ಬೆಂಗಳೂರು,ಆ.13- ದೇಶಭಕ್ತಿ ಮತ್ತು ಸುಸ್ಥಿರತೆಯನ್ನು ಸಂಯೋಜಿಸುವ ಉಪಕ್ರಮದಲ್ಲಿ ದ ಗ್ರೀನ್ ಸ್ಕೂಲ್ ಬೆಂಗಳೂರಿನ ವತಿಯಿಂದ ಗಣರಾಜ್ಯೋತ್ಸವದಂದು ಸಂಪೂರ್ಣವಾಗಿ ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ರಾಷ್ಟ್ರಧ್ವಜ ತಯಾರಿಸಲಾಗಿದೆ.
ಪ್ಲಾಸ್ಟಿಕ್ ಬಾಟಲಿಗಳಿಂದ ತಯಾರಿಸಿದ ವಿಶಿಷ್ಟವಾದ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲು ಸಿದ್ಧತೆ ನಡೆದಿದೆ. ಮರುಬಳಕೆಯ ಪ್ಲಾಸ್ಟಿಕ್ ಬಾಟಲಿಗಳಿಂದ ರಾಷ್ಟ್ರಧ್ವಜವನ್ನು ಮಾಡಿ ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಮತ್ತು ತ್ಯಾಜ್ಯವನ್ನು ಅರ್ಥಪೂರ್ಣವಾಗಿ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲು ಇದನ್ನು ಕೈಗೊಳ್ಳಲಾಗಿದೆ.
ಈ ಬಗ್ಗೆ ಮಾತನಾಡಿದ ಪ್ರಾಂಶುಪಾಲೆ ಉಷಾ ಅಯ್ಯರ್, ಪ್ಲಾಸ್ಟಿಕ್ ತ್ಯಾಜ್ಯವನ್ನು ಜವಳಿಯಾಗಿ ಪರಿವರ್ತಿಸುವಲ್ಲಿ ಪರಿಣತಿ ಹೊಂದಿರುವ ಕಾನ್ಸುರ ಮೂಲದ ಮರುಬಳಕೆ ಕಂಪನಿಯೊಂದಿಗೆ ಜೊತೆಗೂಡಿ 35,000 ಬಾಟಲಿಗಳಿಂದ ರಾಷ್ಟ್ರಧ್ವಜವನ್ನು ಮಾಡಲಾಗಿದೆ ಎಂದು ತಿಳಿಸಿದರು. ಈ ಉಪಕ್ರಮವು ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಮತ್ತು ತ್ಯಾಜ್ಯವನ್ನು ಅರ್ಥಪೂರ್ಣವಾಗಿ ಮರುಬಳಕೆ ಮಾಡುವುದು ಹೇಗೆ ಎಂಬುದನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.
- ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ರಾಜ್ಯಾದ್ಯಂತ ಭುಗಿಲೆದ್ದ ಪ್ರತಿಭಟನೆ
- ಬೆಂಗಳೂರಲ್ಲಿ ಶಾಲಾ ಬಸ್ಗೆ ಬೆಂಕಿಬಿದ್ದು ಅಪರಿಚಿತ ವ್ಯಕ್ತಿ ಸಜೀವ ದಹನ
- ಬೆಂಗಳೂರಲ್ಲಿ ಹಾಡಹಗಲೇ ಲೇಡಿಸ್ ಪಿಜಿಗೆ ನುಗ್ಗಿ ಚಿನ್ನಾಭರಣ , ಮೊಬೈಲ್ ದರೋಡೆ
- ವಿಧಾನಸಭೆಯಲ್ಲಿ ಪ್ರತಿದ್ವನಿಸಿದ ಕೊಪ್ಪಳದ ಗವಿ ಸಿದ್ದಪ್ಪ ಕೊಲೆ ಪ್ರಕರಣ
- ರಾಜಸ್ಥಾನ : ಪಿಕಪ್ ವ್ಯಾನ್ ಟ್ರಕ್ಗೆ ಡಿಕ್ಕಿಯಾಗಿ 7 ಮಕ್ಕಳು ಸೇರಿ 11 ಜನರು ಸಾವು