುತ್ತಿದ್ದ ಆರೋಪಿಯೊಬ್ಬನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ಮೌಲ್ಯದ 11 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹೊಸಗುಡ್ಡದಹಳ್ಳಿಯ ನಿವಾಸಿ ಅಲೀವ್ (34) ಬಂಧಿತ ಆರೋಪಿ.
ಕುಂದಲಹಳ್ಳಿ ಗೇಟ್ ಬಳಿ ಇರುವ ಪಿಜಿಯೊಂದರಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಬಸ್‌ನಲ್ಲಿ ಕುಂದಲ ಹಳ್ಳಿಯಿಂದ ಗ್ರಾಫೈಟ್ ಇಂಡಿಯ ಕಡೆಗೆ ಪ್ರಯಾಣ ಮಾಡುತ್ತಿದ್ದಾಗ ಅವರ ಜೇಬಿನಲ್ಲಿದ್ದ ಮೊಬೈಲ್ ಕಳವಾಗಿದೆ. ಈ ಬಗ್ಗೆ ಅವರು ಎಚ್‌ಎಎಲ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮಾರತಹಳ್ಳಿಯ ಸ್ಪೈಸ್ ಗಾರ್ಡನ್ ಬಳಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಕವರ್ ಪರಿಶೀಲಿಸಿದಾಗ ಅದರಲ್ಲಿ 11 ಮೊಬೈಲ್‌ಗಳಿರುವುದು ಕಂಡುಬಂದಿದೆ.
ಆರೋಪಿಯ ಬಂಧನದಿಂದ ಎಚ್‌ಎಎಲ್ ಠಾಣೆಯ 2 ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 9 ಮೊಬೈಲ್ ಫೋನ್‌ಗಳ ಮಾಲೀಕರು ಪತ್ತೆಯಾಗಬೇಕಿದೆ. ಈ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದೆ. ಈ ಕಾರ್ಯಾಚರಣೆಯನ್ನು ಇನ್‌ಸ್ಪೆಕ್ಟರ್ ಅಜರುದ್ದೀನ್ ಮತ್ತು ಸಿಬ್ಬಂದಿ ತಂಡ ಕೈಗೊಂಡು ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.