Friday, May 17, 2024
Homeರಾಜ್ಯಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಬಿಜೆಪಿಯ ಎಲ್ಲಾ ನಾಯಕರಿಗೂ ಗೊತ್ತಿತ್ತು: ರಾಹುಲ್ ಗಾಂಧಿ

ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಬಿಜೆಪಿಯ ಎಲ್ಲಾ ನಾಯಕರಿಗೂ ಗೊತ್ತಿತ್ತು: ರಾಹುಲ್ ಗಾಂಧಿ

ಶಿವಮೊಗ್ಗ,ಮೇ.2- ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಸಂವಿಧಾನದ ಮೇಲೆ ಆಕ್ರಮಣ ಮಾಡಿದ್ದು, ಇದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕೆಂಬುದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ ಅವರು, ದಲಿತರು, ಹಿಂದುಳಿದ ವರ್ಗದವರು, ಆದಿವಾಸಿಗಳು, ಶೋಷಿತರ ಪರವಾಗಿ ಮಾತನಾಡುವವರು ನಕ್ಸಲರು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಹೇಳಿದ್ದಾರೆ. ಈ ಮೂಲಕ ಸಂವಿಧಾನದ ಮೇಲೆ ಆಕ್ರಮಣ ಮಾಡಲಾಗಿದೆ ಎಂದು ಹೇಳಿದರು.

ಹಾಸನದ ಎನ್‍ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 400 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಇದು ಒಂದು ಲೈಂಗಿಕ ಹಗರಣವಲ್ಲ. ಇದೊಂದು ಸಮೂಹ ಅತ್ಯಾಚಾರ ಪ್ರಕರಣವಾಗಿದೆ. ಅಂತಹ ವ್ಯಕ್ತಿಯ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಮತಯಾಚನೆ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರಿಗೆ ನೀಡಿದ ಮತ ನನಗೆ ನೀಡಿದಂತೆ ಎಂದು ಹೇಳಿದ್ದಾರೆ. ಈ ಕಾರಣಕ್ಕಾಗಿ ಪ್ರಧಾನಿ ಮತ್ತು ಬಿಜೆಪಿಯವರು ರಾಜ್ಯ ಮತ್ತು ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಪ್ರಜ್ವಲ್ ರೇವಣ್ಣ ಅತ್ಯಾಚಾರಿ ಎಂದು ಬಿಜೆಪಿಯ ಎಲ್ಲಾ ನಾಯಕರಿಗೂ ಗೊತ್ತಿತ್ತು. ಆದರೂ ಆತನೊಂದಿಗೆ ಪ್ರಧಾನಿ ವೇದಿಕೆ ಹಂಚಿಕೊಂಡಿದ್ದಾರೆ. ಮತಯಾಚನೆ ಮಾಡಿದ್ದಾರೆ. ಈ ಮೂಲಕ ದೇಶದ ಪ್ರತಿಯೊಬ್ಬ ಮಹಿಳೆಗೂ ಅಪಮಾನ ಮಾಡಿದ್ದಾರೆ. ಇದಕ್ಕಾಗಿ ನರೇಂದ್ರ ಮೋದಿ ಅಮಿತ್ ಶಾ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರೂ ದೇಶದ ಮಹಿಳೆಯರಿಗೆ ಕೈ ಮುಗಿದು ತಲೆಬಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಜಗತ್ತಿನಲ್ಲೇ ಇಂತಹ ಘಟನೆಯನ್ನು ನೋಡಿರಲಿಲ್ಲ. ವಿಶ್ವದಲ್ಲೇ ಸಮೂಹ ಅತ್ಯಾಚಾರಿಯ ಪರವಾಗಿ ಪ್ರಧಾನಿ ಮತಯಾಚಿಸಿದ್ದಾರೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ಬಿಜೆಪಿಯವರಿಗೆ ಅಧಿಕಾರ ಬೇಕು ಎಂದಾದರೆ ಅವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇದು ಅವರ ಸಿದ್ಧಾಂತ ಕೂಡ ಎಂದು ಕಿಡಿಕಾರಿದರು.

ಪ್ರಧಾನಿಯವರ ಬಳಿ ಗುಪ್ತಚರ ಸಂಸ್ಥೆ, ವಿದೇಶಾಂಗ ಸಚಿವಾಲಯ ಸೇರಿದಂತೆ ಹಲವಾರು ಸಂಸ್ಥೆಗಳಿದ್ದರೂ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಸರ್ಕಾರ ಈ ಹಗರಣದಲ್ಲಿ ನಿಷ್ಪಕ್ಷಪಾತವಾದ ಕ್ರಮಗಳನ್ನು ಕೈಗೊಂಡು ಸಂತ್ರಸ್ತರಿಗೆ ನ್ಯಾಯ ದೊರಕಿಸಲು ಬದ್ಧವಾಗಿದೆ. ಜನರು ಬದಲಾವಣೆ ಬಯಸುವ ಸಮಯ ಬಂದಿದೆ ಎಂದರು.

ಕಳೆದ 10 ವರ್ಷಗಳಿಂದಲೂ ಕೇವಲ 22 ಜನರಿಗಾಗಿ ಮೋದಿ ಕೆಲಸ ಮಾಡಿದ್ದಾರೆ. ಬಜೆಟ್‍ನ ಹಣವನ್ನು ಅದಾನಿ ಅಂಬಾನಿಯಂತಹ ಜನರ ಜೇಬಿಗೆ ಹಾಕಿದ್ದಾರೆ. ಅವರ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ಮೋದಿ ಕೆಲವೇ ವ್ಯಕ್ತಿಗಳನ್ನು ಕೋಟ್ಯಾೀಶರರನ್ನಾಗಿ ಮಾಡುತ್ತಿದ್ದರೆ, ನಮ್ಮ ಉದ್ದೇಶ ದೇಶದ ಪ್ರತಿಯೊಬ್ಬರನ್ನೂ ಲಕ್ಷಾಪತಿಗಳನ್ನಾಗಿ ಮಾಡುವುದು ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಪಂಚಖಾತ್ರಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದೆ. ಗೃಹಲಕ್ಷ್ಮಿಯ ಮಾದರಿಯಲ್ಲೇ ರಾಷ್ಟ್ರಮಟ್ಟದಲ್ಲಿ ಮಹಾಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ನಾವು ಅಕಾರಕ್ಕೆ ಬರುತ್ತಿದ್ದಂತೆ ಇದನ್ನು ಅನುಷ್ಠಾನಕ್ಕೆ ತಂದು ದೇಶದ ಪ್ರತಿ ಬಡ ಕುಟುಂಬಕ್ಕೂ ಆರ್ಥಿಕ ನೆರವು ನೀಡಲು ಈಗಾಗಲೇ ಪಟ್ಟಿ ಸಿದ್ಧಗೊಳಿಸಲಾಗುತ್ತಿದೆ. ಪ್ರತಿ ಕುಟುಂಬದಿಂದಲೂ ಒಬ್ಬ ಮಹಿಳೆಯ ಹೆಸರನ್ನು ಪಡೆದುಕೊಳ್ಳಲಾಗುತ್ತಿದ್ದು, ಆಕೆಯ ಖಾತೆಗೆ ವರ್ಷಕ್ಕೆ 1 ಲಕ್ಷ ರೂ.ಗಳನ್ನು ಪ್ರತಿ ತಿಂಗಳು 8,500 ರೂ.ಗಳನ್ನು ಬ್ಯಾಂಕ್ ಖಾತೆಗೆ ನೇರವಾಗಿ ಪಾವತಿಸಲಾಗುವುದು. ರಾಜ್ಯದ ಮಹಿಳೆಯರಿಗೆ ಗೃಹಲಕ್ಷ್ಮಿಯ ಫಲಾನುಭವಿಗಳಿಗೆ ವಾರ್ಷಿಕ 24 ಸಾವಿರ ರೂ.ಗಳ ಜೊತೆಗೆ ಮಹಾಲಕ್ಷ್ಮಿಯ 1 ಲಕ್ಷ ರೂ. ಸೇರಿ ವರ್ಷಕ್ಕೆ 1.24 ಲಕ್ಷ ರೂ. ಪಾವತಿಯಾಗಲಿದೆ ಎಂದು ಹೇಳಿದರು.

ಯುವನಿಧಿ ಯೋಜನೆಯಡಿ ರಾಜ್ಯದ ಪದವೀಧರ ನೌಕರರಿಗೆ ತಿಂಗಳಿಗೆ 3 ಸಾವಿರ ರೂ. ದೊರೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಯುವನ್ಯಾಯ ಯೋಜನೆಯಡಿ ವರ್ಷಕ್ಕೆ ಒಂದುಲಕ್ಷ ರೂ. ನೀಡಲಾಗುತ್ತಿದ್ದು, ತರಬೇತಿಯೊಂದಿಗೆ ಉದ್ಯೋಗ ಖಾತ್ರಿ ಕೂಡ ಒದಗಿಸಲಾಗುವುದು ಎಂದರು.

RELATED ARTICLES

Latest News