Sunday, September 8, 2024
Homeರಾಜ್ಯಚುನಾವಣಾ ಕಣದಲ್ಲಿ ಜೋರಾಗೇ ಹರಿದಾಡ್ಡುತ್ತಿದೆ ಹಣ ಮತ್ತು ಉಡುಗೊರೆಗಳು

ಚುನಾವಣಾ ಕಣದಲ್ಲಿ ಜೋರಾಗೇ ಹರಿದಾಡ್ಡುತ್ತಿದೆ ಹಣ ಮತ್ತು ಉಡುಗೊರೆಗಳು

ಬೆಂಗಳೂರು,ಏ.8- ಪ್ರಸಕ್ತ ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಅಬಕಾರಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ ಅಧಿಕಾರಿಗಳು ಹಾಗೂ ಪೊಲೀಸರು ನಡೆಸಿದ ತಪಾಸಣೆ ಸಂದರ್ಭದಲ್ಲಿ ರಾಜ್ಯದಲ್ಲಿ 2,77,59,00,168 ರೂ. ಮೌಲ್ಯದ ನಗದು, ಮದ್ಯ, ಡ್ರಗ್ಸ್, ಚಿನ್ನಾಭರಣ ಹಾಗೂ ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಿದ್ದಾರೆ.

ಲೋಕಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾದ ಮಾ.16 ರಿಂದ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅಂದಿನಿಂದ ನಿನ್ನೆಯವರೆಗೆ ಈ ಪ್ರಮಾಣದ ಜಪ್ತಿ ಮಾಡಲಾಗಿದೆ. ಪೊಲೀಸ್, ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ಒಟ್ಟು 57,65,83,037 ರೂ. ಮೌಲ್ಯದ ಚಿನ್ನ, ಬೆಳ್ಳಿ, ವಜ್ರ, ಉಚಿತ ಉಡುಗೊರೆ, ನಗದು, ಮದ್ಯ, ಡ್ರಗ್ಸ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಇಲಾಖೆ 1,43,10,75,607 ರೂ. ಮೌಲ್ಯದ ಮದ್ಯ, ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದರೆ, ಆದಾಯ ತೆರಿಗೆ ಇಲಾಖೆ ಒಟ್ಟು 10,98,20,120 ರೂ. ಮೌಲ್ಯದ ನಗದು, ಚಿನ್ನ, ವಜ್ರಾಭರಣಗಳನ್ನು ಜಪ್ತಿ ಮಾಡಿದೆ. ವಾಣಿಜ್ಯ ತೆರಿಗೆ ಇಲಾಖೆಯು 65,84,21,404 ರೂ. ಮೌಲ್ಯದ ಚಿನ್ನ, ಉಚಿತ ಉಡುಗೊರೆ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ನೀತಿ ಸಂಹಿತೆ ಜಾರಿಗೆ ಬಂದಂದಿನಿಂದ ನಿನ್ನೆಯವರೆಗೆ 35,61,95,342 ರೂ. ನಗದನ್ನು 1.43 ಕೋಟಿ ರೂ. ಮೌಲ್ಯದ ಮದ್ಯ, 1.51 ಕೋಟಿ ರೂ. ಮೌಲ್ಯದ ಡ್ರಗ್ಸ್ 9.48 ಕೋಟಿ ರೂ. ಮೌಲ್ಯದ ಚಿನ್ನ, 27.23 ಲಕ್ಷ ಮೌಲ್ಯದ ಬೆಳ್ಳಿ, 9 ಲಕ್ಷ ಮೌಲ್ಯದ ವಜ್ರಾಭರಣ, 71.74 ಕೋಟಿ ರೂ. ಮೌಲ್ಯದ ಉಚಿತ ಉಡುಗೊರೆಗಳನ್ನು ಜಪ್ತಿ ಮಾಡಲಾಗಿದೆ.ಜಪ್ತಿ ಮಾಡಲಾದ ನಗದು, ವಸ್ತುಗಳಿಗೆ ಸಂಬಂಧಿಸಿದಂತೆ 1384 ಎಫ್‍ಐಆರ್‍ಗಳನ್ನು ಈತನಕ ದಾಖಲಿಸಲಾಗಿದೆ.

ಅಲ್ಲದೆ, ಬೆಂಗಳೂರು ನಗರ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ತಂಡದವರು 4 ಕೋಟಿ ರೂ. ಮೌಲ್ಯದ 4 ಕೆ.ಜಿ. ಡ್ರಗ್ಸ್ ಅನ್ನು ಶೆಟ್ಟಿಹಳ್ಳಿಯಲ್ಲಿ ವಶಪಡಿಸಿಕೊಂಡಿದ್ದಾರೆ. ಕ್ಷಿಪ್ರ ಪಡೆಯವರು ಜೇವರ್ಗಿಯಲ್ಲಿ 18,200 ಕೆ.ಜಿ. ಅಡಿಕೆ ಇದ್ದ 260 ಚೀಲಗಳನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 19,87,440 ಆಗಿದೆ ಎಂದು ಅಂದಾಜಿಸಲಾಗಿದೆ.

ಶಿವಮೊಗ್ಗದ ಸೀಗೆಹಟ್ಟಿಯಲ್ಲಿ 12,50,000 ರೂ. ಮೌಲ್ಯದ ಬಟ್ಟೆ, ಸ್ಟೀಲ್ ಮತ್ತು ಎಲೆಕ್ಟ್ರಿಕ್ ವಸ್ತುಗಳನ್ನು ಅಕ್ರಮ ದಾಸ್ತಾನು ಮಾಡಿದ್ದ ಆರೋಪದ ಮೇಲೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ತಂಡದವರು ವಶಪಡಿಸಿಕೊಂಡಿದ್ದಾರೆ.

ಸ್ಥಿರ ಕಣ್ಗಾವಲು ತಂಡದವರು ಮೈಸೂರು ರೈಲ್ವೆ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ 11,59,235 ರೂ. ಮೌಲ್ಯದ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.ಅಬಕಾರಿ ಇಲಾಖೆಯವರು 9,54,31,134 ರೂ. ಮೌಲ್ಯದ 56,817.3 ಲೀ ಮದ್ಯವನ್ನು ಹಾಸನ ಲೋಕಸಭಾ ಕ್ಷೇತ್ರದಲ್ಲಿ ವಶಪಡಿಸಿಕೊಂಡಿದ್ದಾರೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News