Friday, April 11, 2025
Homeಬೆಂಗಳೂರುಕುಸಿದ ಮೊಬೈಲ್ ಟವರ್, ತಪ್ಪಿದ ದುರಂತ

ಕುಸಿದ ಮೊಬೈಲ್ ಟವರ್, ತಪ್ಪಿದ ದುರಂತ

ಬೆಂಗಳೂರು, ಡಿ.8- ನೂತನ ಮನೆ ನಿರ್ಮಾಣಕ್ಕಾಗಿ ಪಾಯ ತೊಡುತ್ತಿದ್ದಾಗ ಮೊಬೈಲ್ ಟವರ್ ಕುಸಿದು ಬಿದ್ದಿದ್ದು, ಸಂಭವಿಸಬಹುದಾದ ಬಾರಿ ಅನಾಹುತ ತಪ್ಪಿದೆ.

ಲಗ್ಗೆರೆಯ ಪಾರ್ವತಿ ನಗರದ ಮನೆಯೊಂದರ ಮೇಲೆ ಏರ್‍ಟೇಲ್ ಟವರ್ ಅಳವಡಿಸಲಾಗಿದ್ದು, ಇಂದು ಮಧ್ಯಾಹ್ನ ಪಕ್ಕದಲ್ಲಿದ್ದ ಖಾಲಿ ಸೈಟ್‍ನಲ್ಲಿ ಮನೆ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ಪಾಯ ತೊಡುತ್ತಿದ್ದಾಗ ಸಡಿಲಗೊಂಡು ಏಕಾಏಕಿ ಉರುಳಿ ಬಿದ್ದಿದೆ.

ಬಂಡವಾಳ ಹೂಡಿಕೆ ಸಮಾವೇಶಗಳಿಗಾಗಿ 88 ಕೋಟಿ ಖರ್ಚು

ಈ ವೇಳೆ ಮೊಬೈಲ್ ಟವರ್ ಕುಸಿದು ಬಿದ್ದಿದೆ. ಈ ವೇಳೆ ಟವರ್ ಇದ್ದ ಮನೆಯ ಪಾಯ ಕುಸಿದಿದ್ದುದ್ದರಿಂದ ಕಬ್ಬಿಣದ ಸರಳುಗಳು ಮರದ ಮೇಲೆ ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಒಂದು ವೇಳೆ ಈ ಪ್ರದೇಶದಲ್ಲಿ ಯಾರಾದರೂ ಇದ್ದಿದ್ದರೆ ಭಾರಿ ಅನಾಹುತವೇ ಸಂಭವಿಸುತ್ತಿತ್ತು. ಸುದ್ದಿ ತಿಳಿಯುತ್ತಿದ್ದಂತೆ ನಂದಿನಿ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES

Latest News