Homeರಾಷ್ಟ್ರೀಯಪ್ರಧಾನಿ ಮೋದಿ ಕುರಿತು ವಿವಾದಾತ್ಮಕ ಹೇಳಿಕೆ : ಖರ್ಗೆ ವಿರುದ್ಧ ಎಫ್‌ಐಆರ್‌

ಪ್ರಧಾನಿ ಮೋದಿ ಕುರಿತು ವಿವಾದಾತ್ಮಕ ಹೇಳಿಕೆ : ಖರ್ಗೆ ವಿರುದ್ಧ ಎಫ್‌ಐಆರ್‌

ಪಾಟ್ನಾ, ಅ. 26 (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌‍ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಬಿಹಾರದ ಬಿಜೆಪಿ ಕಾರ್ಯಕರ್ತರೊಬ್ಬರು ಪೊಲೀಸ್‌‍ ದೂರು ದಾಖಲಿಸಿದ್ದಾರೆ.

ಪಾಟ್ನಾದ ಕೊತ್ವಾಲಿ ಪೊಲೀಸ್‌‍ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದಂತೆ, ಖರ್ಗೆ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ನಿನ್ನೆ ಸಂಜೆ ದೂರು ಸಲ್ಲಿಕೆಯಾಗಿದೆ. ಈ ಘಟನೆಯು ಗಾಂಧಿ ಮೈದಾನ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ನಾವು ಈ ದೂರು ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಪಾಟ್ನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಪ್ರಧಾನಿ ಎಲ್ಲಿಗೂ ಹೋಗುವುದಿಲ್ಲ ಎಂದು ಸಭಿಕರೊಬ್ಬರು ಹೇಳಿದಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಖರ್ಗೆ ಅವರು ಮೋದಿ ಕಾ ಬಾಪ್‌ ಭೀ ಜಾಯೇಗಾ (ಮೋದಿ ಅವರ ತಂದೆ ಕೂಡ ಹೋಗಬೇಕಾಗುತ್ತದೆ) ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡರು. ದೂರು ದಾಖಲಿಸಿದ ಬಿಜೆಪಿ ಕಾರ್ಯಕರ್ತ ಕೃಷ್ಣ ಕುಮಾರ್‌ ಸಿಂಗ್‌ ಎಂಬುವರು, ಈ ಹೇಳಿಕೆಗಾಗಿ 24 ಗಂಟೆಗಳ ಒಳಗೆ ಕ್ಷಮೆ ಕೇಳುವಂತೆ ಖರ್ಗೆ ಅವರನ್ನು ಆಗ್ರಹಿಸಿದ್ದಾರೆ.

RELATED ARTICLES

Latest News