ವಾಷಿಂಗ್ಟನ್, ಅ 16-ಭಾರತ ತನ್ನ ಮಿಲಿಟರಿಯನ್ನು ಆಧುನೀಕರಿಸುವ ಮೂಲಕ ಬೇರೆ ದೇಶಗಳ ಮೇಲಿನ ಅವಲಂಭನೆಯನ್ನು ಕಡಿಮೆ ಮಾಡಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಉನ್ನತ ಗುಪ್ತಚರ ಅಧಿಕಾರಿ ಹೇಳಿದ್ದಾರೆ. ಜಾಗತಿಕ ನಾಯಕನಾಗಿ ಭಾರತವು ತನ್ನನ್ನು ತಾನು ಪ್ರದರ್ಶಿಸಿಕೊಂಡಿರುವುದನ್ನು ಗಮನಿಸಿದರೆ ಚೀನಾದೊಂದಿಗೆ ಸ್ಪರ್ಧಿಸಲು ಮತ್ತು ಅದರ ನಿಯಂತ್ರಣ ಕಡಿಮೆ ಮಾಡಲು ಮುಂದಾಗಿದೆ. ಪ್ರಮುಖವಾಗಿ ರಷ್ಯಾದಿಂದ ಸೇನಾ ಉಪಕರಣಗಳ ಅವಲಂಬನೆ ಗಣನೀಯ ಇಳಿದಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಭಾರತ ಜಿ- 20 ರ ಆರ್ಥಿಕ ಶೃಂಗಸಭೆಯನ್ನು ಆಯೋಜಿಸುವ ಮೂಲಕ ಜಾಗತಿಕ ನಾಯಕನಾಗಿ ತನ್ನನ್ನು ತಾನು ಪ್ರದರ್ಶಿಸಿದೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಾದ್ಯಂತ ಚೀನಾ ಅಕ್ರಮಣಕಾರಿ ಚಟುವಟಿಕೆಯನ್ನು ಎದುರಿಸಲು ಹೆಚ್ಚಿನ ಶಕ್ತಿ ಪ್ರದರ್ಶಿಸಿದೆ ಎಂದು ಲೆಫ್ಟಿನೆಂಟ್ ಜನರಲ್ ಜೆಫ್ರಿ ಕ್ರೂಸ್‍ಅವರು ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿಯ ನಿರ್ದೇಶಕರು, ಹೌಸ್ ಆಮ್ರ್ಡ್ ಸರ್ವಿಸಸ್ ಕಮಿಟಿಯ ಸದಸ್ಯರಿಗೆ ನೀಡಿರುವ ವರದಿಯಲ್ಲಿ ಹೇಳಿದ್ದಾರೆ. ಚೀನಾಗೆ ಸಂಭಂದಿತ ಗುಪ್ತಚರ ಮತ್ತು ವಿಶೇಷ ಕಾರ್ಯಾಚರಣೆಗಳ ಉಪಸಮಿತಿಯ ಸಭೆಯಲ್ಲಿ ಈ ವಿವಯ ಪ್ರಸ್ತಾಪಿಸಲಾಗಿದೆ.
ಭಾರತವು ಇಂಡೋ-ಪೆಸಿಫಿಕ್‍ನಲ್ಲಿ ಚೀನಾದ ಸಮುದ್ರದ ಹಕ್ಕಿನ ಪ್ತತಿಪಾದನೆ ನಡುವೆ ಪ್ರಮುಖವಾಗಿ ಫಿಲಿಫೇನ್ಸ್‍ಗೆ ತರಬೇತಿ ಮತ್ತು ರಕ್ಷಣಾ ಸಾಮಗ್ರಿ ಮಾರಾಟದ ಮೂಲಕ ಹಿಡಿತ ಸಾಧಿಸಿದೆ.ಅಮೆರಿಕ , ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಜಪಾನ್‍ನೊಂದಿಗೆ ಆಳವಾದ ಸಹಕಾರ ಪಾಲುದಾರಿಕೆಯನ್ನು ಹೊಂದಿದೆ ಎಂದು ಅವರು ಹೇಳಿದರು.
ಇದರ ನಡುವೆ ಕಳೆದ 2023 ರಲ್ಲಿ, ಚೀನಾದೊಂದಿಗೆ ಸ್ರ್ಪಧಿಸಲು ಭಾರತವು ತನ್ನ ಮಿಲಿಟರಿಯನ್ನು ಆಧುನೀಕರಿಸಲು ಕ್ರಮಗಳನ್ನು ತೆಗೆದುಕೊಂಡಿದೆ ಇದ್ದಕ್ಕೆ ಸಾಟಿಯಾಗಿ ತನ್ನ ಮೊದಲ ದೇಶೀಯ ವಿಮಾನವಾಹಕ ನೌಕೆಯನ್ನುತಯಾರಿಸಿದೆ ಮತ್ತು ಪ್ರಮುಖ ರಕ್ಷಣಾ ತಂತ್ರಜ್ಞಾನಗಳ ವರ್ಗಾವಣೆಯ ಕುರಿತು ಹಲವಾರು ಪಾಶ್ಚಿಮಾತ್ಯ ದೇಶಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಕ್ರೂಸ್ ಹೇಳಿದರು.
ಪ್ರಸ್ತುತ ರಾಷ್ಟ್ರೀಯ ಸಂಸತ್ತಿನ ಚುನಾವಣೆ ನಡೆಯುತ್ತಿದೆ ದೇಶ ಭದ್ರಪಡಿಸುವುದು, ಆರ್ಥಿಕ ಬೆಳವಣಿಗೆಯನ್ನು ಕಾಪಾಡಿಕೊಳ್ಳುವುದು ಮತ್ತು ಅದರ ಮಿಲಿಟರಿ ಆಧುನೀಕರಣದ ಪ್ರಯತ್ನದ ಭಾಗವಾಗಿ ಮೇಕ್ ಇನ್ ಇಂಡಿಯಾ ಉಪಕ್ರಮವನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಬಗ್ಗೆ ಭಾರತವು ತನ್ನ ತಟಸ್ಥ ನಿಲುವನ್ನು ಉಳಿಸಿಕೊಂಡಿದೆ.ಆದರು ರಷ್ಯಾ ಮಾತ್ರ ಭಾರತ ಅತ್ಯಂತ ಗಣನೀಯ ರಕ್ಷಣಾ ಪಾಲುದಾರನಾಗಿ ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.