Thursday, November 21, 2024
Homeಜಿಲ್ಲಾ ಸುದ್ದಿಗಳು | District Newsಇನ್ಪೋಸಿಸ್ ಫೌಂಡೇಶನ್‌ನಿಂದ 55 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ

ಇನ್ಪೋಸಿಸ್ ಫೌಂಡೇಶನ್‌ನಿಂದ 55 ಕೋಟಿ ವೆಚ್ಚದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ

ಕುಣಿಗಲï,ಸೆ.30- ಮಾಹಿತಿ ತಂತ್ರಜ್ಞಾನದಲ್ಲಿ ಇಡೀ ವಿಶ್ವವೇ ಬೆಂಗಳೂರು ಕಡೆಗೆ ತಿರುಗಿ ನೋಡುವಂತೆ ಮಾಡಿದ ಪ್ರತಿಷ್ಠಿತ ಇನ್ಪೋಸಿಸ್ ಫೌಂಡೇಷನ್ ಸಂಸ್ಥೆ 55 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿಕೊಡಲು ಮುಂದೆ ಬಂದಿರುವುದು ಸಂಸ್ಥೆಯ ಮಾನವೀಯತೆಗೆ ಸಾಕ್ಷಿಯಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಅವರಣದಲ್ಲಿ ಇನೋಸಿಸ್ ಫೌಂಡೇಷನ್ ವತಿಯಿಂದ ನಿರ್ಮಾಣ ಮಾಡುತ್ತಿರುವ ತಾಯಿ ಮಕ್ಕಳ ಆಸ್ಪತ್ರೆಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು, ಇನೋಸಿಸ್ ಸಂಸ್ಥೆಯನ್ನು ಕಟ್ಟಿಬೆಳಿಸಿದ ನಾರಾಯಣ್ ಮೂರ್ತಿ ಹಾಗೂ ಸುಧಾ ನಾರಾಯಣ್ ಮೂರ್ತಿ ಅವರು ಫೌಂಡೇಷನ್ ಸ್ಥಾಪನೆ ಮಾಡಿ ಸಮಾಜಮುಖಿ ಕೆಲಸಗಳಿಗೆ ಮುಂದಾಗಿದ್ದಾರೆ. ಅದರಲ್ಲಿಯೂ ಗ್ರಾಮೀಣ ಭಾಗದ ಜನರಿಗೆ ಉತ್ತಮ ರೀತಿಯ ಆರೋಗ್ಯ ಸೌಲಭ್ಯಗಳು ದೊರಕಬೇಕು ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂದು ಅವರ ಉದ್ದೇಶವಾಗಿದೆ.

ಬಿಜೆಪಿ ಸಂಸದರ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

ಈ ಸಂಬಂಧ ಸುಧಾಮೂರ್ತಿ ಅವರ ಬಳಿ ಮೊದಲು ಕನಕಪುರಕ್ಕೆ ಸಮುದಾಯ ಭವನ ಹಾಗೂ ದೇವಸ್ಥಾನಕ್ಕೆ ಸಹಾಯ ಕೇಳಲು ಹೋದಾಗ ಅವರು ದೇವಸ್ಥಾನ ಹಾಗೂ ಸಮುದಾಯ ಭವನಗಳಿಗೆ ಬೇಡ ಬೇರೆ ಯಾವುದಾರು ಹೇಳಿ ಅಂದರು ಆಗ ನಾನು ಕನಕಪುರಕ್ಕೆ ತಾಯಿ ಮಕ್ಕಳ ಆಸ್ಪತ್ರೆಗೆ ಸಹಾಯ ಮಾಡುವಂತೆ ಕೇಳಿಕೊಂಡಾಗ ಒಪ್ಪಿಸಿಕೊಂಡು ಕನಕಪುರಕ್ಕೆ ಮೊದಲ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣ ಮಾಡಿಕೊಟ್ಟರು ಅಲ್ಲಿ ಈಗಾಗಲೇ ಉದ್ಘಾಟನೆಯಾಗಿ ಸಾರ್ವಜನಿಕರಿಗೆ ಸೌಲಭ್ಯ ಲಭ್ಯವಾಗುತ್ತಿದೆ ಪ್ರತಿ ತಿಂಗಳು 150ಕ್ಕೂ ಹೆಚ್ಚು ಹೆರಿಗಳು ನಡೆಯುತ್ತಿವೆ ಎಂದು ತಿಳಿಸಿದರು.

ಇನೋಸಿಸ್ ಫೌಂಡೇಷನ್ಉಪಾಧ್ಯಕ್ಷ ಸುನೀಲ್ ಕುಮಾರ್ ತಾರೇಶ್ ಮಾತನಾಡಿ, ಕುಣಿಗಲ್ ಕ್ಷೇತ್ರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಮುಂದ್ದಾಗಿದ್ದೇವೆ. ಇನ್ನೂ ಎರಡು ವರ್ಷದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಿದ್ದೇವೆ ಎಂದು ತಿಳಿಸಿದರು.

ಶಾಸಕ ಡಾ.ರಂಗನಾಥ್, ಇನ್ಪೋಸಿಸ್ ಪೌಂಡೇಷನ್ ನಿರ್ದೇಶಕ ಸಂತೋಷ ಅನಂತಪು, ತಹಸೀಲ್ದಾರ್ ವಿಶ್ವನಾಥ್, ಡಿಹೆಚ್ಓ ಮಂಜುನಾಥ್, ಇಒ ಜೋಸೆಫ್, ಟಿಹೆಚ್ಓ ಡಾ.ಮರಿಯಪ್ಪ, ಸಾರ್ವಜನಿಕ ಆಸ್ಪತ್ರೆಯ ಅಡಳಿತಾಕಾರಿ ಡಾ.ಗಣೇಶ್ ಬಾಬು, ಪುರಸಭೆ ಮುಖ್ಯಾಕಾರಿ ಶಿವಪ್ರಸಾದï, ಪುರಸಭೆ ಮಾಜಿ ಅಧ್ಯಕ್ಷ ರಂಗಸ್ವಾಮಿ ಮುಂತಾದವರು ಹಾಜರಿದ್ದರು.

RELATED ARTICLES

Latest News