Saturday, September 21, 2024
Homeರಾಜ್ಯಯುವ ಜನತೆಯಲ್ಲಿ ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ : ಸಂತೋಷ್‌ ಹೆಗ್ಡೆ ಕಳವಳ

ಯುವ ಜನತೆಯಲ್ಲಿ ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿವೆ : ಸಂತೋಷ್‌ ಹೆಗ್ಡೆ ಕಳವಳ

ಬೆಂಗಳೂರು: ಆ.19: ಸಮಾಜದಲ್ಲಿ ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ನೈತಿಕ ಮೌಲ್ಯಗಳು ಕಣ್ಮರೆಯಾಗುತ್ತಿರುವುದಕ್ಕೆ ಕರ್ನಾಟಕ ಸರ್ಕಾರದ ನಿವೃತ್ತ ಲೋಕಾಯುಕ್ತ ಎನ್‌.ಸಂತೋಷ್‌ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಮಳ ಗೆಳೆಯರ ಬಳಗದ 49ನೇ ವಾರ್ಷಿಕೋತ್ಸವ ಮತ್ತು ಹರಿದಾಸ ಸಾಹಿತ್ಯ ಸಂಶೋಧಕ ಹಾಗೂ ಲೇಖಕ ಡಾ. ಎಸ್‌‍.ಜಯಸಿಂಹ ಅವರ ಶ್ರೀಧೀರೇಂದ್ರ ದರ್ಶನ ಪುಸ್ತಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನೈತಿಕತೆ ಮತ್ತು ಪ್ರಾಮಾಣಿಕತೆ ಎರಡೂ ಒಂದೇ ನಾಣ್ಯದ ಎರಡು ಮುಖಗಳು, ಇವೆರಡರ ಅಭಾವ ಮನುಷ್ಯನನ್ನು ಪಶುವಿಗಿಂತಲೂ ಹೀನವಾಗಿ ವರ್ತಿಸುವಂತೆ ಪ್ರೇರೇಪಿಸುತ್ತವೆ. ಭ್ರಷ್ಟಾಚಾರ ವಿಲ್ಲದಯಾವುದೇ ಇಲಾಖೆಯನ್ನು ಮತ್ತುಅಧಿಕಾರಿಯನ್ನು ಈ ಸಂದರ್ಭದಲ್ಲೇ ನೋಡುವುದೇ ದುಸ್ಸಾಧ್ಯವಾಗಿದೆ ಎಂದರು.

ಜೈಲಿನಿಂದ ಬಂದವರನ್ನು ಹೀರೋಗಳಂತೆ ಸ್ವಾಗತಿಸಿ ಅವರನ್ನು ವೈಭವೀಕರಿಸುವ ಸಮಾಜದಲ್ಲಿ ನಾವಿಂದು ಬದುಕಿದ್ದೇವೆ, ಮನಸ್ಸಾಕ್ಷಿ ಮತ್ತು ಕೃತಿ ಮಾತುಗಳ ನಡುವೆ ಅಂತರವಿಲ್ಲದ ವ್ಯಕ್ತಿತ್ವ ಇಂದು ಮರೀಚಿಕೆಯಾಗಿದೆ ಎಂದು ಸಂತೋಷ್‌ ಹೆಗ್ಡೆ ಅವರು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ನ್ಯಾಯಾಂಗ, ಚಲನಚಿತ್ರ ನಟನೆ, ಪೊಲೀಸ್‌‍ ಸೇವೆ, ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ, ವಿಜ್ಞಾನಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ವಿ. ಶ್ರೀಶಾನಂದ, ರಮೇಶ್‌ ಅರವಿಂದ್‌, ಎಂ. ಮುತ್ತೂರಾಯ, ಎಚ್‌. ಡುಂಡಿರಾಜ್‌, ಎಸ್‌‍. ಅಹಲ್ಯ, ಶ್ಯಾಮಸುಂದರ್‌ ವಟ್ಟಂ, ಸುಧೀಂದ್ರ ಬಿಂದಗಿ ಮೊದಲಾದ ಹದಿನಾರು ಸಾಧಕರಿಗೆ ಪರಿಮಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಅಧ್ಯಕ್ಷತೆ ವಹಿಸಿದ್ದ ಸುವಿದ್ಯೇಂದ್ರತೀರ್ಥರು ಪುಸ್ತಕ ಬಿಡುಗಡೆ ಮಾಡಿದರು. ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥರು ಸಾನಿಧ್ಯ ವಹಿಸಿದ್ದರು. ಸನ್ಮಾನಿತರ ಪರವಾಗಿ ಚಿತ್ರನಟ ರಮೇಶ್‌ಅರವಿಂದ್‌ ಅವರು ಮಾತನಾಡಿ ಪ್ರಶಸ್ತಿಯ ಮೂಲಕ ರಾಯರ ಅನುಗ್ರಹ ಪ್ರಾಪ್ತವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ರಾಯಚೂರು ಶೇಷಗಿರಿದಾಸ್‌‍ ಮತ್ತುತಂಡದವರಿಂದ ಹರಿದಾಸ ಕೀರ್ತನೆಗಳ ಗಾಯನಕಾರ್ಯಕ್ರಮವೂ ನಡೆಯಿತು.

RELATED ARTICLES

Latest News