Homeರಾಜ್ಯಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 29ರೂ. ಹೆಚ್ಚಳ

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 29ರೂ. ಹೆಚ್ಚಳ

Domestic LPG Prices Raised By Rs 29, Second Hike Since US-Iran War Started

ನವದೆಹಲಿ,ಜೂ.7- ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಜನಸಾಮಾನ್ಯರಿಗೆ, ಕೇಂದ್ರ ಸರ್ಕಾರ ಹಾಗೂ ತೈಲ ಕಂಪನಿಗಳಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಗೃಹಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇಂಧನ ದರಗಳು ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಹೊಸ ದರಗಳು ಭಾನುವಾರದಿಂದಲೇ ಜಾರಿಗೆ ಬಂದಿದೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಗೃಹಬಳಕೆಯ ಸಿಲಿಂಡರ್‌ ದರ ಹೆಚ್ಚಳವಾಗಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೆ ಮೊದಲು ಕಳೆದ ಮಾರ್ಚ್‌ 7ರಂದು ಸಿಲಿಂಡರ್‌ ಬೆಲೆಯಲ್ಲಿ ಬರೋಬ್ಬರಿ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಆ ಬಳಿಕ ಈಗ ಮತ್ತೆ ?29 ಏರಿಸಿರುವುದು ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಮತ್ತಷ್ಟು ಆಘಾತ ತಂದಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ತೈಲ ಕಂಪನಿಗಳು ತಿಳಿಸಿವೆ.

ಹೊಸ ಬೆಲೆ ಎಷ್ಟು?
ಹೊಸ ದರಗಳ ಪ್ರಕಾರ, ದೆಹಲಿಯಲ್ಲಿ ಇದುವರೆಗೆ 913 ರೂಪಾಯಿಗಳಿದ್ದ ಸಿಲಿಂಡರ್‌ ಬೆಲೆ ಈಗ 942 ರೂಪಾಯಿಗಳಿಗೆ ತಲುಪಿದೆ. ಮುಂಬಯಿ, ಕೋಲ್ಕತ್ತಾ, ಚೆನ್ನೈನಂತಹ ಇತರ ಮೆಟ್ರೋ ನಗರಗಳಲ್ಲೂ ಸಿಲಿಂಡರ್‌ ದರದಲ್ಲಿ ಸುಮಾರು ಇದೇ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಮಧ್ಯಮ ವರ್ಗ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳ ಮಾಸಿಕ ಅಡುಗೆ ವೆಚ್ಚ ಹೆಚ್ಚಾಗಲಿದೆ.

ಇದೇ ಸಂದರ್ಭದಲ್ಲಿ, ಜೂನ್‌ 1ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್‌ ಬೆಲೆಯನ್ನು 42 ರೂ.ಗಳಷ್ಟು ಹೆಚ್ಚಿಸಲಾಗಿತ್ತು.. ಜಾಗತಿಕ ಮಾರುಕಟ್ಟೆಯ ಏರಿಳಿತದ ಪರಿಣಾಮ ಇತ್ತೀಚಿನ ವಾರಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ಸಿಎನ್‌ಜಿ (ಅಓಉ) ದರಗಳಲ್ಲೂ ಕಂಡುಬಂದಿದೆ. ಹೀಗಾಗಿ ಸಾರಿಗೆ, ಆಟೋ, ಟ್ಯಾಕ್ಸಿ ಮತ್ತು ವಾಣಿಜ್ಯ ವಾಹನಗಳ ಬಾಡಿಗೆಯೂ ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆ ಇದೆ.

ದರ ಪರಿಷ್ಕರಣೆಯ ನಂತರ ದೇಶದ ರಾಜಧಾನಿ ದೆಹಲಿಯಲ್ಲಿ 14.2 ಕೆಜಿಯ ಗೃಹಬಳಕೆಯ ಸಿಲಿಂಡರ್‌ ಬೆಲೆ 913 ರೂ.ನಿಂದ 942 ರೂಪಾಯಿಗೆ ಏರಿಕೆಯಾಗಿದೆ. ದೆಹಲಿ ಸೇರಿದಂತೆ ದೇಶದ ಎಲ್ಲ ಪ್ರಮುಖ ರಾಜ್ಯ ಹಾಗೂ ನಗರಗಳಲ್ಲೂ ಇಂದಿನಿಂದಲೇ ಈ ಪರಿಷ್ಕೃತ ದರಗಳು ಅನ್ವಯವಾಗಲಿವೆ. ರವಾನೆ ವೆಚ್ಚ ಮತ್ತು ಸ್ಥಳೀಯ ತೆರಿಗೆಗಳ ಆಧಾರದ ಮೇಲೆ ವಿವಿಧ ನಗರಗಳಲ್ಲಿ ಈ ದರದಲ್ಲಿ ಅಲ್ಪ ವ್ಯತ್ಯಾಸವಿರಲಿದೆ.

ಏಕೆ ಈ ಏರಿಕೆ?
ಪಶ್ಚಿಮ ಏಷ್ಯಾ (ಮಧ್ಯಪ್ರಾಚ್ಯ) ಭಾಗದಲ್ಲಿ ನಡೆಯುತ್ತಿರುವ ನಿರಂತರ ರಾಜಕೀಯ ಸಂಘರ್ಷಗಳು ಮತ್ತು ಯುದ್ಧದ ವಾತಾವರಣ ಜಾಗತಿಕ ಇಂಧನ ಪೂರೈಕೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಗ್ಯಾಸ್‌‍ ಬೆಲೆಗಳು ಗಗನಕ್ಕೇರಿವೆ.

ಜಾಗತಿಕವಾಗಿ ಇಂಧನ ದರ ಹೆಚ್ಚಾಗಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಅದಕ್ಕೆ ತಕ್ಕಂತೆ ತಕ್ಷಣ ಬೆಲೆ ಏರಿಸದ ಕಾರಣ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸುತ್ತಿದ್ದವು. ಸದ್ಯ ಮಾಡಲಾಗಿರುವ 29ರೂ ಏರಿಕೆಯು ಕಂಪನಿಗಳ ನಷ್ಟವನ್ನು ಕೇವಲ ಭಾಗಶಃ ಮಾತ್ರ ಸರಿದೂಗಿಸಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಈ ದರ ಏರಿಕೆಯು ಮಧ್ಯಮ ವರ್ಗದ ಕುಟುಂಬಗಳ ಜೇಬಿಗೆ ದೊಡ್ಡ ಕತ್ತರಿ ಹಾಕಿರುವುದಂತೂ ಸತ್ಯ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ತೈಲ ಕಂಪನಿಗಳು (ಐಒಸಿ ಎಲ್‌, ಬಿಪಿಸಿಎಲ್‌, ಎಚ್‌ಪಿಸಿಎಲ್‌) ಗೃಹಬಳಕೆದಾರರಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿದ್ದವು. ಈ ಕಾರಣದಿಂದ ಕಂಪನಿಗಳಿಗೆ ಆಗುತ್ತಿದ್ದ ನಷ್ಟವನ್ನು ಭಾಗಶಃ ಸರಿದೂಗಿಸಲು ಈ ಬೆಲೆ ಏರಿಕೆ ಮಾಡಲಾಗಿದೆ.

ಸರ್ಕಾರದ ವಿವರಣೆ :
ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಅವರು ಮಾಧ್ಯಮಗಳಿಗೆ ತಿಳಿಸಿರುವ ಪ್ರಕಾರ, ಸದ್ಯಕ್ಕೆ ದೇಶೀಯ ಅಡುಗೆ ಅನಿಲದ ಮೇಲಿನ ಅಂಡರ್‌ ರಿಕವರಿ (ಸರ್ಕಾರ/ಕಂಪನಿಗಳು ಭರಿಸುತ್ತಿರುವ ನಷ್ಟದ ಪ್ರಮಾಣ) ಇನ್ನೂ ಪ್ರತಿ ಸಿಲಿಂಡರ್‌ಗೆ ಸುಮಾರು 700 ರೂ.ಗಳಷ್ಟಿದೆ. ಅಂದರೆ ನಿಜವಾದ ಅಂತಾರಾಷ್ಟ್ರೀಯ ಬೆಲೆಗೆ ಹೋಲಿಸಿದರೆ ಗ್ರಾಹಕರು ಇನ್ನೂ ಕಡಿಮೆ ದರದಲ್ಲಿಯೇ ಸಿಲಿಂಡರ್‌ ಪಡೆಯುತ್ತಿದ್ದಾರೆ. ಆದರೂ ಸತತ ಬೆಲೆ ಏರಿಕೆ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.

RELATED ARTICLES

Latest News