Friday, May 3, 2024
Homeಕ್ರೀಡಾ ಸುದ್ದಿಮುಷೀರ್ ಖಾನ್ ಶತಕ, ಬೃಹತ್ ಮೊತ್ತದತ್ತ ಮುಂಬೈ

ಮುಷೀರ್ ಖಾನ್ ಶತಕ, ಬೃಹತ್ ಮೊತ್ತದತ್ತ ಮುಂಬೈ

ಮುಂಬೈ, ಮಾ.12- ಅಂಡರ್ 19 ಆಟಗಾರ ಮುಷೀರ್ ಖಾನ್ ಶತಕ (120 ರನ್) ಹಾಗೂ ಅನುಭವಿ ಆಟಗಾರ ಶ್ರೇಯಸ್ ಅಯ್ಯರ್ (93 ರನ್) ಅವರ ಆಕರ್ಷಕ ಆಟದ ನೆರವಿನಿಂದ ಮುಂಬೈ ತಂಡವು ಪ್ರಸಕ್ತ ಸಾಲಿನ ರಣಜಿ ಟೂರ್ನಿಯಲ್ಲಿ ಬೃಹತ್ ಮುನ್ನಡೆಯತ್ತ ಹೆಜ್ಜೆ ಹಾಕಿದೆ.

ವಿದರ್ಭ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಮುಂಬೈ ಆಟಗಾರರು ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ, ಬೌಲರ್ಗಳ ಚಮತ್ಕಾರದಿಂದ ವಿದರ್ಭ 105 ರನ್ಗಳಿಗೆ ಆಲ್ ಔಟ್ ಆಗುವ ಮೂಲಕ 119 ರನ್ಗಳ ಹಿನ್ನೆಡೆ ಅನುಭವಿಸಿತು. ದ್ವಿತೀಯ ಇನ್ನಿಂಗ್ಸ್ನಲ್ಲೂ ಮುಂಬೈ 34 ರನ್ಗಳಾಗುವಷ್ಟರಲ್ಲಿ ಆರಂಭಿಕ ಆಟಗಾರರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಆದರೆ ನಾಯಕ ಅಜಿಂಕ್ಯಾ ರಹಾನೆ ಅರ್ಧಶತಕ (73 ರನ್) ನೆರವಿನಿಂದ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ಮೂರನೇ ದಿನದಾಟದಲ್ಲಿ ಬ್ಯಾಟಿಂಗ್ ವೈಭವ ಮೆರೆದ ಮುಂಬೈ 98 ಓವರ್ 321 ರನ್ ಗಳಿಸಿದ್ದು ಒಟ್ಟಾರೆ 440 ರನ್ಗಳ ಮುನ್ನಡೆ ಸಾಧಿಸಿದೆ.

RELATED ARTICLES

Latest News