ಮುಂಬೈ,ಡಿ.7- ಪರಿಶಿಷ್ಟ ಜಾತಿಯವರ ಮೀಸಲಾತಿಗೂ ತೆನೆಪದರ ಅನ್ಯವಾಗಬೇಕು ಎಂದು ಒಂದು ತೀರ್ಪಿನಲ್ಲಿ ಹೇಳಿದಕ್ಕ್ಕೆ ತಮ್ಮ ಸಮುದಾಯವರಿಂದಲೇ ಟೀಕೆಗಳನ್ನು ಎದುರಿಸಬೇಕಾಯಿತು ಎಂದು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಹೇಳಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ದೃಷ್ಟಿಕೋನದಲ್ಲಿ ಹಿಂದುಳಿದವರಿಗೆ ಬೈಸಿಕಲ್ ಒಂದನ್ನು ಕೊಡುವಂಥದ್ದು ಸದೃಢ ಕ್ರಮವಾಗಿತ್ತು. ಇಂಥ ವ್ಯಕ್ತಿ ಎಂದೀಗೂ ಆ ಬೈಸಿಕಲ್ ಅನ್ನು ಬಿಟ್ಟುಕೊಡಬಾರದು ಎಂಬುದು ಅಂಬೇಡ್ಕರ್ ಅಭಿಪ್ರಾಯವಾಗಿತ್ತೇ? ಎಂದು ಪ್ರಶ್ನಿಸಿದ ಅವರು, ಅಂಬೇಡ್ಕರ್ ಅವರು ಆ ರೀತಿ ಚಿಂತಿಸಲಿಲ್ಲ ಎಂದು ಪ್ರತಿಪಾದಿಸಿದರು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನಿವೃತ್ತರಾದ ನ್ಯಾ.ಗವಾಯಿ ಅವರು ಸಮಾನ ಅವಕಾಶ ಪ್ರವರ್ಧಿಸುವಲ್ಲಿ ಸದೃಢ ಕ್ರಮದ ಪಾತ್ರ ಎಂಬ ವಿಷಯದ ಕುರಿತು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ನೀಡುತ್ತಿದ್ದರು.
ಡಾ.ಅಂಬೇಡ್ಕರ್ ಅವರಿಗೆಅ ವರ ಪುಣ್ಯ ತಿಥಿಯಂದು ಶ್ರದ್ದಾಂಜಲಿ ಸಲ್ಲಿಸಿದ ನ್ಯಾ.ಗವಾಯಿ ಅವರು, ಈ ಮಾದರಿ ನಾಯಕ ಭಾರತದ ಸಂವಿಧಾನ ಶಿಲ್ಪಿಯಷ್ಟೇ ಅಲ್ಲ, ಅದರಲ್ಲಿ ಅಡಗಿರುವ ಸದೃಢ ಕ್ರಮಗಳ ಪ್ರತಿಪಾದಕರೂ ಆಗಿದ್ದಾರೆ ಎಂದು ಬಣ್ಣಿಸಿದರು.
