ಗುವಾಹಟಿ,ಜ.5- ಅಸ್ಸಾಂನ ಮಧ್ಯ ಭಾಗದಲ್ಲಿ ಇಂದು ಬೆಳಿಗ್ಗೆ 5.1 ತೀವ್ರತೆಯ ಭೂಕಂಪ ಸಂಭವಿಸಿದೆ ಯಾವುದೇ ಸಾವಿ- ನೋವು ಸಂಭವಿಸಿಲ್ಲ. ಆದರೆ ಕೆಲವೆಡೆ ಕಟ್ಟಡಗಳು ಬಿರುಕುಬಿಟ್ಟು ಹಾನಿಗೊಳಗಾಗಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರವು ಬ್ರಹಪುತ್ರದ ದಕ್ಷಿಣ ದಂಡೆಯ ಮೋರಿಗಾಂವ್ ಜಿಲ್ಲೆಯಲ್ಲಿ 50 ಕಿಮೀ ಆಳದಲ್ಲಿ ಕೇಂದ್ರ ಬಿಂದು ಇದ್ದು ಬೆಳಿಗ್ಗೆ 4.17 ಕ್ಕೆ ಭೂಕಂಪವನ್ನು ದಾಖಲಿಸಿದೆ ಎಂದು ಹೇಳಿದೆ.
ನೆರೆಯ ಕಾಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಪೂರ್ವ ಕರ್ಬಿ ಆಂಗ್ಲಾಂಗ್, ಪಶ್ಚಿಮ ಕಬಿರ್,ಆಂಗ್ಲಾಂಗ್, ಹೊಜೈ, ದಿಮಾ ಹಸಾವೊ, ಗೋಲಾಘಾಟ್, ಜೋರ್ಹತ್, ಶಿವಸಾಗರ್, ಚರೈಡಿಯೊ, ಕ್ಯಾಚಾರ್, ಕರೀಮ್‌ಗಂಜ್, ಹೈಲಕಂಡಿ, ಧುಬ್ರಿ, ದಕ್ಷಿಣ ಸಲಾರಾ-ಮಂಕಚಾರ್ ಮತ್ತು ಗೋಲ್‌ಪಾರಾ ಜಿಲ್ಲೆಗಳಲ್ಲಿ ಜನರು ಕಂಪನವನ್ನು ಅನುಭವಿಸಿದರು.
ಬ್ರಹ್ಮಪುತ್ರ ನದಿಯ ಉತ್ತರ ದಂಡೆಯಲ್ಲಿರುವ ದರ್ರಾಂಗ್, ತಮುಲ್ಪುರ್ ಸೋನಿತ್ಪುರ್, ಕಾಮರೂಪ್, ಬಿಸ್ವಾನಾಥ್, ಉದಲ್ಗುರಿ, ನಲ್ಬಾರಿ, ಬಜಾಲಿ, ಬಾರ್ಪೇಟಾ, ಬಕ್ಸಾ, ಚಿರಾಂಗ್, ಕೊಕ್ರಝಾರ್,ಬೊಂಗೈಗಾಂವ್ ಮತ್ತು ಲಖಿಂಪುರದಲ್ಲೂ ಕಂಪನದ ಅನುಭವವಾಗಿದೆ.
ಮಧ್ಯ-ಪಶ್ಚಿಮ ಅರುಣಾಚಲ ಪ್ರದೇಶದ ಕೆಲವು ಪ್ರದೇಶಗಳು, ಸಂಪೂರ್ಣ ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಹಲವಾರು ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಬಹುದು.
ಮಧ್ಯ-ಪೂರ್ವ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳು ಸಹ ನಡುಗಿವೆ ಎಂದು ವರದಿ ತೋರಿಸಿದೆ.
ಮಲಗಿದ್ದ ಜನರು ಭೂಮಿ ನಡುಕದ ಹಿಂದ ಎದ್ದು ತಮ ಮನೆಗಳಿಂದ ಹೊರಗೆ ಬಂದಿದ್ದಾರೆ. ಹಳೆಯ ಮನೆಗಳು ಕುಸಿದಿದ್ದು, ರಸ್ತೆಗಳೂ ಕೂಡ ಬಿರುಕುಬಿಟ್ಟಿವೆ. ಕೆಲವರಿಗೆ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆಲವೆಡೆ ಅಂಗಡಿಗೆ ಅಳವಡಿಸಲಾಗಿದ್ದ ಕಮಾನುಗಳೂ ಕೂಡ ಕುಸಿದಿದ್ದು, ಜನರು ಭೀತಿಗೊಂಡಿದ್ದಾರೆ.
