Sunday, May 5, 2024
Homeಬೆಂಗಳೂರುಇಂದಿರಾ ಕ್ಯಾಂಟಿನ್‍ನಲ್ಲಿ ಚಪಾತಿ, ಮುದ್ದೆ, ಬಸ್ಸಾರು ಭಾಗ್ಯ

ಇಂದಿರಾ ಕ್ಯಾಂಟಿನ್‍ನಲ್ಲಿ ಚಪಾತಿ, ಮುದ್ದೆ, ಬಸ್ಸಾರು ಭಾಗ್ಯ

ಬೆಂಗಳೂರು,ಡಿ.8- ಸಂಕ್ರಾತಿ ಹಬ್ಬದ ನಂತರ ಇಂದಿರಾ ಕ್ಯಾಂಟೀನ್‍ಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಕ್ಯಾಂಟೀನ್‍ಗಳು ಹೈಟೆಕ್ ಸ್ವರ್ಶ ಪಡೆದ ನಂತರ ಗ್ರಾಹಕರಿಗೆ ಮುದ್ದೆ, ಬಸ್ಸಾರು ಭಾಗ್ಯ ದೊರೆಯಲಿದೆ. ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ವೇಳೆ ಮುದ್ದೆ, ಚಪಾತಿ ಊಟ ನೀಡಲು ತೀರ್ಮಾನಿಸಲಾಗಿದೆ.

ಕ್ಯಾಂಟಿನ್‍ಗಳಿಗೆ ಬರುವ ಬಹುತೇಕ ಗ್ರಾಹಕರು ಹಿರಿಯ ನಾಗರಿಕರೇ ಆಗಿರುವುದರಿಂದ ಅಂತವರಿಗೆ ಸಕ್ಕರೆ ಕಾಯಿಲೆ ಇರುವುದು ಮಾಮೂಲಾಗಿರುವುದನ್ನುಮನಗಂಡು ಅನ್ನದ ಬದಲಿಗೆ ಮುದ್ದೆ, ಚಪಾತಿ ಭಾಗ್ಯ ಕಲ್ಪಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ವೇಳೆ ಮುದ್ದೆ, ಚಪ್ಪಾತಿ ಊಟದ ವಸ್ಥೆ ಕಲ್ಪಿಸಲು ಅವಕಾಶ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಿಬಿಎಂಪಿಯ ಈ ನಿರ್ಧಾರಕ್ಕೆ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ನೀಡಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಸಂಕ್ರಾತಿ ನಂತರ ಮುದ್ದೆ, ಬಸ್ಸಾರು ಊಟದ ವ್ಯವಸ್ಥೆ ಜಾರಿಯಾಗುವ ನಿರೀಕ್ಷೆಯಿದೆ.

ಮೋಡ ಬಿತ್ತನೆಯಿಂದ ಜನರಿಗೆ ಅನುಕೂಲವಾಗಲಿದೆ : ಡಿಕೆಶಿ

ಈಗಾಗಲೇ ಹೊಸ ಟೆಂಡರ್ ಕರೆದಿರುವ ಬಿಬಿಎಂಪಿ ಅಧಿಕಾರಿಗಳು ಇಂದಿರಾ ಕ್ಯಾಂಟಿನ್‍ಗಳಲ್ಲಿ ಮುದ್ದೆ, ಚಪ್ಪಾತಿ ಊಟದ ಉಲ್ಲೇಖ ಮಾಡಿದ್ದಾರೆ. ಈಗಾಗಿ ಹೊಸ ವರ್ಷದಿಂದ ಇಂದಿರಾ ಕ್ಯಾಂಟೀನ್ ನಲ್ಲಿ ಮುದ್ದೆ.ಬಸಾರು.ಚಪ್ಪಾತಿ ಲಭ್ಯ ಎನ್ನಲಾಗಿದೆ.

ಇದರ ಜತೆಗೆ ಇಂದಿರಾ ಕ್ಯಾಂಟಿನ್ ಗ್ರಾಹಕರ ಸಂಖ್ಯೆಯಲ್ಲಿ ಗೋಲ್‍ಮಾಲ್ ನಡೆಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಬಿಲ್ ಗಳ ಡಿಜಿಟಿಕರಣ ಹಾಗೂ ಪಾರದರ್ಶಕ ವ್ಯವಸ್ಥೆ ಜಾರಿಗೆ ತರಲು ಬಿಬಿಎಂಪಿ ಮುಂದಾಗಿದೆ.

ನಗರದ ಯಾವುದೇ ಇಂದಿರಾ ಕ್ಯಾಂಟೀನ್ ನಲ್ಲಿ ಗ್ರಾಹಕರು ಊಟ.ತಿಂಡಿ ಕೋಪನ್ ಪಡೆದರೆ ನೇರವಾಗಿ ಕೇಂದ್ರ ಕಛೇರಿಗೆ ಮಾಹಿತಿ ಬರಲಿದೆ ಇದಕ್ಕಾಗಿ ಪ್ರತ್ಯೇಕ ಅ್ಯಪ್ ಅಭಿವೃದ್ಧಿ ಗೂ ಬಿಬಿಎಂಪಿ ಮನಸು ಮಾಡಿದೆ.

RELATED ARTICLES

Latest News