Monday, November 11, 2024
Homeರಾಜ್ಯಸದ್ಯದಲ್ಲೇ ಹಾಲಿನ ದರ ಏರಿಕೆ ಸಾಧ್ಯತೆ..?

ಸದ್ಯದಲ್ಲೇ ಹಾಲಿನ ದರ ಏರಿಕೆ ಸಾಧ್ಯತೆ..?

ಬೆಂಗಳೂರು,ಡಿ.8- ಈಗಾಗಲೇ ದರ ಏರಿಕೆಯಿಂದ ಬಸವಳಿದಿರುವ ರಾಜ್ಯದ ಜನತೆಗೆ ಸದ್ಯದಲ್ಲೇ ಮತ್ತೊಂದು ದರ ಏರಿಕೆಯ ಶಾಕ್ ಕಾದಿದೆ. ಏಕೆಂದರೆ, ಒಕ್ಕೂಟಗಳು ನಷ್ಟದಲ್ಲಿರುವ ಕಾರಣ, ಹಾಲಿನ ದರ ಪರಿಷ್ಕರಣೆ ಮಾಡಲು ಕೆಎಂಎಫ್ ಮುಂದಾಗಿದೆ. ಈ ಕುರಿತು ಜನವರಿಯಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಪ್ ಮುಂದಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ನಂದಿನಿ ಹಾಲಿನ ದರ ಹೆಚ್ಚಳ ಮಾಡಿತ್ತು. ಇದೀಗ ಹಾಲಿನ ದರ ಮತ್ತೆ ಹೆಚ್ಚಳ ಮಾಡಲು ಕೆಎಂಎಫ್ ಸಿದ್ದತೆ ಮಾಡಿಕೊಂಡಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಕೆಎಂಎಫ್ ಅಧಿಕಾರಿಗಳ ಮಟ್ಟದಲ್ಲಿ ದರ ಏರಿಕೆ ಕುರಿತು ಚಿಂತನೆ ನಡೆದಿದೆ. ಹಾಲಿನ ದರ ಪರಿಷ್ಕರಣೆಗೆ 14 ಹಾಲು ಒಕ್ಕೂಟದಿಂದ ಕೆಎಂಎಫ್ ಮನವಿ ಬಂದಿದೆ. ಹೀಗಾಗಿ ಅಧಿವೇಶನದಿಂದ ಸಿಎಂ ಬಂದ ಬಳಿಕ ಸಿದ್ದರಾಮಯ್ಯರ ಭೇಟಿ ಮಾಡಿ ನಂದಿನಿ ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಸಿದ್ಧತೆ ಮಾಡಿಕೊಂಡಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲೇ ನಂದಿನಿ ಹಾಲಿನ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲು ಕೆಎಂಎಫ್ ಆಡಳಿತ ಮಂಡಳಿ ತೀರ್ಮಾನಿಸಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರನ್ನು ಜನವರಿ ಆರಂಭದಲ್ಲಿ ಭೇಟಿಯಾಗಲು ಕೆಎಂಎಫ್ ಅಧ್ಯಕ್ಷ, ಎಂಡಿ ನಿರ್ಧರಿಸಿದ್ದಾರೆ. ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂ. ಪ್ರತಿ ಲೀಟರ್‍ಗೆ ದರ ಹೆಚ್ಚಿಸುವಂತೆ ಮನವಿ ಮಾಡಲು ನಿರ್ಧರಿಸಿದೆ. ಕಳೆದ ಆಗಸ್ಟ್ 1 ರಿಂದ ನಂದಿನಿ ಪ್ರತೀ ಲೀಟರ್ ಗೆ 3 ರೂ.ಹೆಚ್ಚಳ ಮಾಡಿತ್ತು. 5 ರೂ ಹೆಚ್ಚಳ ಮಾಡಲು ಮನವಿ ಮಾಡಿದ್ದಕ್ಕೆ ಕೇವಲ ಮೂರು ರೂ.ಹೆಚ್ಚಳ ಮಾಡಿತ್ತು. ಹೀಗಾಗಿ ಲೀಟರ್ ಗೆ 3 ರೂ ಹೆಚ್ಚುವರಿ ಹಣ ರೈತರಿಗೆ ಕೆಎಂಎಫ್ ನೀಡಿತ್ತು.

ಬಂಡವಾಳ ಹೂಡಿಕೆ ಸಮಾವೇಶಗಳಿಗಾಗಿ 88 ಕೋಟಿ ಖರ್ಚು

ಕೆಎಂಎಫ್ ಆರ್ಥಿಕ ನಷ್ಟದ ಹಿನ್ನಲೆ 5 ರೂಪಾಯಿ ಪ್ರತಿ ಲೀಟರ್ ಗೆ ದರ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆದಿದೆ. ಆಗಸ್ಟ್ ಒಂದರಿಂದ ಪ್ರತಿ ಲೀಟರ್ ಗೆ ಮೂರು ರೂಪಾಯಿ ಏರಿಕೆ ಆಗಿತ್ತು. 5 ರೂಪಾಯಿ ಹೆಚ್ಚಳಕ್ಕೆ ಮನವಿ ಮಾಡಿದ್ದಕ್ಕೆ 3 ರೂಪಾಯಿ ಏರಿಕೆ ಮಾಡಲಾಗಿತ್ತು. ಆದರೆ ಒಕ್ಕೂಟಗಳಿಂದ ದರ ಏರಿಕೆಯಾದರೂ ಒಕ್ಕೂಟಗಳ ನಷ್ಟ ಇನ್ನೂ ಸರಿದೂಗಿಲ್ಲ. ಹೀಗಾಗಿ ದರ ಪರಿಷ್ಕರಣೆ ಮಾಡಿ ಎಂದು ಒಕ್ಕೂಟಗಳು ಪಟ್ಟು ಹಿಡಿದಿವೆ.

ಅಲ್ಲದೆ ಕ್ಷೀರ ಭಾಗ್ಯ ಯೋಜನೆಯಡಿ ಕೆಎಂಎಫ್ ಪೂರೈಸುತ್ತಿರುವ ಹಾಲಿನ ಪುಡಿ ದರ ಪ್ರತಿ ಕೆಜಿಗೆ 400 + ಜಿಎಸ್ಟಿ ನೀಡಲು ಮನವಿ ಮಾಡಲಾಗಿದೆ. ಈಗ 300+ ಜಿಎಸ್ಟಿ ನೀಡುತ್ತೀದ್ದೀರ ಅದರಿಂದ ನಷ್ಟವಾಗುತ್ತಿದೆ ಎಂದು ಕೆಎಂಎಫ್ ಹೇಳುತ್ತಿದ್ದರೆ, ಇತ್ತ ಹಾಲಿನ ದರ ಏರಿಕೆಗೆ ರೈತರು ಹಾಗೂ ಹಾಲು ಒಕ್ಕೂಟದಿಂದ ಒತ್ತಡವಿದೆ ಎಂದಿದ್ದಾರೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್. ಉತ್ಪಾದನ ವೆಚ್ಚ ಹೆಚ್ಚಳದಿಂದ ಹೊರೆ ಆಗುತ್ತಿರುವ ಬಗ್ಗೆ ಹಾಲು ಉತ್ಪಾದಕರ ಒಕ್ಕೂಟ ಸಭೆಯಲ್ಲಿ ಅಹವಾಲು ಸಲ್ಲಿಸಿದೆ.

ಇತರ ರಾಜ್ಯಕ್ಕೆ ಹೊಲಿಕೆ ಮಾಡಿದರೆ ನಮ್ಮಲ್ಲಿ ಕಮ್ಮಿಯಿದೆ, ಹಾಗೆಯೇ ಅಮೂಲ್ 10 ತಿಂಗಳಿನಲ್ಲಿ 12 ರೂ.ಹೆಚ್ಚಿಸಿದೆ, ನಾವು 3 ರೂ. ಮಾತ್ರ ಹೆಚ್ಚಿಸಿರುವುದು ಎಂದಿದ್ದಾರೆ. ದರ ಏರಿಕೆ ಬಿಸಿಯಿಂದ ತತ್ತಿರಿಸುತ್ತಿರುವ ಶ್ರೀಸಾಮಾನ್ಯನಿಗೆ ಮತ್ತೆ ಹಾಲಿನ ದರ ಏರಿಕೆಯ ಬಿಸಿ ತಟ್ಟಲಿದೆ. ಇದಕ್ಕೆ ಸರ್ಕಾರ ಕೆಎಂಎಫ್ ದರ ಏರಿಕೆ ಪ್ರಸ್ತಾವನೆಗೆ ಯಾವ ನಿರ್ಧಾರ ಕೈಗೊಳ್ಳುತ್ತೋ? ಕಾದು ನೋಡಬೇಕು.
ಯಾವ್ಯಾವ ಹಾಲಿಗೆ ಎಷ್ಟಿದೆ?

  1. ಟೋನ್ಡ್ ಹಾಲು (ಬ್ಲೂ ಪ್ಯಾಕೆಟ್) 42 ರೂ.
  2. ಹೋಮೋಜಿನೈಸ್ಡ್ ಹಾಲು 43 ರೂ.
  3. ಹೋಮೋಜಿನೈಸ್ಡ್ ಹಾಲು. 47 ರೂ.
  4. ಸ್ಪೆಷಲ್ ಹಾಲು 48 ರೂ.
  5. ಶುಭಂ ಹಾಲು. 48 ರೂ.
  6. ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲು 49 ರೂ.
  7. ಸಮೃದ್ಧಿ ಹಾಲು 53 ರೂ.
  8. ಸಂತೃಪ್ತಿ ಹಾಲು 55 ರೂ.
  9. ಡಬಲ್ಡ್ ಟೋನ್ಡ್ ಹಾಲು 41 ರೂ.
  10. ಮೊಸರು ಪ್ರತಿ ಲೀಟರ್‍ಗೆ 50 ರೂ.
  11. ಮಚ್ಚಿಗೆ 200 ಗ್ರಾಂ 9 ರೂ.
RELATED ARTICLES

Latest News