Tuesday, May 28, 2024
Homeರಾಷ್ಟ್ರೀಯಕಾರು ಅಪಘಾತದಲ್ಲಿ ಬಿಜೆಡಿ ಮುಖಂಡನಿಗೆ ಗಂಭೀರ ಗಾಯ

ಕಾರು ಅಪಘಾತದಲ್ಲಿ ಬಿಜೆಡಿ ಮುಖಂಡನಿಗೆ ಗಂಭೀರ ಗಾಯ

ಭುವನೇಶ್ವರ್, ಮಾ 15 (ಪಿಟಿಐ) : ಇಂದು ಮುಂಜಾನೆ ಒಡಿಶಾದ ಸಂಬಲ್‍ಪುರ ಜಿಲ್ಲೆಯಲ್ಲಿ ಕಾರು ಟ್ರಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಹಿರಿಯ ಬಿಜೆಡಿ ಉಪಾಧ್ಯಕ್ಷ ಮತ್ತು ಮಾಜಿ ಸಂಸದ ಪ್ರಸನ್ನ ಆಚಾರ್ಯ ಅವರಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಜಿ ಸಂಸದ ಭುವನೇಶ್ವರದಿಂದ ಸಂಬಲ್‍ಪುರಕ್ಕೆ ತೆರಳುತ್ತಿದ್ದಾಗ ರೈರಾಖೋಲ್‍ನ ಬಲದಿಹ್ ಬಳಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಅವರ ಕಾರು ಆಮ್ಲಜನಕ ತುಂಬಿದ ಟ್ಯಾಂಕರ್‍ಗೆ ಡಿಕ್ಕಿ ಹೊಡೆದಿದೆ.

ಆಚಾರ್ಯ ಮತ್ತು ಅವರ ಪಿಎಸ್‍ಒ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆಚಾರ್ಯ ಮತ್ತು ಅವರ ಪಿಎಸ್‍ಒ ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಸಂಬಲ್‍ಪುರ ಪೊಲೀಸ್ ವರಿಷ್ಠಾಧಿಕಾರಿ ಮುಖೇಶ್ ಭಾಮು ತಿಳಿಸಿದ್ದಾರೆ.

ಉತ್ತಮ ಚಿಕಿತ್ಸೆಗಾಗಿ ಅವರನ್ನು ವಿಮಾನದಲ್ಲಿ ಭುವನೇಶ್ವರಕ್ಕೆ ಕರೆದೊಯ್ಯಲಾಗುತ್ತದೆ. ಆಚಾರ್ಯ ಅವರ ತಲೆ, ಮೂಗು, ಗಲ್ಲದ ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಏತನ್ಮಧ್ಯೆ, ಪೊಲೀಸರು ಟ್ರಕ್ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

RELATED ARTICLES

Latest News