ಮೈಸೂರು,ಮಾ.13- ಚಿನ್ನದ ಸರಕ್ಕಾಗಿ ತನ್ನ ಸ್ನೇಹಿತೆಯನ್ನೇ ಕೊಂದ ಮಹಿಳೆಯನ್ನು ನಜರಾಬಾದ್ ಠಾಣೆ ಪೊಲೀಸರು ಬಂದಿಸಿದ್ದಾರೆ. ಕೆಸಿ.ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆ.ಸಿ ಬಡಾವಣೆಯ ಸುಲೋಚನಾ (62) ಕೊಲೆಯಾದವರಾಗಿದ್ದು ಅದೇ ಬಡವಾಣೆ ನಿವಾಸಿ ಶಕುಂತಲಾ (42)ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಯಾದ ಸುಲೋಚನಾ ಪೊಲೀಸ್ ಇಲಾಖೆ ನಿವೃತ್ತ ನೌಕರ ಗಂಗಣ್ಣರ ಪತ್ನಿಯಾಗಿದ್ದು ಕಳೆದ ಮಾ.5 ರಂದು ಮನೆಗೆ ಬಂದ ಉಸಿರುಗಟ್ಟಿಸಿ ಶಕುಂತಲಾಳನ್ನು ಕೊಲೆ ಮಾಡಿ ಮೃತದೇಹದ ಮೇಲಿದ್ದ ಚಿನ್ನದ ಸರ ದೋಚಲಾಗಿತ್ತು.
ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆಂದುನಂಭಿಸಲಾಗಿತ್ತು ಆದರೆ ಅನುಮಾನದೊಂದಿಗೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಶಕುಂತಲಾ ಕುಟುಂಬ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಇತ್ತೀಚೆಗೆ ಸಾಲದ ಸುಳಿಯಲ್ಲಿ ಸಿಲುಕಿ ಅದನ್ನು ತೀರಿಸಲು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನ ಸರ ಕದ್ದು 1.5 ಲಕ್ಷಕ್ಕೆ ಶಕುಂತಲಾ ಗಿರವಿ ಇಟ್ಟಿರುವುದು ಗೊತ್ತಾಗಿದೆ .ಪ್ರಸ್ಕೃತ ಆರೋಪಿಯನ್ನು ಬಂಧಿಸಿರುವ ನಜರಾಬಾದ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.