ಐಜ್ವಾಲ್, ಅ.17-ಪೂರ್ವ ಮಿಜೋರಾಂನ ಚಂಫೈ ಜಿಲ್ಲೆಯಲ್ಲಿ ಪೊಲೀಸರು ಮ್ಯಾನಾರ್ ಪ್ರಜೆಯನ್ನು ಬಂಧಿಸಿ ಸುಮಾರು 320 ಗ್ರಾಂ ಮದಕ ವಸ್ತು ಹೆರಾಯಿನ್‌ನನ್ನು ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಮತ್ತು ಮಾದಕ ದ್ರವ್ಯನಿಯಂತ್ರಕ ಇಲಾಖೆಯು ಅಸ್ಸಾಂ ರೈಫಲ್‌್ಸನ ಸಿಬ್ಬಂದಿಗಳ ಸಹಯೋಗದೊಂದಿಗೆ ಕಳೆದ ರಾತ್ರಿ ಮ್ಯಾನ್ಮಾರ್ ಗಡಿಯ ಸಮೀಪವಿರುವ ಐಜ್ವಾಲ್‌ಜಿಲ್ಲೆಯ ಟ್ಲಾಂಗ್ಸಾಮ್ ಗ್ರಾಮದ ಬಳಿ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ಮ್ಯಾನಾರ್‌ನ ಚಿನ್ ರಾಜ್ಯದ ಬಲ್ಫೆಕ್ ಗ್ರಾಮದ ನಿವಾಸಿಯಾಗಿರುವ 60 ವರ್ಷದ ವೃದ್ಧನನ್ನು 323 ಗ್ರಾಂ ಹೆರಾಯಿನ್ ಹೊಂದಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಇಲಾಖೆಯು ಜನವರಿಯಿಂದ ರಾಜ್ಯದಲ್ಲಿ ಈವರೆಗೆ 37.8 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ ಎಂದು ಅವರು ಹೇಳಿದರು.