Thursday, July 4, 2024
Homeಇದೀಗ ಬಂದ ಸುದ್ದಿನರೇಂದ್ರ ಮೋದಿ 3.0 ಯುಗಾರಂಭಕ್ಕೆ ಕ್ಷಣಗಣನೆ

ನರೇಂದ್ರ ಮೋದಿ 3.0 ಯುಗಾರಂಭಕ್ಕೆ ಕ್ಷಣಗಣನೆ

ನವದೆಹಲಿ, ಜೂ.9- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭವ್ಯ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಮೂರನೆ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದು ಹೊಸ ಇತಿಹಾಸ ಸೃಷ್ಟಿಸುತ್ತಿದ್ದಾರೆ. ರಾಷ್ಟ್ರಪತಿ ಅಂಗಳದಲ್ಲಿ ನಡೆಯಲಿರುವ ಭವ್ಯ ಸಮಾರಂಭದಲ್ಲಿ ಹಲವಾರು ವಿದೇಶಿ ಗಣ್ಯರ ಸಮ್ಮುಖದಲ್ಲಿ ದೇಶದ 18ನೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪದಗ್ರಹಣ ಮಾಡಲಿದ್ದಾರೆ.

ಇದಕ್ಕಾಗಿ ರಾಷ್ಟ್ರಪತಿ ಭವನ ಕಂಗೊಳಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಆಕರ್ಷಣೀ ಯರಾಗಿ ಕಂಗೊಳಿಸಿದ್ದಾರೆ. ಇಡೀ ವಿಶ್ವದಲ್ಲೇ ಕೋಟ್ಯಾನುಕೋಟಿ ಜನ ಈ ಸಮಾರಂಭವನ್ನು ವೀಕ್ಷಿಸುತ್ತಿದ್ದು, ಇದು ಹೊಸ ವಿಶ್ವದಾಖಲೆ ಎಂದು ಬಣ್ಣಿಸಲಾಗಿದೆ. ಟಿಡಿಪಿ, ಜೆಡಿಯು, ಎಲ್‍ಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮೈತ್ರಿಯೊಂದಿಗೆ ಎನ್‍ಡಿಎ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದರಿಂದ ಭಾರೀ ನಿರೀಕ್ಷೆಗಳು ಎದುರಾಗಿವೆ.

ಈ ನಡುವೆ ಬೆಳಗ್ಗೆ 9 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜಘಾಟ್‍ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಸ್ಮಾರಕಕ್ಕೆ ನಮನ ಸಲ್ಲಿಸಿದ ನಂತರ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿ ಸಂಭಾವ್ಯ ಸಚಿವರು ಹಾಗೂ ಬಿಜೆಪಿ ಉನ್ನತ ಮಟ್ಟದ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಮೋದಿ ಅವರ ಪಟ್ಟಾಭಿಷೇಕ ಮಹೋತ್ಸವದಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮ್ ಸಿಂಘೆ, ಮಾಲ್ಡೀವ್ಸ್ ಪ್ರಧಾನಿ ಮಹಮ್ಮದ್ ಮೋಯಿಸಾ, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗುನಾಥ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್,ಭೂತಾನ್ ಪ್ರಧಾನಿ ತ್ಸೆರಿಂಗ್ ತಬ್ಲೆ ಸೇರಿದಂತೆ ಹಲವಾರು ವಿದೇಶಿ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.

ಇದು ಮುಂದಿನ ದಿನಗಳಲ್ಲಿ ಭಾರತದ ಅಕ್ಕಪಕ್ಕದ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸುವ ಆಶಯ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಕಳೆದ 2014ರಲ್ಲಿ ಬಿಜೆಪಿ ಸರ್ಕಾರ ಅ„ಕಾರಕ್ಕೆ ಬಂದ ನಂತರ ನಡೆದಿದ್ದ ಮೋದಿ ಅವರು ಪ್ರಧಾನಿಯಾಗಿ ಮೊದಲ ಬಾರಿಗೆ ಗೌಪ್ಯತೆ ಸ್ವೀಕರಿಸುವ ಸಮಾರಂಭದಲ್ಲಿ ಸಾರ್ಕ್ ದೇಶಗಳು ಸೇರಿದಂತೆ ಹಲವಾರು ಗಣ್ಯರು ಬಂದಿದ್ದರು.

ಈ ಬಾರಿ ವಿಶೇಷ ಸಾಧಕರಿಗೂ ಆಹ್ವಾನ ನೀಡಲಾಗಿದ್ದು, ಇದರಲ್ಲಿ ವಂದೇ ಭಾರತ್ ರೈಲಿನ ಲೋಕೋ ಪೈಲೆಟ್ ಸುರೇಖಾ ಯಾದವ್ ಸೇರಿದಂತೆ 10 ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಇದಲ್ಲದೆ, ಪೌರ ಕಾರ್ಮಿಕರು, ಶ್ರಮ ಜೀವಿಗಳು ಸೇರಿದಂತೆ ಹಲವಾರು ಸಾಧಕರು ಕಾಣಿಸಿಕೊಳ್ಳುತ್ತಿದ್ದಾರೆ. ಬಹು ಮುಖ್ಯವಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಪ್ರಮುಖರ ಪಟ್ಟಿಯಲ್ಲಿ ಪ್ರಹ್ಲಾದ್ ಜೋಷಿ, ಶಿವರಾಜ್‍ಸಿಂಗ್ ಚೌಹಾಣ್, ಎಚ್.ಡಿ.ಕುಮಾರಸ್ವಾಮಿ, ನಿತಿನ್ ಗಡ್ಕರಿ, ಅಮಿತ್ ಷಾ,ಲಲನ್‍ಸಿಂಗ್, ಸಂಜಯ್ ಝಾ, ರಾಮನಾಥ್ ಠಾಕೂರ್, ಚಿರಾಗ್ ಪಾಸ್ವಾನ್, ರಾಮ್‍ಮೋಹನ್ ನಾಯ್ಡು, ಮನೋಹರ್‍ಲಾಲ್ ಖಟ್ಟರ್, ಸರ್ಬಾನಂದ ಸೋನೋವಾಲ್ ಸೇರಿದಂತೆ ಹಲವರು ಇದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಸ್ವಾತಂತ್ರ್ಯ ನಂತರ ಜವಾಹರ್‍ಲಾಲ್ ನೆಹರು ಅವರು 1952, 1957, 1962ರಲ್ಲಿ ಸತತ ಮೂರು ಬಾರಿಗೆ ಪ್ರಧಾನಿಯಾಗಿದ್ದರು. ಈಗ ಅದೇ ಸಾಲಿನಲ್ಲಿ ನರೇಂದ್ರ ಮೋದಿ ಅವರು 2014, 2019 ಮತ್ತು 2024ರಲ್ಲಿ ಈಗ ಪ್ರಧಾನಿಯಾಗಿ ಮೂರನೆ ಬಾರಿಗೆ ಅ„ಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಪದಗ್ರಹಣ ಕಾರ್ಯಕ್ರಮಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಕೂಡ ಭಾಗಿಯಾಗಲಿದ್ದಾರೆ.

RELATED ARTICLES

Latest News