Tuesday, December 3, 2024
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruಮುಳ್ಳಯ್ಯನಗಿರಿ ಗುಡ್ಡ ಕುಸಿತ, ಭೂವಿಜ್ಞಾನಿಗಳ ತಂಡದಿಂದ ಪರಿಶೀಲನೆ

ಮುಳ್ಳಯ್ಯನಗಿರಿ ಗುಡ್ಡ ಕುಸಿತ, ಭೂವಿಜ್ಞಾನಿಗಳ ತಂಡದಿಂದ ಪರಿಶೀಲನೆ

ಚಿಕ್ಕಮಗಳೂರು,ಆ.10– ಸತತ ಮಳೆಯಿಂದ ಮುಳ್ಳಯ್ಯನಗಿರಿ ಪರ್ವತ ಪ್ರದೇಶದಲ್ಲಿ ಗುಡ್ಡಕುಸಿತವಾಗುತ್ತಿದ್ದು, ಚಿಕ್ಕಮಗಳೂರಿನ ಐದು ತಾಲ್ಲೂಕುಗಳ 78 ಸ್ಥಳಗಳಲ್ಲಿ ಭೂವಿಜ್ಞಾನಿಗಳ ತಂಡ ಇಂದು ಪರಿಶೀಲನೆ ನಡೆಸಿದೆ.

ಕೊಪ್ಪ, ಶೃಂಗೇರಿ, ಕಳಸ ಸೇರಿದಂತೆ ವಿವಿಧೆಡೆ ಪರಿಶೀಲನೆ ನಡೆಸಲಾಗುತ್ತಿದೆ. ಮಲೆನಾಡು ಪ್ರದೇಶ ಹಿಮಾಲಯ ಪರ್ವತದಂತೆ ರಕ್ಷಣಾತಕವಾಗಿತ್ತು. ಆದರೆ ಇತ್ತೀಚೆಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಅಲ್ಲಲ್ಲಿ ಗುಡ್ಡಗಳ ಕುಸಿತವಾಗುತ್ತಿದೆ. ಮಳೆಗಾಲದ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಅನಾಹುತಗಳು ಸಂಭವಿಸುತ್ತಿವೆ.

ಈ ಹಿನ್ನೆಲೆಯಲ್ಲಿ ಭೂ ತಜ್ಞರು, ಭೂ ವಿಜ್ಞಾನಿಗಳು ಅಧಿಕಾರಿಗಳ ತಂಡ ಸ್ಥಳೀಯ ಅಧಿಕಾರಿಗಳ ಜೊತೆ ತೆರಳಿ ಹಲವೆಡೆ ಪರಿಶೀಲನೆ ನಡೆಸಿದೆ.ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಲೆನಾಡು ಭಾಗಗಳಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಗುಡ್ಡಗಳ ಕೊರೆಯುವಿಕೆ ಹಾಗೂ ರೆಸಾರ್ಟ್ಗಳ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಗೆ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಗುಡ್ಡಗಳ ಕುಸಿತವಾಗುತ್ತಿದೆ.

ಇನ್ನೂ ಹಲವಾರು ಕಾರಣಗಳಿಂದಲೂ ಗುಡ್ಡಕುಸಿತ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲೆನಾಡು ಜಿಲ್ಲೆ ಚಿಕ್ಕಮಗಳೂರಿನ ಹಲವು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.

RELATED ARTICLES

Latest News