Saturday, July 27, 2024
Homeರಾಜ್ಯಶಾಲೆಗಳಿಗೆ ಬೆದರಿಕೆ ಇ-ಮೇಲ್ ಕಳುಹಿಸುವ ಮುಜಾಹಿದ್ದೀನ್ ಯಾರು..?

ಶಾಲೆಗಳಿಗೆ ಬೆದರಿಕೆ ಇ-ಮೇಲ್ ಕಳುಹಿಸುವ ಮುಜಾಹಿದ್ದೀನ್ ಯಾರು..?

ಬೆಂಗಳೂರು,ಡಿ.1- ಬೆಂಗಳೂರು ನಗರ ಸೇರಿದಂತೆ ಹೊರವಲಯದ ಕೆಲವು ಖಾಸಗಿ ಶಾಲೆಗಳಿಗೆ ಮುಜಾಹಿದ್ದೀನ್ ಹೆಸರಿನಲ್ಲಿ ಕಳುಹಿಸಿರುವ ಇ-ಮೇಲ್‍ನಲ್ಲಿ ಕೆಲವು ಉಗ್ರವಾದದ ಪದಬಳಕೆ ಮಾಡಲಾಗಿರುವುದು ಆತಂಕ ಸೃಷ್ಟಿಸಿದೆ. ಇಷ್ಟು ಶಾಲೆಗಳಿಗೆ ಒಂದೇ ಕಡೆಯಿಂದ ಇ-ಮೇಲ್ ಕಳುಹಿಸಿರುವ ಸಾಧ್ಯತೆ ಇದ್ದು, ಇದೊಂದು ಬೆದರಿಕೆಯ ತಂತ್ರವಾಗಿದ್ದು , ; ಬೆಂಗಳೂರು ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿ ಹಲವು ಆಯಾಮಗಳಲ್ಲಿ ಈಗ ತನಿಖೆ ಆರಂಭಿಸಿದ್ದಾರೆ.

ಸಮಾಜದಲ್ಲಿ ಭೀತಿಯ ವಾತಾವರಣ ಸೃಷ್ಟಿಸುವ ಸಲುವಾಗಿಯೇ ಶಾಲೆಗಳನ್ನೇ ಕೇಂದ್ರೀಕರಿಸಲಾಗಿದೆ. ಪೊಲೀಸರು ಈಗಾಗಲೇ ರಾಷ್ಟ್ರೀಯ ತನಿಖಾ ತಂಡಗಳನ್ನು ಸಂಪರ್ಕಿಸಿದ್ದು, ಇದರ ಹಿಂದಿನ ಸಂಘಟನೆಗಳು ಅಥವಾ ವ್ಯಕ್ತಿಗಳು ಯಾರು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ.

ಗುರುಪತ್‍ವಂತ್ ಸಿಂಗ್ ಪನ್ನುನ್ ಹತ್ಯೆ ಸಂಚು : ಭಾರತೀಯ ಅಧಿಕಾರಿ ಕೈವಾಡ ಕುರಿತ ತನಿಖೆಗೆ ಸಮ್ಮತಿ

ಇ-ಮೇಲ್ ಡೊಮೈನ್‍ನಲ್ಲಿ ಮುಜಾಹಿದ್ದೀನ್ ಎಂಬ ಹೆಸರಿದೆ. ಆದರೆ ಕಳುಹಿಸಿದವರ ಪೂರ್ಣ ವಿವರವಿಲ್ಲದ ಕಾರಣ ಸೈಬರ್ ಅಪರಾಧ ಪೊಲೀಸರು ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಬೆಂಗಳೂರಿನಲ್ಲಿ ಕುಳಿತು ಅಥವಾ ಬೇರೆ ಕಡೆಯಿಂದ ಇಮೇಲ್ ಕಳುಹಿಸಲಾಗಿದೆಯೇ, ಇದು ಪೂರ್ವನಿಯೋಜಿತ ಕೃತ್ಯವೇ ಎಂಬುದರ ಬಗ್ಗೆ ನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬಿಬ್ಲೇ ಡೊಮೈನ್‍ನಿಂದ ಮೇಲ್‍ನಿಂದ ಇದನ್ನು ಕಳುಹಿಸಲಾಗಿದ್ದು, ಇದರಲ್ಲಿ ಯಾರು ಕಳುಹಿಸುತ್ತಿದ್ದಾರೆ ಎಂಬುದು ತಿಳಿಯುವುದಿಲ್ಲ ಮತ್ತು ಅವರ ಐಪಿ ಕೂಡ ಸಿಗುವುದಿಲ್ಲ. ಹಾಗಾಗಿ ಪೊಲೀಸರಿಗೆ ಇದೊಂದು ಸವಾಲಾಗಿದೆ.

RELATED ARTICLES

Latest News