Friday, April 4, 2025
Homeಜಿಲ್ಲಾ ಸುದ್ದಿಗಳು | District Newsಪಾಳುಬಿದ್ದ ಜಮೀನಿನಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆ : ಅತ್ಯಾಚಾರ ಶಂಕೆ

ಪಾಳುಬಿದ್ದ ಜಮೀನಿನಲ್ಲಿ ಮಹಿಳೆಯ ಬೆತ್ತಲೆ ಶವ ಪತ್ತೆ : ಅತ್ಯಾಚಾರ ಶಂಕೆ

ನಾಗಮಂಗಲ,ಜ.14- ಪಾಳುಬಿದ್ದ ಜಮೀನಲ್ಲಿ ಮಹಿಳೆಯ ಬೆತ್ತಲೆ ಮೃತ ದೇಹ ಪತ್ತೆಯಾಗಿರುವ ಘಟನೆ ಬೆಳ್ಳೂರು ಗ್ರಾಮಾಂತರ ಠಾಣಾ ವ್ಯಾಪಿಯಲ್ಲಿ ನಡೆದಿದೆ. ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಜಮೀನಿನ ಪೆಪೊದೆಯಲ್ಲಿ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ತಿರುಮಲಪುರ ಗ್ರಾಮದ 29 ವರ್ಷದ ಮಹಿಳೆಯ ಬೆತ್ತಲೆ ಮೃತ ದೇಹ ಕಳೆದ ರಾತ್ರಿ ಪತ್ತೆಯಾಗಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಅಗತ್ಯ : ಲೆಟರ್ಮ್

ಮೃತಳು ಬುದ್ಧಿಮಾಂದ್ಯ ಮಹಿಳೆ ಎಂದು ಹೇಳಲಾಗಿದ್ದು ,ಈಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆಮಾಡಿರುವ ಶಂಕೆ ವ್ಯಕ್ತವಾಗಿದೆ. ನಾಲ್ಕು ದಿನಗಳ ಹಿಂದೆ ಮನೆಯಿಂದ ಹೊರ ಹೋಗಿದ್ದ ಮಹಿಳೆ ಬಗ್ಗೆ ದೂರು ನೀಡಲಾಗಿತ್ತು ಆದರೆ ಬೆತ್ತಲೆ ಶವವಾಗಿ ಪತ್ತೆಯಾಗಿವುದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಘಟನಾ ಸ್ಥಳಕ್ಕೆ ಮಂಡ್ಯ ಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News