Homeರಾಷ್ಟ್ರೀಯ'ಘರ್‌ ವಾಪಸಿ' ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ

‘ಘರ್‌ ವಾಪಸಿ’ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ತಯಾರಿ

ಬೆಂಗಳೂರು,ಅ.22- ಪ್ರತಿಪಕ್ಷ ಬಿಜೆಪಿಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜಕೀಯ ಲೆಕ್ಕಾಚಾರಗಳು ಗರಿಗೆದರಿರುವ ಸೂಚನೆಗಳು ಕಾಣಿಸುತ್ತಿವೆ.ಪಕ್ಷದಿಂದ ದೂರ ಸರಿದಿರುವ, ಉಚ್ಚಾಟನೆಗೊಂಡಿರುವ ಅಥವಾ ಅಮಾನತುಗೊಂಡಿರುವ ಹಿರಿಯ ನಾಯಕರನ್ನು ಮತ್ತೆ ಮಾತೃಪಕ್ಷಕ್ಕೆ ಕರೆತರುವ ಮೂಲಕ ಸಂಘಟನೆಯನ್ನು ಬಲಪಡಿಸಬೇಕೆಂಬ ಚರ್ಚೆ ಪಕ್ಷದ ವಲಯದಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ.ಈ ಬೆಳವಣಿಗೆಗಳ ನಡುವೆ ಘರ್‌ ವಾಪಾಸಿ ಎಂಬ ರಾಜಕೀಯ ಪರಿಕಲ್ಪನೆ ಬಿಜೆಪಿಯೊಳಗೆ ಮತ್ತೆ ಮುನ್ನೆಲೆಗೆ ಬಂದಿದೆ.

ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌‍.ಈಶ್ವರಪ್ಪ ಸೇರಿದಂತೆ ಪಕ್ಷದೊಂದಿಗೆ ಅಂತರ ಕಾಯ್ದುಕೊಂಡಿರುವ ನಾಯಕರನ್ನು ಮತ್ತೆ ಬಿಜೆಪಿಯ ಮುಖ್ಯವಾಹಿನಿಗೆ ಕರೆತರುವ ಅಗತ್ಯದ ಬಗ್ಗೆ ಬೆಂಬಲಿಗರು ಹಾಗೂ ಕಾರ್ಯಕರ್ತರ ಒಂದು ವರ್ಗದಲ್ಲಿ ಒತ್ತಾಯ ಕೇಳಿಬರುತ್ತಿದೆ.

ಯತ್ನಾಳ್‌ವಿಜಯೇಂದ್ರ ಭೇಟಿ :
ಇತ್ತೀಚೆಗೆ ಧಾರವಾಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಭೇಟಿಯಾಗಿದ್ದಾರೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಇಬ್ಬರ ನಡುವೆ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ಮಾತುಕತೆ ನಡೆದಿತ್ತು ಎಂಬ ಮಾಹಿತಿ ಚರ್ಚೆಗೆ ಗ್ರಾಸವಾಗಿದೆ.
ಈ ಭೇಟಿ ಮುಂದಿನ ದಿನಗಳಲ್ಲಿ ಬಿಜೆಪಿಯೊಳಗಿನ ಸಮೀಕರಣಗಳಲ್ಲಿ ಬದಲಾವಣೆಗೆ ಮುನ್ನುಡಿಯಾಗಬಹುದೇ ಎಂಬ ಪ್ರಶ್ನೆ ಎದುರಾಗಿದೆ.

ಆದರೂ, ಯತ್ನಾಳ್‌ ಅವರನ್ನು ಮತ್ತೆ ಪಕ್ಷಕ್ಕೆ ಕರೆತರಬೇಕು ಎಂಬ ಅಭಿಪ್ರಾಯ ಅವರ ಬೆಂಬಲಿಗರಲ್ಲಿ ವ್ಯಕ್ತವಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರಭಾವ ಹೊಂದಿರುವ ಅವರು, ಪ್ರಖರ ಹಿಂದೂಪರ ನಿಲುವುಗಳ ಮೂಲಕ ತಮದೇ ಆದ ರಾಜಕೀಯ ನೆಲೆಯನ್ನು ರೂಪಿಸಿಕೊಂಡಿದ್ದಾರೆ. ಅವರ ಮರುಪ್ರವೇಶದಿಂದ ಪಕ್ಷದ ಸಂಘಟನಾತಕ ಶಕ್ತಿ ಹೆಚ್ಚಬಹುದು ಮತ್ತು ಹಿಂದೂ ಮತಗಳ ಕ್ರೋಢೀಕರಣಕ್ಕೆ ನೆರವಾಗಬಹುದು ಎಂಬುದು ಅವರನ್ನು ಬೆಂಬಲಿಸುವವರ ವಾದವಾಗಿದೆ.

ಇನ್ನೊಂದೆಡೆ, ಯತ್ನಾಳ್‌ ಅವರ ಹಿಂದಿನ ಹೇಳಿಕೆಗಳು, ಪಕ್ಷದ ರಾಜ್ಯ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯಗಳು ಮತ್ತು ಶಿಸ್ತು ಕ್ರಮಗಳ ಹಿನ್ನೆಲೆಯನ್ನು ಗಮನಿಸಿದರೆ, ಅವರನ್ನು ಮರಳಿ ಕರೆತರುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ರಾಜ್ಯ ನಾಯಕತ್ವದ ಒಪ್ಪಿಗೆ ಮಾತ್ರವಲ್ಲದೆ, ಪಕ್ಷದ ರಾಷ್ಟ್ರೀಯ ನಾಯಕರ ರಾಜಕೀಯ ನಿರ್ಧಾರವೂ ನಿರ್ಣಾಯಕವಾಗಬಹುದು.

ಈಶ್ವರಪ್ಪ ಅವರ ಮರುಪ್ರವೇಶಕ್ಕೂ ಪ್ರಯತ್ನ? :
ಶಿವಮೊಗ್ಗದಲ್ಲಿ ಬನ್ನಿ ನೀಡುವ ನೆಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಹಾಗೂ ಕೆ.ಎಸ್‌‍.ಈಶ್ವರಪ್ಪ ಭೇಟಿಯಾಗಿದ್ದಾರೆ ಎಂಬ ವಿಚಾರವೂ ಗಮನ ಸೆಳೆದಿದೆ. ಈ ಭೇಟಿಯು ಕೇವಲ ವೈಯಕ್ತಿಕ ಸೌಹಾರ್ದದ ಭೇಟಿಯಾಗಿತ್ತೇ ಅಥವಾ ರಾಜಕೀಯ ಸಮನ್ವಯದ ಸಾಧ್ಯತೆಗಳಿಗೂ ಅವಕಾಶ ಕಲ್ಪಿಸಿತೇ ಎಂಬ ಚರ್ಚೆ ನಡೆಯುತ್ತಿದೆ.

ಬಿಜೆಪಿಯ ಹಿರಿಯ ನಾಯಕರಾಗಿದ್ದ ಈಶ್ವರಪ್ಪ ಅವರು ಪಕ್ಷದೊಂದಿಗೆ ಹೊಂದಿದ್ದ ಹಿಂದಿನ ಸಂಬಂಧ, ಶಿವಮೊಗ್ಗ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಅವರಿಗಿರುವ ವೈಯಕ್ತಿಕ ಪ್ರಭಾವ ಮತ್ತು ಕಾರ್ಯಕರ್ತರೊಂದಿಗಿನ ಸಂಪರ್ಕವನ್ನು ಪರಿಗಣಿಸಿದರೆ, ಅವರನ್ನು ಮತ್ತೆ ಪಕ್ಷದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಬಿಜೆಪಿಗೆ ರಾಜಕೀಯವಾಗಿ ಮಹತ್ವದ್ದಾಗಬಹುದು.

ಈಶ್ವರಪ್ಪ ಅವರಂತಹ ನಾಯಕರನ್ನು ದೂರವಿಟ್ಟುಕೊಂಡೇ ಚುನಾವಣಾ ಸಿದ್ಧತೆ ನಡೆಸುವುದಕ್ಕಿಂತ, ಅವರೊಂದಿಗೆ ಸಮನ್ವಯ ಸಾಧಿಸುವುದು ಪಕ್ಷಕ್ಕೆ ಅನುಕೂಲಕರವಾಗಬಹುದು ಎಂಬ ಅಭಿಪ್ರಾಯ ಬಿಜೆಪಿಯ ಬೆಂಬಲಿಗರ ಒಂದು ವರ್ಗದಲ್ಲಿದೆ.

ಅನಂತ್‌ ಕುಮಾರ್‌ ಹೆಗಡೆ ಅವರನ್ನು ಸಕ್ರಿಯಗೊಳಿಸುವ ಸವಾಲು :
ಕೇಂದ್ರ ಮಾಜಿ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರ ವಿಚಾರವೂ ಈ ಚರ್ಚೆಯಲ್ಲಿ ಪ್ರಮುಖವಾಗಿದೆ. ಪಕ್ಷದೊಳಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವಂತೆ ಕಾಣುವ ಹೆಗಡೆ ಅವರನ್ನು ಮತ್ತೆ ಸಂಘಟನಾತಕವಾಗಿ ತೊಡಗಿಸಿಕೊಳ್ಳಬೇಕೆಂಬ ಅಭಿಪ್ರಾಯ ಕೆಲವು ಬಿಜೆಪಿ ಬೆಂಬಲಿಗರಲ್ಲಿ ವ್ಯಕ್ತವಾಗುತ್ತಿದೆ. ತಮ ಪ್ರಖರ ಹಿಂದೂಪರ ಭಾಷಣಗಳು ಮತ್ತು ರಾಜಕೀಯ ನಿಲುವುಗಳಿಂದ ಗುರುತಿಸಿಕೊಂಡಿರುವ ಹೆಗಡೆ ಅವರನ್ನು ಸಕ್ರಿಯಗೊಳಿಸಿದರೆ, ಪಕ್ಷದ ಸೈದ್ಧಾಂತಿಕ ಬೆಂಬಲಿಗರಲ್ಲಿ ಹೊಸ ಉತ್ಸಾಹ ಮೂಡಬಹುದು ಎಂಬ ನಿರೀಕ್ಷೆ ಇದೆ.

RELATED ARTICLES
spot_img

Latest News