Monday, June 24, 2024
Homeಮನರಂಜನೆಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎನ್.ಎಂ.ಸುರೇಶ್ ಆಯ್ಕೆ

ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಎನ್.ಎಂ.ಸುರೇಶ್ ಆಯ್ಕೆ

ಬೆಂಗಳೂರು,ಸೆ.24: ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಡುವೆಯೇ ನಿರ್ಮಾಪಕ ಎನ್ ಎಂ. ಸುರೇಶ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ತಡರಾತ್ರಿವರೆಗೂ ನಡೆದು ಭಾರೀ ಅಂತರದಿಂದ ಎನ್ ಎಂ. ಸುರೇಶ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಇಂದು ಬೆಳಿಗ್ಗೆ ಅಧಿಕಾರ ವಹಿಸಿಕೊಂಡರು.

ಎಲ್ಲಾ ವಲಯಗಳಿಂದ ಒಟ್ಟು 1599 ಸದಸ್ಯರು ಮತದಾನದ ಹಕ್ಕು ಪಡೆದಿದ್ದರು. ಇದರಲ್ಲಿ 967 ಮಂದಿ ಮತದಾನ ಮಾಡಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸುರೇಶ್ 337 ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಉಳಿದಂತೆ ಎ.ಗಣೇಶ್ 204, ವಿ.ಹೆಚ್. ಸುರೇಶ್ (ಮಾರ್ಸ್ ಸುರೇಶ್)181, ಶಿಲ್ಪಾ ಶ್ರೀನಿವಾಸ್ 217 ಮತ ಪಡೆದು ಪರಾಭವಗೊಂಡರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇನ್ನೂ 5 ದಿನ ಮಳೆ

ಗೌರವ ಕಾರ್ಯದರ್ಶಿಯಾಗಿ ವಿತರಕರ ವಲಯದಿಂದ ಭಾ.ಮಾ. ಗಿರೀಶ್, ವಿ. ಸುಬ್ರಹ್ಮಣಿ(ಕರಿಸುಬ್ಬು) ಪ್ರದರ್ಶಕರ ವಲಯದಿಂದ ಸುಂದರ್ ರಾಜು ಆರ್. ಗೆಲುವು ಸಾಸಿದ್ದಾರೆ.

ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕರ ವಲಯದಿಂದ ಪ್ರಮೀಳ ಜೋಶಾಯಿ, ವಿತರಕರ ವಲಯದಿಂದ ಜಿ. ವೆಂಕಟೇಶ್, ಪ್ರದರ್ಶಕರ ವಲಯದಿಂದ ನರಸಿಂಹಲು ಜಯಗಳಿಸಿದ್ದು, ಖಜಾಂಚಿಯಾಗಿ ಜಯಸಿಂಹ ಮುಸುರಿ ವಿಜೇತರಾಗಿದ್ದಾರೆ.

RELATED ARTICLES

Latest News