Thursday, February 13, 2025
Homeರಾಷ್ಟ್ರೀಯ | Nationalಆಕಸ್ಮಿಕವಾಗಿ ತನ್ನ ಮೂರು ಮರಿಗಳನ್ನು ಸಾಯಿಸಿದ ಹುಲಿ

ಆಕಸ್ಮಿಕವಾಗಿ ತನ್ನ ಮೂರು ಮರಿಗಳನ್ನು ಸಾಯಿಸಿದ ಹುಲಿ

Mother Tigress Accidentally Kills Her Cub In Bengal Zoo

ಕೋಲ್ಕತ್ತಾ, ಡಿ 8 (ಪಿಟಿಐ) ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿರುವ ಸಿಲಿಗುರಿಯ ಬೆಂಗಾಲ್‌ ಸಫಾರಿಯಲ್ಲಿ ಮೂರು ಹುಲಿ ಮರಿಗಳು ಸಾವನ್ನಪ್ಪಿವೆ. ತಾಯಿ ಹುಲಿ ತನ್ನ ಮರಿಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯಲು ಮರಿಗಳ ಕುತ್ತಿಗೆಗೆ ಬಾಯಿ ಹಾಕಿ ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕಚ್ಚಿ ಸಾವನ್ನಪ್ಪಿವೆ ಎಂದು ಮೃಗಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ ರಿಕಾ ಎಂಬ ಹುಲಿಗೆ ಜನಿಸಿದ ಮರಿಗಳು ರಾತ್ರಿ ಆಶ್ರಯದ ಆವರಣದೊಳಗೆ ತನ್ನ ಮಕ್ಕಳನ್ನು ಕರೆದೊಯ್ಯಲು ಪ್ರಯತ್ನಿಸುತ್ತಿದ್ದಾಗ ಅವುಗಳ ಶ್ವಾಸನಾಳವು ಚುಚ್ಚಿ ಸಾವನ್ನಪ್ಪಿದೆ ಎಂದು ಪಶ್ಚಿಮ ಬಂಗಾಳ ಮಗಾಲಯ ಪ್ರಾಧಿಕಾರದ ಕಾರ್ಯದರ್ಶಿ ಸೌರವ್‌ ಚೌಧರಿ ತಿಳಿಸಿದ್ದಾರೆ.

ಎರಡು ಮರಿಗಳು ತತ್‌ಕ್ಷಣ ಸಾವನ್ನಪ್ಪಿದ್ದರೆ, ಮತ್ತೊಂದು ಮರಿ ನಂತರ ಸಾವನ್ನಪ್ಪಿವೆ. ಘಟನೆ ನಡೆದಾಗಿನಿಂದ ಹುಲಿ ಶೋಕದಲ್ಲಿ ಮುಳುಗಿದ್ದು, ಆಕೆಯ ವರ್ತನೆ ಆಕ್ರೋಶಕ್ಕೆ ಗುರಿಯಾಗಿದೆ.
ಇದು ಹುಲಿ ಮರಿಗಳ ಕತ್ತಿನ ತಪ್ಪಾದ ಸ್ಥಳವನ್ನು ಕಚ್ಚಿದ ಪ್ರಕರಣವಾಗಿದೆ. ನಾವು ಭವಿಷ್ಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

RELATED ARTICLES

Latest News