ಮುಂಬೈ, ಜೂ.27-ಕ್ಯಾನ್ಸರ್ ರೋಗಿಯಾಗಿದ್ದ ತನ್ನ ಅಜ್ಜಿಯನ್ನು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದ ಮೊಮ್ಮಗ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಕಸದ ರಾಶಿಯ ಬಳಿ ಕಂಡು ಬಂದ ವೃದ್ದೆಯನ್ನು ಅವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಆಕೆಯ ಮೊಮ್ಮಗ ಸಾಗರ್ ಶೇವಾಲೆ (33), ಸೋದರ ಮಾವ ಬಾಬಾಸಾಹೇಬ್ ಗಾಯಕ್ವಾಡ್ (70) ಮತ್ತು ಆಟೋರಿಕ್ಷಾ ಚಾಲಕ ಸಂಜಯ್ ಕದ್ರೇಶಮ್ (27)ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಆರೋಪಿಗಳು ಕಳೆದ ಜೂನ್ 21 ರ ರಾತ್ರಿ ಮುಂಬೈ ಉಪನಗರ ಬೊರಿವಲಿಯಿಂದ ಮಹಿಳೆಯನ್ನು ಶತಾಬಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಆಸ್ಪತ್ರೆ ಅಧಿಕಾರಿಗಳು ಆಕೆಯನ್ನು ದಾಖಲಿಸಲು ನಿರಾಕರಿಸಿದಾಗ, ಅವರು ಆಕೆಯನ್ನು ಸಮೀಪದಲಿರುವ ಆರೆ ಅರಣ್ಯಕ್ಕೆ ಕರೆದೊಯ್ದು ಅಲ್ಲಿಯೇ ಬಿಟ್ಟರು.
ಆದರೆ ಏನು ಮಾಡುವುದು ತಿಳಿಯದೆ ಅಲೆದಾಡಿ ಕೊನೆಗೆ ನಗರ ಹೊರವಲಯದ ಕಸದ ಡಂಬಿಂಗ್ ಯಾಡ್ ಬಳಿ ಬಂದಿದ್ದು, ನಂತರ ಪ್ರಕರಣ ಬೆಳಗಿಗೆ ಬಂದಿದೆ.ಈ ಅಮಾನವೀಯ ಘಟನೆಮಾನವ ಸಮಾಜವನ್ನು ಅಣಕಿಸುವಂತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಮಹಿಳೆಗೆ ಈಗ ನಗರದ ಜುಹು ಪ್ರದೇಶದಲ್ಲಿರುವ ಕೂಪರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2025)
- ರಾಜ್ಯದ ಅಧಿಕಾರಕ್ಕಾಗಿ ಕಾನೂನು ಹೋರಾಟ ಅನಿವಾರ್ಯ; ಸ್ಟಾಲಿನ್
- ಟಾರ್ಪಾಲ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
- ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ಎಸ್ಎಸ್ ಸಮಾಜ ಸೇವೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ಮೋದಿ
- ಠಾತ್ ಹೃದಯಾಘಾತ ತಪ್ಪಿಸಲು ಜಿಲ್ಲೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲೂ ಹೃದಯ ಜ್ಯೋತಿ ಯೋಜನೆ ಅನುಷ್ಠಾನ