Monday, July 15, 2024
Homeರಾಜ್ಯಸಾಂಸ್ಕೃತಿಕ ನಗರಿಗೆ ಹರಿದುಬಂದ ಪ್ರವಾಸಿಗರ ಸಾಗರ

ಸಾಂಸ್ಕೃತಿಕ ನಗರಿಗೆ ಹರಿದುಬಂದ ಪ್ರವಾಸಿಗರ ಸಾಗರ

ಮೈಸೂರು,ಅ.23- ನಾಡಹಬ್ಬ ಮೈಸೂರು ದಸರಾ ಹಾಗೂ ಸಾಲು ಸಾಲು ರಜೆ ಹಿನ್ನಲೆಯಲ್ಲಿ ಸಾಂಸ್ಕøತಿಕ ನಗರಿಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಮಧುವಣಗಿತ್ತಿಯಂತೆ ಸಾಂಸ್ಕøತಿಕ ನಗರಿ ಶೃಂಗಾರಗೊಂಡಿದೆ. ಶನಿವಾರದಿಂದಲೇ ನಗರಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ಹೋಟೆಲ್, ವಸತಿಗೃಹಗಳು, ಪರಿವೀಕ್ಷಣ ಮಂದಿರಗಳು ಭರ್ತಿಯಾಗಿವೆ.

ಈ ಬಾರಿ ಹೊರರಾಜ್ಯಗಳ ವಾಹನಗಳಿಗೆ ತೆರಿಗೆ ವಿನಾಯ್ತಿ ನೀಡಿರುವ ಹಿನ್ನಲೆಯಲ್ಲಿ ತಮಿಳುನಾಡು, ಕೇರಳದಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲೂ ವಿದ್ಯುತ್ ದೀಪಾಲಂಕಾರ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಕುಪ್ಪಣ್ಣ ಪಾರ್ಕ್‍ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಾರಿ ಹೂವಿನಲ್ಲಿ ಪಂಚಖಾತ್ರಿ ಯೋಜನೆಗಳ ಅನಾವರಣಗೊಂಡಿರುವುದು ವಿಶೇಷ.

ಮಣಿಪುರದಲ್ಲಿ ಸ್ಪೋಟಕಗಳೊಂದಿಗೆ ಉಗ್ರನ ಬಂಧನ

ಚಾಮರಾಜೇಂದ್ರ ಮೃಗಾಲಯ, ಕೆಆರ್‍ಎಸ್, ಚಾಮುಂಡಿ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಭರ್ಜರಿ ವ್ಯಾಪಾರ:
ದಸರಾ ಹಿನ್ನಲೆಯಲ್ಲಿ ವಸ್ತುಪ್ರದರ್ಶನದ ಆವರಣ ಸೇರಿದಂತೆ ನಗರದೆಲ್ಲೆಡೆ ಗೃಹಾಲಂಕಾರ, ಮಕ್ಕಳ ಆಟಿಕೆ ಸಾಮಗ್ರಿಗಳ ಅಂಗಡಿಗಳು ತೆರೆದಿದ್ದು, ವ್ಯಾಪಾರ ಕೂಡ ಜೋರಾಗಿ ನಡೆದಿದೆ. ಹೋಟೆಲ್‍ಗಳಲ್ಲಿ ವಿವಿಧ ಬಗೆಯ ಖಾದ್ಯಗಳಿಗೆ ಭಾರೀ ಬೇಡಿಕೆ ಹೆಚ್ಚಿದೆ. ಒಟ್ಟಿನಲ್ಲಿ ಸರಣಿ ರಜೆ ಹಿನ್ನಲೆಯಲ್ಲಿ ಸಾಂಸ್ಕøತಿಕ ನಗರಿ ಈ ಬಾರಿ ಜನಸ್ತೋಮದಿಂದ ತುಂಬಿ ತುಳುಕುತ್ತಿದೆ.

ಟ್ರಾಫಿಕ್‍ಜಾಮ್:
ರಾಜ್ಯದ ವಿವಿಧ ಜಿಲ್ಲೆ, ತಾಲ್ಲೂಕು ಕೇಂದ್ರ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ ಹಿನ್ನಲೆಯಲ್ಲಿ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ ಕೆಎಸ್‍ಆರ್‍ಟಿಸಿ ಹೆಚ್ಚಿನ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಎಲ್ಲ ಬಸ್ಸುಗಳು ಸಹ ತುಂಬಿ ತುಳುಕುತ್ತಿವೆ. ಇಂದು ಮತ್ತಷ್ಟು ಜನಜಂಗುಳಿ ಹೆಚ್ಚಾಗಲಿದೆ.

RELATED ARTICLES

Latest News