Friday, September 20, 2024
Homeರಾಷ್ಟ್ರೀಯ | Nationalನಾಗಮಂಗಲ ಕೋಮುಗಲಭೆ : ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ ಎಫ್‌ಎಸ್‌‍ಎಲ್‌ ತಂಡ

ನಾಗಮಂಗಲ ಕೋಮುಗಲಭೆ : ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ ಎಫ್‌ಎಸ್‌‍ಎಲ್‌ ತಂಡ

Nagamangala Communal Riot: FSL team collected many evidences

ನಾಗಮಂಗಲ,ಸೆ.13- ಪಟ್ಟಣದ ಬದ್ರಿಕೊಪ್ಪಲಿನಲ್ಲಿ ನಡೆದ ಗಲಭೆ ಸ್ಥಳಕ್ಕೆ ಎಫ್‌ಎಸ್‌‍ಎಲ್‌ ತಂಡ ಭೇಟಿ ನೀಡಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸ್ಥಳೀಯ ಪೊಲೀಸರೊಂದಿಗೆ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಸುಟ್ಟು ಕರಕಲಾದ ಅಂಗಡಿಗಳಿಗೆ ತೆರಳಿ ಅದರ ಮಾಲೀಕರುಗಳಿಂದ ಮಾಹಿತಿ ಪಡೆದು, ಸ್ಥಳದಲ್ಲಿ ದೊರೆತ ವಸ್ತುಗಳು, ಬಾಟಲಿಗಳು, ಕಲ್ಲುಗಳು, ದೊಣ್ಣೆಗಳನ್ನು ವಶಕ್ಕೆ ಪಡೆದಿದೆ.

ಪೆಟ್ರೋಲ್‌ ಬಾಂಬ್‌ನಿಂದಾಗಿ ವಸ್ತುಗಳು ಕರಕಲಾಗಿರುವುದು ಕಂಡುಬಂದಿದ್ದು, ಸಂಗ್ರಹಿಸಿರುವ ವಸ್ತುಗಳನ್ನೆಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.ಇದು ಪೂರ್ವನಿಯೋಜಿತ ಸಂಚು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸ್ಥಳದಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗುತ್ತಿದ್ದಾರೆ.

ಸ್ಥಳದಲ್ಲಿ ಮೈಸೂರು ವಲಯದ ಡಿಐಜಿಪಿ ಡಾ.ಬೋರಲಿಂಗಯ್ಯ ಮೊಕ್ಕಾಂ ಹೂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಾಳೆವರೆಗೂ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ.ಮೊನ್ನೆ ರಾತ್ರಿ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಪ್ರಾರ್ಥನಾ ಮಂದಿರದ ಬಳಿ ಬರುತ್ತಿದ್ದಂತೆ ಕಿಡಿಗೇಡಿಗಳು ಏಕಾಏಕಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ 14ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿಕೊಂಡು 52 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

RELATED ARTICLES

Latest News