Friday, September 20, 2024
Homeಕ್ರೀಡಾ ಸುದ್ದಿ | Sportsಟೀಮ್ ಇಂಡಿಯಾ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುತ್ತೇವೆ : ನಾಥೇನ್ ಲಯಾನ್

ಟೀಮ್ ಇಂಡಿಯಾ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುತ್ತೇವೆ : ನಾಥೇನ್ ಲಯಾನ್

Nathan Lyon tips Border Gavaskar trophy clean sweep vs India

ನವದೆಹಲಿ, ಸೆ.18– ನವೆಂಬರ್ ಅಂತ್ಯದಿಂದ ಆರಂಭವಾಗಲಿರುವ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತದ ವಿರುದ್ಧ 5-0 ಅಂತರದಿಂದ ಕ್ಲೀನ್ಸ್ವೀಪ್ ಸಾಧಿಸುತ್ತೇವೆ ಎಂಬ ಆತವಿಶ್ವಾಸವನ್ನು ಆಸೀಸ್ನ ಅನುಭವಿ ಸ್ಪಿನ್ನರ್ ನಾಥೇನ್ ಲಯಾನ್ ವ್ಯಕ್ತಪಡಿಸಿದ್ದಾರೆ.

ಕಳೆದ ದಶಕದಿಂದ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವೇ ಪ್ರಾಬಲ್ಯ ಸಾಧಿಸಿದ್ದು, 2018-19 ಹಾಗೂ 2020-21ರಲ್ಲಿ ಆಸೀಸ್ ನೆಲದಲ್ಲೇ ಕಾಂಗರೂ ಪಡೆ ವಿರುದ್ಧ ಗೆಲುವು ಸಾಧಿಸಿದ್ದು ಈ ಬಾರಿ ಸರಣಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸುವ ಹುಮಸ್ಸಿನಲ್ಲಿದೆ. ಆದರೆ ಶತಾಯ ಗತಾಯ ಈ ಬಾರಿ ಸರಣಿ ವಶಪಡಿಸಿಕೊಳ್ಳಲು ಆಸೀಸ್ ರಣತಂತ್ರ ರೂಪಿಸುತ್ತಿದೆ.

ಈ ಕುರಿತು ಮಾತನಾಡಿರುವ ಆಸೀಸ್ ಅನುಭವಿ ಸ್ಪಿನ್ನರ್ ನಾಥೇನ್ ಲಯಾನ್, `ನಮ ತಂಡ ಬಾರ್ಡರ್- ಗವಾಸ್ಕರ್ ಸರಣಿ ಗೆದ್ದು ದಶಕಗಳೇ ಸಂದಿವೆ. ಭಾರತದಲ್ಲಿ ಇಂಗ್ಲೆಂಡ್ ಟೆಸ್ಟ್ ಸರಣಿ ಆಡಿದ ಬಳಿಕ ನಾನು ಬಳಿಕ ನಾನು ನಮ ಸರಣಿಯ ಕುರಿತು ಆಲೋಚಿಸಿದ್ದೆ. ಅಂದಿನ ಟೆಸ್ಟ್ ಸರಣಿಯ ಕೆಲವು ಪಂದ್ಯಗಳನ್ನು ನಾನು ವೀಕ್ಷಿಸಿದ್ದೆ. ಏಕೆಂದರೆ ನಾನು ಕ್ರಿಕೆಟ್ ಅನ್ನು ತುಂಬಾ ಇಷ್ಟಪಡುತ್ತೇನೆ. ಆಸ್ಟ್ರೇಲಿಯಾ ಈ ಬಾರಿ 5-0 ಯಿಂದ ಸರಣಿ ಜಯಿಸುತ್ತದೆ ಎಂಬುದು ನನ್ನ ಅನಿಸಿಕೆಯಾಗಿದೆ’ ಎಂದು ಹೇಳಿದ್ದಾರೆ.

`ಸರಣಿಯಲ್ಲಿ ಬ್ಯಾಟರ್ಗಳು ಸಾಕಷ್ಟು ರನ್ಗಳನ್ನು ಗಳಿಸಬೇಕು. ನಮಲ್ಲಿ ಶತಕ ಬಾರಿಸುವ ಹಲವು ಆಟಗಾರರಿದ್ದಾರೆ. ಸ್ಟೀವ್ ಸಿತ್, ಮಾರ್ನೂಸ್ ಲ್ಯಾಬುಶೇನ್ ಹಾಗೂ ಟ್ರಾವಿಸ್ ಹೆಡ್ರಂತಹ ಬಲಿಷ್ಠ ಟಾಪ್ ಆರ್ಡರ್ ಬ್ಯಾಟ್ಸ್ ಮನ್ಗಳಿದ್ದು, ಅವರಿಂದ ನಾನು 100 ಅಥವಾ 107 ರನ್ ಬಯಸದೆ, 180-200 ರನ್ಗಳನ್ನು ನಿರೀಕ್ಷಿಸುತ್ತಿದ್ದೇನೆ’ ಎಂದು ಲಯಾನ್ ತಿಳಿಸಿದ್ದಾರೆ.

ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ನಾಥೇನ್ ಲಯನ್ ಅವರು 27 ಪಂದ್ಯಗಳಿಂದ 121 ವಿಕೆಟ್ ಪಡೆದು ಟಾಪ್ ವಿಕೆಟ್ ಟೇಕರ್ ಆಗಿದ್ದಾರೆ. ಇದೇ ಮೊದಲ ಬಾರಿಗೆ ಈ ಸರಣಿಯಲ್ಲಿ 5 ಪಂದ್ಯಗಳು ಆಯೋಜನೆಗೊಂಡಿದ್ದು, ಮೊದಲ ಪಂದ್ಯವು ನವೆಂಬರ್ 22 ರಂದು ಪರ್ತ್ನಲ್ಲಿ ಆಯೋಜನೆಗೊಂಡಿದೆ.

RELATED ARTICLES

Latest News