Friday, October 11, 2024
Homeರಾಜ್ಯನಿವೇಶನಗಳನ್ನು ಹಿಂದಿರುಗಿಸಿದರೂ ಸಿಎಂ ಹಾಗೂ ಫ್ಯಾಮಿಲಿಗೆ ತಪ್ಪಲ್ಲ ಕಾನೂನು ಸಂಕಷ್ಟ

ನಿವೇಶನಗಳನ್ನು ಹಿಂದಿರುಗಿಸಿದರೂ ಸಿಎಂ ಹಾಗೂ ಫ್ಯಾಮಿಲಿಗೆ ತಪ್ಪಲ್ಲ ಕಾನೂನು ಸಂಕಷ್ಟ

Muda 'scam' row: Siddaramaiah 'surprised' by wife's move to return plots

ಬೆಂಗಳೂರು,ಸೆ.1– ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರು 14 ಮುಡಾ ನಿವೇಶನಗಳನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಿಂತಿರುಗಿಸುವುದಾಗಿ ಹೇಳಿಕೊಂಡಿದ್ದರೂ ತನಿಖೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗುವುದಿಲ್ಲ ಎನ್ನುತ್ತಿದೆ ಕಾನೂನು.

ನಾವು ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾಗೆ ಅ„ಕೃತ ಪತ್ರ ಬರೆದಿದ್ದೇವೆ ಎಂದು ಆಯುಕ್ತರಿಗೆ ಪತ್ರ ಬರೆದಿದ್ದರೂ ಈಗಾಗಲೇ ಹೈಕೋರ್ಟ್ ಏಕಸದಸ್ಯ ಪೀಠ ಮೇಲ್ನೋಟಕ್ಕೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿರುವುದರಿಂದ ತನಿಖೆ ಅಗತ್ಯವಿದೆ ಎಂದು ಆದೇಶದಲ್ಲಿ ಹೇಳಿದೆ.

ಇತ್ತ ಜನಪ್ರತಿನಿ„ಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತ ತನಿಖೆಗೆ ಎ-ïಐಆರ್ ದಾಖಲಿಸಿ 3 ತಿಂಗಳೊಳಗೆ ವರದಿ ನೀಡುವಂತೆ ಸೂಚಿಸಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ(ಇಡಿ) ಬೇನಾಮಿ ವಹಿವಾಟು ಪ್ರಕರಣ ಸಂಬಂಧ ಇಸಿಐಆರ್ ದಾಖಲಿಸಿಕೊಂಡಿದೆ.

ಇನ್ನೊಂದೆಡೆ ಮೈಸೂರು ಲೋಕಾಯುಕ್ತ ಪೊಲೀಸರು ಮಂಗಳವಾರ ಕೆಸರೆ ಗ್ರಾಮದಲ್ಲಿ ಸ್ಥಳ ಮಹಜರು ನಡೆಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಾನೂನು ಪ್ರಕ್ರಿಯೆ ಈಗಾಗಲೇ ಸಾಕಷ್ಟು ದೂರ ಸಾಗಿರುವುದರಿಂದ ಇಂಥ ಸಂದರ್ಭದಲ್ಲಿ ಅರ್ಜಿದಾರರು ತಮ್ಮ ಪ್ರಕರಣವನ್ನು ಕೈಬಿಡುವಂತೆ ಮನವಿ ಮಾಡಿದರೂ ಊರ್ಜಿತವಾಗುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಕಾನೂನು ತಜ್ಞರು.

ಏಕೆಂದರೆ ಕಾನೂನಿನ ದೃಷ್ಟಿಯಲ್ಲಿ ತಪ್ಪು ಮಾಡಿದವನಿಗೆ ಶಿಕ್ಷೆಯಾಗಬೇಕು. ಇಲ್ಲಿ ನಿವೇಶನಗಳನ್ನು ಹಿಂತಿರುಗಿಸಿದ ತಕ್ಷಣ ಪ್ರಕರಣದಿಂದ ಆರೋಪಿ ಸ್ಥಾನದಲ್ಲಿರುವವರು ಮುಕ್ತರಾಗುವುದಿಲ್ಲ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರುವ ಮೊದಲೇ ಸ್ಥಳೀಯ ಮಟ್ಟದಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕಿತ್ತು.

ಈಗ ತನಿಖೆ ಪ್ರಾರಂಭವಾಗಿರುವುದರಿಂದ ನ್ಯಾಯಾಲಯ ಇಂಥ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡುವುದು ತೀರ ಕಡಿಮೆ ಎನ್ನಲಾಗುತ್ತಿದೆ. ಪ್ರಕರಣದಲ್ಲಿ ಸಿದ್ದರಾಮಯ್ಯನವರೇ ಎ1 ಆರೋಪಿಯಾಗಿರುವುದರಿಂದ ಲೋಕಾಯುಕ್ತ ಪೊಲೀಸರು ಇಲ್ಲವೇ ಇ.ಡಿ ಅ„ಕಾರಿಗಳು ಯಾವುದೇ ಸಂದರ್ಭದಲ್ಲಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಡಬಹುದು.

ಒಂದು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಾಗ ನ್ಯಾಯಾಲಯವು ಮಧ್ಯಪ್ರವೇಶ ಮಾಡಲು ಅವಕಾಶ ಇರುವುದಿಲ್ಲ. ಹಾಗೊಂದು ವೇಳೆ ಏಕಸದಸ್ಯ ಪೀಠ ತಡೆಯಾಜ್ಞೆ ನೀಡಿದರೆ ದೂರುದಾರರು ಸುಪ್ರೀಂಕೋರ್ಟ್ಗೆ ಹೋಗುವ ಸಾಧ್ಯತೆ ಇದೆ ಎಂದು ಕಾನೂನು ತಜ್ಞರು ಹೇಳುತ್ತಾರೆ.

ಈಗ ಸಿದ್ದರಾಮಯ್ಯನವರ ಮುಂದೆ ಹೆಚ್ಚಿನ ಆಯ್ಕೆಗಳಿಲ್ಲ. ಅವರು ಲೋಕಾಯುಕ್ತ ಮತ್ತು ಇ.ಡಿ ಯಾವುದೇ ಕ್ಷಣದಲ್ಲಿ ನೋಟಿಸ್ ನೀಡಿ ವಿಚಾರಣೆಗೆ ಕರೆಯಬಹುದು. ಇದರಲ್ಲಿ ಅಕ್ರಮ ಹಣದ ವಹಿವಾಟು ನಡೆದಿದೆ ಎಂದು ಇ.ಡಿ ಶಂಕಿಸಿರುವ ಕಾರಣ ನ್ಯಾಯಾಲಯ ಪ್ರಕರಣವನ್ನು ರದ್ದುಪಡಿಸುವ ಸಾಧ್ಯತೆ ತೀರಾ ಕಡಿಮೆ.

ಸಿಎಂ ಸಿದ್ದರಾಮಯ್ಯ ಮತ್ತವರ ಪತ್ನಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಕರಣದ ಮಾಹಿತಿ ವರದಿ ದಾಖಲಿಸಿದ ನಂತರ ನಿನ್ನೆ ಸಂಜೆ ಮುಖ್ಯಮಂತ್ರಿಯವರು ಕಾನೂನು ತಜ್ಞರು ಮತ್ತು ಇಬ್ಬರು ಸಚಿವರನ್ನು ಭೇಟಿ ಮಾಡಿದ್ದರು.

ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಮೈಸೂರು ನಗರಾಭಿವೃದ್ಧಿ ಪ್ರಾ„ಕಾರಕ್ಕೆ (ಮುಡಾ) ತಮ್ಮ ನಿವೇಶನಗಳನ್ನು ವಾಪಸ್ ಕೊಡುವುದಾಗಿ ಪತ್ರ ಬರೆದಿದ್ದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಮತ್ತು ಎಡಿಜಿಪಿ (ಗುಪ್ತಚರ) ಹೇಮಂತ್ ನಿಂಬಾಳ್ಕರ್ ಉಪಸ್ಥಿತರಿದ್ದರು.
ಸಭೆಯಲ್ಲಿ ಇಡಿ ತನಿಖೆಗೆ ತಡೆಯಾe್ಞÉ ಪಡೆಯಲು ಕೋರ್ಟ್ ಮೊರೆ ಹೋಗುವುದು ಸೇರಿದಂತೆ ವಿವಿಧ ಆಯ್ಕೆಗಳ ಬಗ್ಗೆ ಅವರು ಸಿಎಂ ಮುಂದೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದಕ್ಕೂ ಮುನ್ನ ಇಡಿ ಬೆಂಗಳೂರು ವಲಯ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ ವಾರಾಂತ್ಯದಲ್ಲಿ ಕರ್ನಾಟಕ ಲೋಕಾಯುಕ್ತದ ಮೈಸೂರು ಘಟಕವು ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನಸ್ವಾಮಿ ಮತ್ತು ಮಾಜಿ ಭೂ ಮಾಲೀಕ ದೇವರಾಜ್ ವಿರುದ್ಧ ದಾಖಲಿಸಿದ ಎಫ್ ಐಆರ್ ಆಧರಿಸಿ ಇಸಿಐಆರ್ ದಾಖಲಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ಭೂಮಾಲೀಕ – ದೇವರಾಜು – ಇವರಿಂದ ಸ್ವಾಮಿ ಜಮೀನು ಖರೀದಿಸಿ ಪಾರ್ವತಿಗೆ ಉಡುಗೊರೆಯಾಗಿ ನೀಡಿದ್ದರು. 2021ರಲ್ಲಿ ಮೈಸೂರು ನಗರ ವ್ಯಾಪ್ತಿಯ ಡೌನ್ಮಾರ್ಕೆಟ್ ಕೆಸರೆ ಪ್ರದೇಶದಲ್ಲಿ ಲೇಔಟ್ ರಚಿಸಲು 3 ಎಕರೆ 16 ಗುಂಟೆ ಜಾಗಕ್ಕೆ ಬದಲಾಗಿ 14 ನಿವೇಶನ ಹಂಚಿಕೆಗೆ ಸಂಬಂ„ಸಿದಂತೆ ಭ್ರಷ್ಟಾಚಾರ, ವಂಚನೆ ಮತ್ತು -ÉÇೀರ್ಜರಿ ಆರೋಪದ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES

Latest News