Homeರಾಷ್ಟ್ರೀಯಒಗ್ಗಟ್ಟು ಪ್ರದರ್ಶನಕ್ಕೆ ಇಂಡಿ ಒಕ್ಕೂಟ ಸಜ್ಜು : ರಾಮ್‌ಲೀಲಾ ಮೈದಾನದಲ್ಲಿ ನ.1 ರಂದು ಬೃಹತ್ ರ‍್ಯಾಲಿ

ಒಗ್ಗಟ್ಟು ಪ್ರದರ್ಶನಕ್ಕೆ ಇಂಡಿ ಒಕ್ಕೂಟ ಸಜ್ಜು : ರಾಮ್‌ಲೀಲಾ ಮೈದಾನದಲ್ಲಿ ನ.1 ರಂದು ಬೃಹತ್ ರ‍್ಯಾಲಿ

ನವದೆಹಲಿ, ಅ.24- ಮತ ಕಳ್ಳತನದ ವಿರುದ್ಧ ನವೆಂಬರ್‌ 1 ರಂದು ನಡೆಯಲಿರುವ ಇಂಡಿ ಒಕ್ಕೂಟದ ರ್ಯಾಲಿಯು, ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಮತ ಕಳ್ಳರನ್ನು ಅಧಿಕಾರದಿಂದ ಹೊರಹಾಕಲು ನಾವು ಒಗ್ಗಟ್ಟಾಗಿದ್ದೇವೆ ಎಂಬ ಪ್ರಬಲ ಸಂದೇಶವನ್ನು ರವಾನಿಸಲಿದೆ ಎಂದು ಕಾಂಗ್ರೆಸ್‌‍ ಪ್ರತಿಪಾದಿಸಿದೆ.

ರಾಮ್‌ಲೀಲಾ ಮೈದಾನದಲ್ಲಿ ನಡೆಯಲಿರುವ ಈ ರ್ಯಾಲಿಯ ಸಿದ್ಧತೆಗಳನ್ನು ಪರಿಶೀಲಿಸಲು, ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿಗಳಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಕೆ.ಸಿ. ವೇಣುಗೋಪಾಲ್‌ ಅವರು ಇಲ್ಲಿನ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದ ಪಕ್ಷದ ನಾಯಕರೊಂದಿಗೆ ಸಭೆ ನಡೆಸಿದರು.

ಉತ್ತರ ಪ್ರದೇಶದ ನಾಯಕರೊಂದಿಗಿನ ಸಭೆಯಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಾಜೇಂದ್ರ ಪಾಲ್‌ ಗೌತಮ್‌‍, ಮಾಜಿ ಯುಪಿಸಿಸಿ ಮುಖ್ಯಸ್ಥ ಅಜಯ್‌ ರೈ, ರಾಜ್ಯ ಕಾಂಗ್ರೆಸ್‌‍ ಕಾರ್ಯಾಧ್ಯಕ್ಷ ಇಮ್ರಾನ್‌ ಮಸೂದ್‌, ಹಿರಿಯ ನಾಯಕರಾದ ಸಲ್ಮಾನ್‌ ಖುರ್ಷಿದ್‌ ಮತ್ತು ಅಜಯ್‌ ಲಲ್ಲು ಸೇರಿದಂತೆ ಹಲವರು ಭಾಗವಹಿಸಿದ್ದರು.

ಹರಿಯಾಣದ ನಾಯಕರೊಂದಿಗಿನ ಸಭೆಯಲ್ಲಿ ಎಐಸಿಸಿ ಉಸ್ತುವಾರಿ ಸಂಜಯ್‌ ದತ್‌, ಪಿಸಿಸಿ ಅಧ್ಯಕ್ಷ ರಾವ್‌ ನರೇಂದರ್‌ ಸಿಂಗ್‌, ಕಾಂಗ್ರೆಸ್‌‍ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಮತ್ತು ಸಂಸದ ದೀಪೇಂದರ್‌ ಹೂಡಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇಂದು ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸೇರಿ, ಎಐಸಿಸಿ ಉಸ್ತುವಾರಿ ರಾಜೇಂದ್ರ ಪಾಲ್‌ ಗೌತಮ್‌, ಯುಪಿ ಪಿಸಿಸಿ ಅಧ್ಯಕ್ಷೆ ಆರಾಧನಾ ಮಿಶ್ರಾ-ಮೋನಾ ಮತ್ತು ಯುಪಿ
ಕಾಂಗ್ರೆಸ್‌‍ನ ಹಿರಿಯ ನಾಯಕರನ್ನು ಭೇಟಿಯಾದೆನು. ನವೆಂಬರ್‌ 1 ರಂದು ನಡೆಯಲಿರುವ ಇಂಡಿ ಒಕ್ಕೂಟದ ಬೃಹತ್‌ ರ್ಯಾಲಿಗೆ (ಮತ ಕಳ್ಳತನದ ವಿರುದ್ಧ) ಜನರನ್ನು ಸಜ್ಜುಗೊಳಿಸುವ ಕುರಿತು ನಾವು ಚರ್ಚಿಸಿದೆವು, ಎಂದು ವೇಣುಗೋಪಾಲ್‌ ಎಕ್‌್ಸನಲ್ಲಿ ತಿಳಿಸಿದ್ದಾರೆ.

RELATED ARTICLES
spot_img

Latest News