Homeರಾಷ್ಟ್ರೀಯಮಸೀದಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಧರ್ಮಗುರು

ಮಸೀದಿಯಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಧರ್ಮಗುರು

Firozabad Imam Booked For Alleged Minor Rape, Absconding

ಫಿರೋಜಾಬಾದ್‌, ಜೂ.9- (ಪಿಟಿಐ) ಅಪ್ರಾಪ್ತ ಬಾಲಕಿ ಮೇಲೆ ಮಸೀದಿಯೊಂದರಲ್ಲಿ ಧರ್ಮಗುರುವೊಬ್ಬರು ಆತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‌ ಜಿಲ್ಲೆಯ ರಾಮಗಢ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಪ್ರದೇಶದಲ್ಲಿರುವ ಜನ್ನತಿ ಮಸೀದಿಯ ಧರ್ಮಗುರುವಿನ ವಿರುದ್ಧ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರ ಪ್ರಕಾರ, ಇಮಾಮ್‌ ಜಾಕೀರ್‌ ಅಲಿ (48) ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ ಮತ್ತು ಬಿಎನ್‌ಎಸ್‌‍ ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಆರೋಪಿ ಇಮಾಮ್‌ ತಲೆಮರೆಸಿಕೊಂಡಿದ್ದು, ಅವರನ್ನು ಹುಡುಕಲಾಗುತ್ತಿದೆ. ಇಮಾಮ್‌ ಜಾಕೀರ್‌ ಅಲಿ ತಮ್ಮ ಅಪ್ರಾಪ್ತ ಮಗಳನ್ನು ಮಸೀದಿಗೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ಥೆ ಕುಟುಂಬ ಆರೋಪಿಸಿದೆ.

ರಾಮ್‌ಗಢ ಪೊಲೀಸ್‌‍ ಠಾಣಾಧಿಕಾರಿ ಸಂಜೀವ್‌ ಕುಮಾರ್‌ ದುಬೆ ಅವರು ಕುಟುಂಬವು ಈ ಕುರಿತಂತೆ ದೂರು ದಾಖಲಿಸಿದೆ ಎಂದು ಹೇಳಿದರು. ದೂರಿನ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಗಿದೆ ಮತ್ತು ನಿನ್ನೆ ಮಧ್ಯಾಹ್ನ ಬಲಿಪಶುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.ಆರೋಪಿ ಪರಾರಿಯಾಗಿದ್ದಾನೆ ಎಂದು ದುಬೆ ಹೇಳಿದರು. ಆತನನ್ನು ಬಂಧಿಸಲು ಪೊಲೀಸ್‌‍ ತಂಡಗಳನ್ನು ರಚಿಸಲಾಗಿದೆ ಮತ್ತು ಈ ವಿಷಯವನ್ನು ತನಿಖೆ ಮಾಡಲಾಗುತ್ತಿದೆ.

RELATED ARTICLES

Latest News