ಚಂಡೀಗಢ,ಜ.7- ಪರಿತ್ಯಕ್ತ ಪತ್ನಿಯನ್ನು ಮತ್ತೆ ಮನೆಗೆ ಕರೆದುಕೊಂಡು ಬಂದ ಪತಿ, ಸೊಸೆಗೆ ಬೆಳ್ಳಿ ಕಾಲುಂಗರ ನೀಡಿದ ಆಕೆಯನ್ನು ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಘಟನೆ ಧನಾಸ್‌ನಲ್ಲಿ ನಡೆದಿದೆ. ಪಾರ್ವತಿ(40) ಚಾಕು ಇರಿತಕ್ಕೊಳಗಾದ ಪತ್ನಿ. ಮಹಾರಾಜ್ ದಿನ್ ಹಲ್ಲೆ ಮಾಡಿದ ಪತಿ.
ಘಟನೆ ವಿವರ:
ದಂಪತಿ ಕೆಲವು ವರ್ಷಗಳಿಂದ ಬೇರೆಯಾಗಿ ವಾಸಿಸುತ್ತಿದ್ದರು. ಆದರೆ ಪತಿ ದೀನ್ ಅವರು ಪಾರ್ವತಿ ಅವರನ್ನುಬಲವಂತವಾಗಿ ಮತ್ತೆ ಮನೆಗೆ ಕರೆತಂದಿದ್ದರು. ಮನೆಗೆ ಬಂದ ಪಾರ್ವತಿ ಅವರು ತನ್ನ ಸೊಸೆಗೆ ಕಾಲುಂಗುರಗಳನ್ನು ಉಡುಗೊರೆಯಾಗಿ ನೀಡಿದ್ದು, ಇದಕ್ಕೆ ಕೋಪಗೊಂಡ ದೀನ್ ಅವಳೊಂದಿಗೆ ವಾಗ್ವಾದ ನಡೆಸಿ, ಅಡುಗೆ ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಅವಳ ಹೊಟ್ಟೆಗೆ ಚುಚ್ಚಿ ಹಿಂಸಾಚಾರ ಮೆರೆದು ಸ್ಥಳದಿಂದ ಪರಾರಿಯಾಗಿದ್ದಾನೆ.
ಕೂಡಲೇ ಕುಟುಂಬ ಸದಸ್ಯರು ಪಾರ್ವತಿ ಅವರನ್ನು ಜಿಎಂಎಸ್‌ಎಚ್-16 ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಾರ್ವತಿ ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ಸಂಬಂಧ ಆಕೆಯ ಮಗ ರಾಕೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಾರಂಗಪುರ ಪೊಲೀಸರು ರಕ್ತಸಿಕ್ತ ಚಾಕು ಮತ್ತು ಇತರ ಪುರಾವೆಗಳನ್ನು ಸಂಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮತ್ತು ದಿನ್ ಅವರನ್ನು ಮಂಗಳವಾರ ಬಂಧಿಸಲಾಯಿತು. ಆರೋಪಿ ಪಾರ್ವತಿಯ ಮೇಲೆ ಹಲ್ಲೆ ಮಾಡಿದ ಇತಿಹಾಸವಿದೆ ಎಂದು ಪೊಲೀಸರು ದೃಢಪಡಿಸಿದರು.
