Friday, September 20, 2024
Homeಮನರಂಜನೆಸದ್ದಿಲ್ಲದೆ ಎರಡನೇ ಮದುವೆಗೆ ಸಜ್ಜಾದ ಟಾಲಿವುಡ್ ಸ್ಟಾರ್ ನಾಗಚೈತನ್ಯ

ಸದ್ದಿಲ್ಲದೆ ಎರಡನೇ ಮದುವೆಗೆ ಸಜ್ಜಾದ ಟಾಲಿವುಡ್ ಸ್ಟಾರ್ ನಾಗಚೈತನ್ಯ

ಹೈದ್ರಾಬಾದ್, ಆ.8- ಟಾಲಿವುಡ್ ಅಂಗಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದ ನಟ ನಾಗಚೈತನ್ಯರ ಎರಡನೇ ಮದುವೆಗೆ ಈಗ ತೆರೆ ಬಿದ್ದಿದೆ.
ಖ್ಯಾತ ನಟಿ ಸಮಂತಾ ಅವರೊಂದಿಗೆ ವಿಚ್ಛೇದನ ಪಡೆದ ನಂತರ ನಟ ನಾಗಚೈತನ್ಯ ಮತ್ತೊಬ್ಬ ತೆಲುಗು ನಟಿ ಶೋಬಿತಾ ದುಲಿಪಾಲರೊಂದಿಗೆ ವಿವಾಹ ಆಗುವ ಸುದ್ದಿ ದಟ್ಟವಾಗಿ ಹರಡಿತ್ತು. ಈಗ ಸದ್ದಿಲ್ಲದೆ ಈ ಜೋಡಿಯ ನಿಶ್ಚಿತಾರ್ಥವು ಇಂದು ನೆರವೇರಿದ್ದು ಈ ಸಮಾರಂಭದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ತಮ್ಮ ಮಗನ ನಿಶ್ಚಿತಾರ್ಥದ ಸುದ್ದಿಯನ್ನು ಸ್ವತಃ ಅಕ್ಕಿನೇನಿ ನಾಗಾರ್ಜುನ್ ಅವರೇ ಸ್ಪಷ್ಟಪಡಿಸಿದ್ದು, `ಇವತ್ತು ಬೆಳಗ್ಗೆ ನಟಿ ಶೋಬಿತಾ ದುಲಿಪಾಲರ ಜೊತೆ ನನ್ನ ಪುತ್ರ ನಾಗಚೈತನ್ಯನ ನಿಶ್ಚಿತಾರ್ಥ ನಡೆದಿದೆ ಎಂಬ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾನು ಅತೀವ ಸಂತಸವಾಗುತ್ತಿದೆ. ಶೋಭಿತಾಳನ್ನು ನಮ್ಮ ಮನೆಗೆ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದ್ದು, ಈ ಜೋಡಿಯನ್ನು ನೀವೆಲ್ಲರೂ ತುಂಬು ಹೃದಯದಿಂದ ಹಾರೈಸಿ’ ಎಂದು ಟ್ವೀಟ್ ಮಾಡಿದ್ದಾರೆ.

ನಟ ನಾಗಚೈತನ್ಯ ಕೂಡ ಟ್ವೀಟ್ ಮಾಡಿದ್ದು 8, 8, 8 ಅನಂತ ಪ್ರೀತಿಯ ಆರಂಭ ಎಂದು ಟ್ವೀಟ್ ಮಾಡಿದ್ದಾರೆ. ಚಿತ್ರರಂಗದ ಸಾಕಷ್ಟು ಮಂದಿಗೆ ಈ ದಿನವು ಅತ್ಯಂತ ಶುಭಕರವಾಗಿದ್ದು, ಈ ದಿನವೇ ನಾಗಚೈತನ್ಯ ಹಾಗೂ ಶೋಭಿತಾರವರ ನಿಶ್ಚಿತಾರ್ಥವು ನಡೆದಿರುವುದು ನಾಗಚೈತನ್ಯ ಹಾಗೂ ನಾಗಾರ್ಜುನ್ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

RELATED ARTICLES

Latest News