Tuesday, December 3, 2024
Homeರಾಜ್ಯಬಿಜೆಪಿ ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬಿಜೆಪಿ ಶಾಸಕ ಪ್ರಭು ಚೌಹಾಣ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬೀದರ್,ಮಾ.14: ಔರಾದ್ ವಿಧಾನಸಭ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೆ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ 3 ದಿನದ ಹಿಂದೆ ಔರಾದ್ ತಮ್ಮ ನಿವಾಸದಲ್ಲಿದ್ದ ವೇಳೆ ಪ್ರಭು ಚೌಹಾಣ್ ಅವರ ಎದೆ ಬಡಿತದಲ್ಲಿ ಏರುಪೇರಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮುಂಬೈನ ಬಾಂದ್ರಾದ ಹೋಲಿ ಫ್ಯಾಮಿಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಾ.ಎಸ್ ಲೋಖಂಡವಾಲಾ ನೇತೃತ್ವದಲ್ಲಿ ಪ್ರಭು ಚೌಹಾಣ್ ಗೆ ಕಿರು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಚಿಕಿತ್ಸೆ ಯಶಸ್ವಿಯಾಗಿದೆ. ಸದ್ಯ ಪ್ರಭು ಚೌಹಾಣ್ ಆರೋಗ್ಯ ಸ್ಛಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಬೀದರ್ ಕ್ಷೇತ್ರದಿಂದ ಭಗವಂತ್ ಖೂಬಾಗೆ ಟಿಕೆಟ್ ನೀಡಬೇಡಿ ಎಂದು ಪ್ರಭು ಚೌಹಾಣ್ ಪಟ್ಟು ಹಿಡಿದಿದ್ದರು. ಅಲ್ಲದೇ ಖುದ್ದು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಕಾಲಿಗೆ ಬಿದ್ದು ಬೇಡಿಕೊಂಡಿದ್ದರು. ಆದ್ರೆ, ಬಿಜೆಪಿ ಹೈಕಮಾಂಡ್, ಮತ್ತೆ ಬೀದರ್‍ಟಿಕೆಟ್‍ಭಗವಂತ್ ಖೂಬಾಗೆ ನೀಡಲಾಗಿದೆ.

RELATED ARTICLES

Latest News