Sunday, July 21, 2024
Homeಬೆಂಗಳೂರುಬಾರಲ್ಲಿ 'ಫೈನಾನ್ಸ್' ಕಿರಿಕ್, ಮನಬಂದಂತೆ ಇರಿದು ಯುವಕನ ಕೊಲೆ

ಬಾರಲ್ಲಿ ‘ಫೈನಾನ್ಸ್’ ಕಿರಿಕ್, ಮನಬಂದಂತೆ ಇರಿದು ಯುವಕನ ಕೊಲೆ

ಬೆಂಗಳೂರು,ಜು.9– ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.ಶ್ರೀರಾಂಪುರದ ದಯಾನಂದ (21) ಕೊಲೆಯಾದ ಯುವಕ.

ಈ ಹಿಂದೆ ಈತ ಫೈನಾನ್ಸ್ ನಡೆಸುತ್ತಿದ್ದನು. ವ್ಯವಹಾರದಲ್ಲಿ ನಷ್ಟ ಉಂಟಾದ ಪರಿಣಾಮ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದನು. ಸ್ನೇಹಿತರೆಲ್ಲಾ ಸೇರಿ ರಾತ್ರಿ ಬಾರೊಂದರಲ್ಲಿ ಮದ್ಯ ಸೇವಿಸಿ ಊಟಕ್ಕೆಂದು ಹೋಗಿದ್ದಾರೆ. ಆ ವೇಳೆ ಹಣಕಾಸು ವಿಚಾರವಾಗಿ ಅವರವರ ನಡುವೆಯೇ ಇಂದು ಮುಂಜಾನೆ 1.30 ರ ಸುಮಾರಿನಲ್ಲಿ ಜಗಳವಾಗಿದೆ.

ಆ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕುಮಾರ್ ಎಂಬಾತ ಚಾಕುವಿನಿಂದ ದಯಾನಂದನ ಹೊಟ್ಟೆ, ಎದೆ, ಇನ್ನಿತರ ಭಾಗಗಳಿಗೆ ಮನಬಂದಂತೆ ಇರಿದು ಪರಾರಿಯಾಗಿದ್ದನು.

ಗಂಭೀರವಾಗಿ ಗಾಯಗೊಂಡಿದ್ದ ದಯಾನಂದನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ. ಸುದ್ದಿ ತಿಳಿದು ಶ್ರೀರಾಂಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕೆಲವೇ ಗಂಟೆಗಳಲ್ಲಿ ಆರೋಪಿ, ಸಾಯಿಬಾಬ ನಗರ ನಿವಾಸಿ ಕುಮಾರ್ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News