Thursday, January 16, 2025
Homeರಾಷ್ಟ್ರೀಯ | Nationalಅಧಿಕಾರ ಸ್ವೀಕರಿಸಿದ ನೂತನ ಚುನಾವಣಾ ಆಯುಕ್ತರು

ಅಧಿಕಾರ ಸ್ವೀಕರಿಸಿದ ನೂತನ ಚುನಾವಣಾ ಆಯುಕ್ತರು

ನವದೆಹಲಿ, ಮಾ.15 (ಪಿಟಿಐ) : ನೂತನ ಚುನಾವಣಾ ಆಯುಕ್ತರಾದ ಜ್ಞಾನೇಶ್ ಕುಮಾರ್ ಮತ್ತು ಸುಖ್ಬೀರ್ ಸಿಂಗ್ ಸಂಧು ಇಂದು ಅಧಿಕಾರ ಸ್ವೀಕರಿಸಿದರು. ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಇಸಿಗಳ ನೇಮಕಾತಿಯ ಹೊಸ ಕಾನೂನು ಜಾರಿಗೆ ಬಂದ ನಂತರ ಚುನಾವಣಾ ಸಮಿತಿಯ ಸದಸ್ಯರಾಗಿ ನೇಮಕಗೊಂಡ ಮೊದಲ ವ್ಯಕ್ತಿಗಳು ಇವರಾಗಿದ್ದಾರೆ.

ಅವರನ್ನು ಸ್ವಾಗತಿಸಿದ ಸಿಇಸಿ ರಾಜೀವ್ ಕುಮಾರ್ ಅವರು, ಚುನಾವಣಾ ಆಯೋಗವು ಲೋಕಸಭೆ ಚುನಾವಣೆ ನಡೆಸಲು ಸಜ್ಜಾಗಿರುವ ಐತಿಹಾಸಿಕ ಘಟ್ಟದಲ್ಲಿ ಅವರ ಸೇರ್ಪಡೆಯ ಮಹತ್ವದ ಕುರಿತು ಮಾತನಾಡಿದರು ಎಂದು ವಕ್ತಾರರು ತಿಳಿಸಿದ್ದಾರೆ.

ಫೆಬ್ರವರಿ 14 ರಂದು ಅನುಪ್ ಚಂದ್ರ ಪಾಂಡೆ ನಿವೃತ್ತಿ ಮತ್ತು ಮಾರ್ಚ್ 8 ರಂದು ಅರುಣ್ ಗೋಯೆಲ್ ಅವರು ಹಠಾತ್ ರಾಜೀನಾಮೆ ನೀಡಿದ ನಂತರ ಚುನಾವಣಾ ಆಯೋಗದಲ್ಲಿ ಎರಡು ಆಯುಕ್ತರ ಹುದ್ದೆಗಳು ಖಾಲಿ ಇದ್ದವು. 1988ರ ಬ್ಯಾಚ್ನ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸಂಧು ಕ್ರಮವಾಗಿ ಕೇರಳ ಮತ್ತು ಉತ್ತರಾಖಂಡ್ ಕೇಡರ್ಗೆ ಸೇರಿದವರಾಗಿದ್ದಾರೆ.

RELATED ARTICLES

Latest News