Monday, November 11, 2024
Homeರಾಜ್ಯಏಪ್ರಿಲ್‍ನಿಂದ ಬೆಂಗಳೂರಿನ ಎಲ್ಲ ಮನೆಗಳಿಗೂ ಕಾವೇರಿ ನೀರು

ಏಪ್ರಿಲ್‍ನಿಂದ ಬೆಂಗಳೂರಿನ ಎಲ್ಲ ಮನೆಗಳಿಗೂ ಕಾವೇರಿ ನೀರು

ಬೆಂಗಳೂರು,ಡಿ.8- ಇನ್ನು ಕೆಲವೇ ದಿನಗಳಲ್ಲಿ ನಗರದ ಎಲ್ಲ ಮನೆಗಳಿಗೂ ಕಾವೇರಿ ನೀರು ಸರಬರಾಜಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕಾವೇರಿ 5ನೇ ಹಂತದ ಯೋಜನೆ ಏಪ್ರಿಲ್ ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇರುವುದರಿಂದ ನಗರದ ಎಲ್ಲ ಮನೆಗಳಿಗೂ ಏಪ್ರಿಲ್ ನಿಂದ ಕಾವೇರಿ ನೀರು ಪೂರೈಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಜಲ ಮಂಡಳಿ ಅಧ್ಯಕ್ಷ ರಾಮ್‍ಪ್ರಸಾತ್ ಮನೋಹರ್ ಭರವಸ ನೀಡಿದ್ದಾರೆ.

ಸದ್ಯ ಕಾವೇರಿ 1,2,3,4 ಹಂತಗಳಲ್ಲಿ ನಗರದ ಜನರ ಕುಡಿಯುವ ನೀರಿನ ದಾಹ ನೀಗಿಸಲಾಗುತ್ತಿದ್ದು, ಐದನೇ ಹಂತದ ಕಾಮಗಾರಿ ಪೂರ್ಣಗೊಂಡ ಕೂಡಲೆ ಎಲ್ಲರಿಗೂ ಕಾವೇರಿ ನೀರು ಸರಬರಾಜು ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಬಂಡವಾಳ ಹೂಡಿಕೆ ಸಮಾವೇಶಗಳಿಗಾಗಿ 88 ಕೋಟಿ ಖರ್ಚು

ನಾಲ್ಕು ಹಂತದಿಂದ ಪ್ರತಿ ನಿತ್ಯ 135 ಕೋಟಿ ಲೀಟರ್ ನೀರು ನಗರಕ್ಕೆ ನೀರು ಪೂರೈಕೆಯಾಗುತ್ತಿದ್ದರೂ ನಗರದಲ್ಲಿ ನಿತ್ಯ 75 ಕೋಟಿ ಲೀಟರ್ ಕೊರತೆ ಕಂಡು ಬಂದಿದೆ. ನೀರಿನ ಕೊರತೆ ನೀಗಿಸಲು ಏಪ್ರಿಲ್ ನಿಂದ ಹೆಚ್ಚುವರಿ ವಾರ್ಷಿಕ 10 ಟಿಎಂಸಿ ನೀರು ಪಡೆದುಕೊಳ್ಳುವ ಕಾವೇರಿ 5 ನೇ ಹಂತದ ಯೋಜನೆಗೆ ಸಚಿವ ಸಂಪುಟದ ಅನುಮೋದನೆ ದೊರೆತಿದೆ.

ಕಾವೇರಿ 5 ನೇ ಹಂತದ ಯೋಜನಾ ಕಾಮಗಾರಿ ಏಪ್ರಿಲ್ ನಲ್ಲಿ ಮುಕ್ತಾಯ ಹೀಗಾಗಿ ಏಪ್ರಿಲ್ ನಿಂದ ಬೆಂಗಳೂರು ನಗರಕ್ಕೆ ಹರಿದು ಬರಲಿದೆ ಹೆಚ್ಚುವರಿ ಕಾವೇರಿ ನೀರು ಹರಿದುಬರಲಿದೆ. ಕೋವಿಡ್‍ನಿಂದ ಸಾಕಷ್ಟು ವಿಳಂಬವಾಗಿದ್ದ ಕಾವೇರಿ 5ನೇ ಹಂತದ ಕಾಮಗಾರಿ ಇದೀಗ ಮುಕ್ತಾಯದ ಹಂತಕ್ಕೆ ಬಂದಿರುವುದರಿಂದ ನಗರದ ಹೊರ ವಲಯಗಳ 110 ಹಳ್ಳಿಗಳಿಗೂ ಕಾವೇರಿ ನೀರು ಸರಬರಾಜಗಲಿದೆ.

RELATED ARTICLES

Latest News