ಹೈದರಾಬಾದ್,ಜ.8-ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಕಾಲೇಜು ವಿದ್ಯಾರ್ಥಿಗಳ ಸಾವನ್ನಪ್ಪಿದ್ದ ಭೀಕರ ಘಟನೆ ಇಲ್ಲಿನ ಮಿರ್ಜಾಗುಡ ಬಳಿ ನಡೆದಿದೆ. ಮೃತರನ್ನು ಐಸಿಎಫ್‌ಎಐ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಸೂರ್ಯತೇಜ, ಸುಮಿತ್, ಶ್ರೀನಿಖಿಲ್ ಮತ್ತು ಎಂಜಿಐಟಿಯ ವಿದ್ಯಾರ್ಥಿ ರೋಹಿತ್ ಎಂದು ಗುರುತಿಸಲಾಗಿದೆ.
ಮೋಕಿಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗಿನ ಜಾವ 1 ರಿಂದ 1.30ರ ನಡುವೆ ಈ ಘಟನೆ ಸಂಭವಿಸಿದೆ.ಪ್ರಾಥಮಿಕ ತನಿಖೆಯ ಪ್ರಕಾರ ಅತಿವೇಗವೇ ಅಪಘಾತಕ್ಕೆ ಕಾರಣ ಎಂದು ಎಂದು ಅವರು ಪೊಲೀಸರು ತಿಳಿಸಿದ್ದಾರೆ.ಸುಮಾರು 18 ರಿಂದ 21 ವರ್ಷ ವಯಸ್ಸಿನ ಐವರು ಕಾಲೇಜು ವಿದ್ಯಾರ್ಥಿಗಳು ಅತಿವೇಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದದ್ದರು ಎಂದು ಹೇಳಿದರು.
ಅಪಘಾತದಲ್ಲಿ ಐಸಿಎಫ್‌ಎಐ ವಿವಿಯ ವಿದ್ಯಾರ್ಥಿನಿ ನಕ್ಷತ್ರಾ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಘರ್ಷಣೆ ಎಷ್ಟು ತೀವ್ರವಾಗಿತ್ತೆಂದರೆ ಕಾರು ಎರಡು ಭಾಗಗಳಾಗಿ ಛಿದ್ರಗೊಂಡಿದೆ ಎಂದು ಅವರು ಹೇಳಿದರು.ಪೊಲೀಸರ ಪ್ರಕಾರ, ವಿದ್ಯಾರ್ಥಿಗಳು ಮೋಕಿಲಾದಿಂದ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.
ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಲ್ಲರು ಬಾಗಿಯಾಗಿದ್ದರು ಮತ್ತು ಇವರು ಬಿಬಿಎಂ ಮತ್ತು ಎಂಜಿನಿಯರಿಂಗ್‌ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.
