ಭೀಕರ ರಸ್ತೆ ಅಪಘಾತದಲ್ಲಿ ಶಿವಸಂಗ್ರಾಮ್ ಪಕ್ಷದ ನಾಯಕ ವಿನಾಯಕ್ ಮೇಟೆ ಸಾವು

ಮುಂಬೈ, ಆ 14 – ಇಲ್ಲಿನ ಮುಂಬೈ-ಪುಣೆ ಎಕ್ಸ್‍ಪ್ರೆಸ್ ವೇನಲ್ಲಿ ಇಂದು ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ ಶಿವಸಂಗ್ರಾಮ್ ಪಕ್ಷದ ನಾಯಕ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಮಾಜಿ ಸದಸ್ಯ ವಿನಾಯಕ್ ಮೇಟೆ (52) ಅವರು ಸಾವನ್ನಪ್ಪಿದ್ದಾರೆ . ರಾಯಗಡ ಜಿಲ್ಲೆಯ ರಸಾಯನಿ ಪೊಲೀಸ್ ಠಾಣೆ ವ್ಯಾಪ್ತಿಯ ಮಡಪ್ ಬಳಿ ಮುಂಜಾನೆ 5 ಗಂಟೆ ವೇಳೆಯಲ್ಲಿ ಪುಣೆಯಿಂದ ಮುಂಬೈಗೆ ತೆರಳುತ್ತಿದ್ದಾಗ ಅವರಿದ್ದ ಕಾರಿಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು […]